AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಲು ಅರ್ಜುನ್ ಸಿನಿಮಾನಲ್ಲಿ ನಟಿಸಲಿರುವ ಹಾಲಿವುಡ್ ಸೂಪರ್ ಸ್ಟಾರ್

Allu Arjun movie: ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳನ್ನು ತಲುಪಿವೆ. ಈಗ ಹಾಲಿವುಡ್ ಸೆಲೆಬ್ರಿಟಿಗಳು ಸಹ ಭಾರತದ ಸಿನಿಮಾಗಳಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಲು ಮುಂದಾಗುತ್ತಿದ್ದಾರೆ. ಈಗಾಗಲೇ ವಿಜಯ್ ದೇವರಕೊಂಡ ಸಿನಿಮಾನಲ್ಲಿ ‘ದಿ ಮಮ್ಮಿ’ ಖ್ಯಾತಿಯ ಅರ್ನಾಲ್ಡ್ ವೋಸ್ಲೋ ನಟಿಸುತ್ತಿದ್ದಾರೆ. ತಮಿಳಿನ ಧನುಶ್ ನಟನೆಯ ‘ಜಗಮೇ ತಂದಿರಮ್’ನಲ್ಲಿ ಜೇಮ್ಸ್ ಕಾಸ್ಮೊ ನಟಿಸಿದ್ದರು. ಇದೀಗ ಅವರಿಗೂ ದೊಡ್ಡ ಸ್ಟಾರ್ ಒಬ್ಬರು ಅಲ್ಲು ಅರ್ಜುನ್ ಜೊತೆಗೆ ನಟಿಸಲಿದ್ದಾರೆ.

ಅಲ್ಲು ಅರ್ಜುನ್ ಸಿನಿಮಾನಲ್ಲಿ ನಟಿಸಲಿರುವ ಹಾಲಿವುಡ್ ಸೂಪರ್ ಸ್ಟಾರ್
Allu Arjun
ಮಂಜುನಾಥ ಸಿ.
|

Updated on: Aug 19, 2026 | 7:45 PM

Share

ಭಾರತೀಯ ಚಿತ್ರರಂಗ (Indian Movie Industry) ಈಗ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ವಿಶೇಷವಾಗಿ ದಕ್ಷಿಣ ಭಾಷಾ ಸಿನಿಮಾಗಳು ಬಾಲಿವುಡ್ಡಿಗಿಂತಲೂ ಹೆಚ್ಚು ಜನಪ್ರಿಯತೆ ಗಳಿಸಿಕೊಳ್ಳುತ್ತಿವೆ. ಕನ್ನಡದ ‘ಕೆಜಿಎಫ್’, ‘ಆರ್​​ಆರ್​​ಆರ್’, ‘ಪುಷ್ಪ’ ಇನ್ನೂ ಹಲವು ಸಿನಿಮಾಗಳು ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಸಹ ಮೋಡಿ ಮಾಡಿವೆ. ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳನ್ನು ತಲುಪಿವೆ. ಈಗ ಹಾಲಿವುಡ್ ಸೆಲೆಬ್ರಿಟಿಗಳು ಸಹ ಭಾರತದ ಸಿನಿಮಾಗಳಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಲು ಮುಂದಾಗುತ್ತಿದ್ದಾರೆ. ಈಗಾಗಲೇ ವಿಜಯ್ ದೇವರಕೊಂಡ ಸಿನಿಮಾನಲ್ಲಿ ‘ದಿ ಮಮ್ಮಿ’ ಖ್ಯಾತಿಯ ಅರ್ನಾಲ್ಡ್ ವೋಸ್ಲೋ ನಟಿಸುತ್ತಿದ್ದಾರೆ. ತಮಿಳಿನ ಧನುಶ್ ನಟನೆಯ ‘ಜಗಮೇ ತಂದಿರಮ್’ನಲ್ಲಿ ಜೇಮ್ಸ್ ಕಾಸ್ಮೊ ನಟಿಸಿದ್ದರು. ಇದೀಗ ಅವರಿಗೂ ದೊಡ್ಡ ಸ್ಟಾರ್ ಒಬ್ಬರು ಅಲ್ಲು ಅರ್ಜುನ್ ಜೊತೆಗೆ ನಟಿಸಲಿದ್ದಾರೆ.

ಅಲ್ಲು ಅರ್ಜುನ್ ಪ್ರಸ್ತುತ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಆ ಸಿನಿಮಾವನ್ನು ತಮಿಳಿನ ಸ್ಟಾರ್ ನಿರ್ದೇಶಕ ಅಟ್ಲಿ ನಿರ್ದೇಶಿಸುತ್ತಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಪ್ರಚಾರದ ಗಿಮಿಕ್​​ಗಳನ್ನು ಮಾಡುವಲ್ಲಿ ಅವರು ನಿಸ್ಸೀಮರು. ಈಗಾಗಲೇ ‘ರಾಕಾ’ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ಜಾನ್ಹವಿ ಕಪೂರ್, ಮೃಣಾಲ್ ಠಾಕೂರ್ ಅವರುಗಳನ್ನು ನಾಯಕಿಯರನ್ನಾಗಿ ಹಾಕಿಕೊಂಡಿದ್ದಾರೆ. ಇಷ್ಟು ದೊಡ್ಡ ಪಾತ್ರವರ್ಗ ಇರುವಾಗ ಇದೀಗ ಹಾಲಿವುಡ್ ಸ್ಟಾರ್ ಅನ್ನು ಸಹ ತಮ್ಮ ಸಿನಿಮಾಕ್ಕೆ ಹಾಕಿಕೊಂಡಿದ್ದಾರೆ.

