‘ಗಂಡನ ಪ್ರಾಣ ಉಳಿಸಿದ್ರು ಸುದೀಪಣ್ಣ’; ಕಣ್ಣೀರು ಹಾಕುತ್ತ ಕಿಚ್ಚನಿಗೆ ಧನ್ಯವಾದ ತಿಳಿಸಿದ ಅಭಿಮಾನಿ ಸೌಮ್ಯ

|

Updated on: May 16, 2021 | 9:30 AM

kichcha Sudeep: ‘ಮುಂದಿನ ಜನ್ಮದಲ್ಲೂ ನಾನು ನಿಮ್ಮ ಅಭಿಮಾನಿಯಾಗಿ ಹುಟ್ಟುತ್ತೇನೆ. ಸಾಯೋವರೆಗೆ ನಮ್ಮ ಮನೆಯಲ್ಲಿ ನಿಮ್ಮ ಹೆಸರು ಹೇಳಿಕೊಂಡು ದೀಪ ಹಚ್ಚುತ್ತೇನೆ’ ಎಂದು ಸುದೀಪ್​ಗೆ ಸೌಮ್ಯ ಭಾವುಕವಾಗಿ ಧನ್ಯವಾದ ತಿಳಿಸಿದ್ದಾರೆ.

‘ಗಂಡನ ಪ್ರಾಣ ಉಳಿಸಿದ್ರು ಸುದೀಪಣ್ಣ’; ಕಣ್ಣೀರು ಹಾಕುತ್ತ ಕಿಚ್ಚನಿಗೆ ಧನ್ಯವಾದ ತಿಳಿಸಿದ ಅಭಿಮಾನಿ ಸೌಮ್ಯ
ಅಭಿಮಾನಿ ಸೌಮ್ಯ - ಕಿಚ್ಚ ಸುದೀಪ್​
Follow us on

ಅನಾರೋಗ್ಯಕ್ಕೆ ಒಳಗಾಗಿದ್ದ ಕಿಚ್ಚ ಸುದೀಪ್​ ಅವರು ಈಗ ಚೇತರಿಸಿಕೊಂಡಿದ್ದಾರೆ. ಒಂದು ತಿಂಗಳ ಕಾಲ ಅವರು ಸಂಪೂರ್ಣ ವಿಶ್ರಾಂತಿ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು. ಈ ಕಷ್ಟದ ಸಂದರ್ಭದಲ್ಲಿಯೂ ಅವರು ಅಭಿಮಾನಿಗಳನ್ನು ಮರೆತಿಲ್ಲ. ಸದ್ಯ ಎಲ್ಲೆಲ್ಲೂ ಕೊರೊನಾ ವೈರಸ್​ ತಾಂಡವ ಆಡುತ್ತಿದೆ. ಅದರಿಂದ ಜನರು ಆಸ್ಪತ್ರೆ ಬಿಲ್​ ಕಟ್ಟಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದಾರೆ. ಅಂತಹ ಅನೇಕರಿಗೆ ಕಿಚ್ಚ ಸುದೀಪ್​ ಅವರಿಂದ ಸಹಾಯ ಆಗಿದೆ. ಕೆಲವೇ ದಿನಗಳ ಹಿಂದೆ ನಟಿ ಸೋನು ಪಾಟೀಲ್​ ಅವರ ತಾಯಿಯ ಚಿಕಿತ್ಸೆಗೆ ಸುದೀಪ್​ ಹಣ ನೀಡಿದ್ದರು. ಈಗ ಮತ್ತೋರ್ವ ಮಹಿಳಾ ಅಭಿಮಾನಿಯ ಕುಟುಂಬದ ಪಾಲಿಗೆ ಕಿಚ್ಚ ರಿಯಲ್​ ಹೀರೋ ಆಗಿದ್ದಾರೆ. ಆ ಬಗ್ಗೆ ಸುದೀಪ್​ ಅಭಿಮಾನಿ ಸೌಮ್ಯ ಅವರು ವಿಡಿಯೋ ಮೂಲಕ ಭಾವುಕರಾಗಿ ಧನ್ಯವಾದ ತಿಳಿಸಿದ್ದಾರೆ.

‘ನನ್ನ ಪರಿಸ್ಥಿತಿ ಚೆನ್ನಾಗಿ ಇರಲಿಲ್ಲ. ನನ್ನ ಗಂಡನಿಗೆ ಕಳೆದ ತಿಂಗಳು ಬ್ಲಡ್​ ಇನ್​ಫೆಕ್ಷನ್​ ಆಗಿ ಆಸ್ಪತ್ರೆಗೆ ಸೇರಿಸಿದ್ದೆವು. ನಂತರ ವಾಸಿ ಆಗಿತ್ತು. ಡಿಸ್ಚಾರ್ಜ್​ ಮಾಡಿ ಮನೆಗೆ ಕರೆದುಕೊಂಡು ಬಂದಿದ್ದೆವು. ತುಂಬ ಖರ್ಚು ಆಗಿತ್ತು. ಅಷ್ಟರಲ್ಲಿ ಕೊರೊನಾ ಬಂತು. ನನಗೆ, ಗಂಡನಿಗೆ, ಅಮ್ಮನಿಗೆ ಪಾಸಿಟಿವ್​ ಆಯಿತು. ಆ ಟೈಮ್​ನಲ್ಲಿ ಅವರನ್ನು ಮತ್ತೆ ಆಸ್ಪತ್ರೆಗೆ ಸೇರಿಸುವ ಸಂದರ್ಭ ಬಂತು. ಆದರೆ ರೆಮಿಡಿಸಿವರ್​ ಇಂಜಕ್ಷನ್​ ತಂದರೆ ಮಾತ್ರ ಆಡ್ಮಿಟ್​ ಮಾಡಿಕೊಳ್ಳುತ್ತೇವೆ ಎಂದು ಆಸ್ಪತ್ರೆಯವರು ಹೇಳಿದರು’ ಎಂದಿದ್ದಾರೆ ಸೌಮ್ಯ.