ಆಸ್ಕರ್ ವಿಜೇತ ನಟ ವಿಲ್ ಸ್ಮಿತ್ ಅವರು ಅಲ್ಲು ಅರ್ಜುನ್ ನಟನೆಯ ‘ರಾಕಾ’ ಸಿನಿಮಾನಲ್ಲಿ ನಟಿಸಲಿದ್ದಾರೆ. ವಿಲ್ ಸ್ಮಿತ್ ಅವರು ಹಾಲಿವುಡ್​​ನ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿರುವ ಅತ್ಯಂತ ದುಬಾರಿ ನಟ. ಇದೀಗ ಅವರು ಅಲ್ಲು ಅರ್ಜುನ್ ಸಿನಿಮಾನಲ್ಲಿ ನಟಿಸುತ್ತಿರುವುದು ಸಿನಿಮಾಕ್ಕೆ ದೊಡ್ಡ ಬೂಸ್ಟ್ ತಂದುಕೊಡಲಿದೆ. ಅದರಲ್ಲೂ ಹಾಲಿವುಡ್ ಮಾರುಕಟ್ಟೆಯಲ್ಲಿ ಸಿನಿಮಾಕ್ಕೆ ದೊಡ್ಡ ಮಟ್ಟದ ಬೂಸ್ಟ್ ಸಿಗಲಿದೆ.

ಇದನ್ನೂ ಓದಿ:ಚಿತ್ರರಂಗದಲ್ಲಿ ನಾಯಕನಾಗಿ ಹತ್ತು ವರ್ಷ; ವಿಜಯ್ ದೇವರಕೊಂಡ ಭಾವುಕ ಪೋಸ್ಟ್ ವೈರಲ್

ವಿಲ್ ಸ್ಮಿತ್ ಅವರಿಗೆ ಸಹ ಭಾರತದ ಸಿನಿಮಾ ಹೊಸದೇನೂ ಅಲ್ಲ. ಈ ಹಿಂದೆ ಅವರು 2019 ರಲ್ಲಿ ಬಿಡುಗಡೆ ಆಗಿದ್ದ ‘ಸ್ಟೂಡೆಂಟ್ ಆಫ್ ದಿ ಇಯರ್ 2’ ಸಿನಿಮಾನಲ್ಲಿ ವಿಲ್ ಸ್ಮಿತ್ ನಟಿಸಿದ್ದರು. ಬೇರೆ ಬೇರೆ ಸಂದರ್ಭಗಳಲ್ಲಿ ಅವರು ಭಾರತಕ್ಕೆ ಭೇಟಿ ಸಹ ನೀಡಿದ್ದು ಇದೆ. ಕೆಲ ತಿಂಗಳುಗಳ ಹಿಂದಷ್ಟೆ ವಿಲ್ ಸ್ಮಿತ್ ಅವರು ಗಣಪತಿಯ ವಜ್ರದ ಪುಟ್ಟ ಮೂರ್ತಿಯನ್ನು ಖರೀದಿ ಮಾಡಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು. ಭಾರತದ ಬಗ್ಗೆ ಪ್ರೀತಿ, ಗೌರವ ಉಳ್ಳ ನಟರಾಗಿದ್ದಾರೆ ವಿಲ್ ಸ್ಮಿತ್. ಇದೀಗ ಅವರು ದಕ್ಷಿಣ ಭಾರತದ ಸಿನಿಮಾನಲ್ಲಿ ನಟಿಸುತ್ತಿರುವುದು ಹೆಮ್ಮೆಯ ವಿಷಯ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಮೋಸ ಮಾಡಿ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗಗನ್ ಚಿನ್ನಪ್ಪ
ಮೋಸ ಮಾಡಿ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗಗನ್ ಚಿನ್ನಪ್ಪ
ಲೂಟಿ ಹಣದಲ್ಲಿ ಗೆಳತಿಗ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ!
ಲೂಟಿ ಹಣದಲ್ಲಿ ಗೆಳತಿಗ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ!
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್​ವೇ ಫ್ಲೈಓವರ್‌‌ನಿಂದ ಕೆಳಗೆ ಬಿದ್ದ ಕಾರು
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್​ವೇ ಫ್ಲೈಓವರ್‌‌ನಿಂದ ಕೆಳಗೆ ಬಿದ್ದ ಕಾರು
ಪ್ರತಿ ಲೀಟರ್‌ ಹಾಲಿನ ದರ ₹8 ಹೆಚ್ಚಳಕ್ಕೆ ಹಾಲು ಒಕ್ಕೂಟಗಳ ಆಗ್ರಹ
ಪ್ರತಿ ಲೀಟರ್‌ ಹಾಲಿನ ದರ ₹8 ಹೆಚ್ಚಳಕ್ಕೆ ಹಾಲು ಒಕ್ಕೂಟಗಳ ಆಗ್ರಹ