‘ಅದು ಖಾಸಗಿ ಆಸ್ಪತ್ರೆ. ರೆಮಿಸಿಡಿವರ್​ಗಾಗಿ ಎಲ್ಲ ಕಡೆ ಹುಡುಕಿದರೂ ಸಿಗಲಿಲ್ಲ. ಕಡೆಗೆ ಬ್ಲಾಕ್​ನಲ್ಲಿ 20 ಸಾವಿರ ರೂಪಾಯಿ ಕೊಟ್ಟು ಇಂಜೆಕ್ಷನ್​ ಪಡೆದುಕೊಂಡ್ವಿ. ಅಲ್ಲೇ ನಮಗೆ ಒಂದೂವರೆ ಲಕ್ಷ ಖರ್ಚಾಯಿತು. 50 ಸಾವಿರ ಅಡ್ವಾನ್ಸ್​ ಕಟ್ಟಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ನಮಗೆ ತುಂಬ ಕಷ್ಟ ಆಯಿತು. ಹೇಗೋ ಕಷ್ಟಪಟ್ಟು ದುಡ್ಡು ಕಟ್ಟಿದ್ವಿ. 6 ದಿನ ಟ್ರೀಟ್​ಮೆಂಟ್​ ಕೊಟ್ಟರು. ಇನ್ನೂ ಎರಡು ಇಂಜೆಕ್ಷನ್​ ಬೇಕು ಅಂದ್ರು. ಕಡೆಗೆ ಡಿಸ್ಚಾರ್ಜ್​ ಮಾಡಿದಾಗ ಒಂದು ಲಕ್ಷದ ಮೂವತ್ತು ಸಾವಿರ ಬಿಲ್​ ಆಗಿತ್ತು. ಅಷ್ಟು ಹಣ ಕಟ್ಟಲು ನಮಗೆ ಆಗಲಿಲ್ಲ. ಫ್ಯಾಮಿಲಿ ಮತ್ತು ಫ್ರೆಂಡ್ಸ್​ ಕೇಳಿದರೆ ಯಾರಿಂದಲೂ ಸಹಾಯ ಆಗಲಿಲ್ಲ’ ಎಂದು ಸೌಮ್ಯ ಕಣ್ಣೀರು ಹಾಕಿದ್ದಾರೆ.

‘ನಾನು ಸುದೀಪ್​ ಸರ್​ಗೆ 10 ವರ್ಷದಿಂದ ಅಭಿಮಾನಿ. ಅವರು ಎಲ್ಲರಿಗೂ ಸಹಾಯ ಮಾಡೋದನ್ನು ನಾನು ನೋಡಿದ್ದೆ. ಮೊದಲು ಮಾನವನಾಗು ಟ್ರಸ್ಟ್​ಗೆ ಕಾಲ್​ ಮಾಡಿದೆ. ಕಿಟ್ಟಿ ಅವರು ನನಗೆ ತುಂಬ ಸಹಾಯ ಮಾಡಿದರು. ಕಿರಣ್​ ಅಣ್ಣ ದಿನ ಪರಿಸ್ಥಿತಿ ವಿಚಾರಿಸುತ್ತಿದ್ದರು. ಕಿಟ್ಟಿ ಅವರಿಂದ ವಿಷಯ ತಿಳಿದುಕೊಂಡ ಸುದೀಪ್​ ಅವರು ಕೂಡಲೇ ನಮಗೆ ಸಹಾಯ ಮಾಡಿದರು. ನನ್ನ ಆಯಸ್ಸು ಎಲ್ಲವೂ ನಿಮಗೆ ಸಿಗಲಿ. ಮುಂದಿನ ಜನ್ಮದಲ್ಲೂ ನಾನು ನಿಮ್ಮ ಅಭಿಮಾನಿಯಾಗಿ ಹುಟ್ಟುತ್ತೇನೆ. ಸಾಯೋವರೆಗೆ ನಮ್ಮ ಮನೆಯಲ್ಲಿ ನಿಮ್ಮ ಹೆಸರು ಹೇಳಿಕೊಂಡು ದೀಪ ಹಚ್ಚುತ್ತೇನೆ’ ಎಂದು ಕಿಚ್ಚನಿಗೆ ಸೌಮ್ಯ ಭಾವುಕವಾಗಿ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ:

Kichcha Sudeep: ಬಿಗ್​ ಬಾಸ್​ ಸ್ಪರ್ಧಿ ಸೋನು ಪಾಟೀಲ್​ ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂ. ನೀಡಿದ ಕಿಚ್ಚ ಸುದೀಪ್​

Kichcha Sudeep: ಕೊರೊನಾದಿಂದ ಸುದೀಪ್​ ಗುಣಮುಖ; ಕಷ್ಟದ ದಿನಗಳನ್ನು ಎದುರಿಸಿ ಬಂದ ಕಿಚ್ಚ ಹೇಳಿದ್ದೇನು?