ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿದ ‘K46’ ಸಿನಿಮಾ ಪ್ರೋಮೋ; ಒಟ್ಟೂ ಕಂಡ ವೀಕ್ಷಣೆ ಎಷ್ಟು?

|

Updated on: Jul 03, 2023 | 11:58 AM

K46 Promo: ‘K46’ ಟೀಸರ್ ನೋಡಿದ ಅನೇಕರು ಮೆಚ್ಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಸೇರಿ ಅನೇಕ ಸೆಲೆಬ್ರಿಟಿಗಳು ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿದ ‘K46’ ಸಿನಿಮಾ ಪ್ರೋಮೋ; ಒಟ್ಟೂ ಕಂಡ ವೀಕ್ಷಣೆ ಎಷ್ಟು?
ಸುದೀಪ್
Follow us on

ಕಿಚ್ಚ ಸುದೀಪ್ ನಟನೆಯ ‘K46’ ಸಿನಿಮಾದ ಪ್ರೋಮೋ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋ ಎಲ್ಲಾ ಭಾಷೆಗಳಲ್ಲಿ ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ. ಸುದೀಪ್ (Sudeep) ಅವರು ಸಖತ್ ರಗಡ್ ಆಗಿ ಗಮನ ಸೆಳೆದಿದ್ದಾರೆ. ಈ ಚಿತ್ರದ ಟೀಸರ್ ಕನ್ನಡ ಮಾತ್ರವಲ್ಲದೆ ಹಿಂದಿ, ಮಲಯಾಳಂ ಸೇರಿ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ. ಈ ಟೀಸರ್ ನೋಡಿದವರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಟೀಸರ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಈ ಮೂಲಕ ಸುದೀಪ್ ಸಿನಿಮಾ ಮೇಲಿರುವ ನಿರೀಕ್ಷೆ ಹೆಚ್ಚಾಗಿದೆ.

ಸದ್ಯ ಪ್ಯಾನ್ ಇಂಡಿಯಾ ಟ್ರೆಂಡ್ ಜೋರಾಗಿದೆ. ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿತ್ತು. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ‘K46’ ಟೀಸರ್ ರಿಲೀಸ್ ಆಗಿದೆ. ಈವರೆಗೆ (ಜುಲೈ 3, 11.30AM) ಕನ್ನಡದಲ್ಲಿ ಈ ಪ್ರೋಮೋ 27 ಲಕ್ಷ, ಹಿಂದಿಯಲ್ಲಿ 15 ಲಕ್ಷ, ತೆಲುಗಿನಲ್ಲಿ 5.6 ಲಕ್ಷ, ತಮಿಳಿನಲ್ಲಿ 4.1 ಲಕ್ಷ ಹಾಗೂ ಮಲಯಾಳಂನಲ್ಲಿ 84 ಸಾವಿರ ಬಾರಿ ವೀಕ್ಷಣೆ ಕಂಡಿದೆ. ಈ ಮೂಲಕ ಎಲ್ಲಾ ಭಾಷೆಗಳಿಂದ ಈ ಟೀಸರ್ 52 ಲಕ್ಷ ಬಾರಿ ವೀಕ್ಷಣೆ ಕಂಡಿದೆ.

‘K46’ ಟೀಸರ್ ನೋಡಿದ ಅನೇಕರು ಮೆಚ್ಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಸೇರಿ ಅನೇಕ ಸೆಲೆಬ್ರಿಟಿಗಳು ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ವಾವ್! ದೊಡ್ಡ ಕಥೆಯ ಚಿಕ್ಕ ಸಿಚುಯೇಷನ್ನೇ ಇಷ್ಟು ರೊಚಕವಾಗಿದ್ರೆ, ಸಿನಿಮಾಗೆ ಕಾಯ್ತಿರೋ ಫ್ಯಾನ್ಸ್ ಸಿಚುಯೇಷನ್ ಏನಾಗ್ಬೇಕು’ ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ. ಹಲವು ಸೆಲೆಬ್ರಿಟಿಗಳು ಈ ಚಿತ್ರಕ್ಕಾಗಿ ಕಾದಿದ್ದಾರೆ.

ಇದನ್ನೂ ಓದಿ: Kiccha 46 Teaser: ‘ನಾನು ಮನುಷ್ಯ ಅಲ್ಲ, ರಾಕ್ಷಸ’: ‘ಕಿಚ್ಚ 46’ ಟೀಸರ್​ನಲ್ಲಿ ಸುದೀಪ್​ ಆರ್ಭಟ

ಸುದೀಪ್ ಅವರು ಬ್ಯಾಕ್​ ಟು ಬ್ಯಾಕ್ 3 ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈ ಪೈಕಿ ಒಂದು ಸಿನಿಮಾ ಬಗ್ಗೆ ಘೋಷಣೆ ಆಗಿದೆ. ಇನ್ನೂ ಎರಡು ಸಿನಿಮಾಗಳ ಕುರಿತು ಘೋಷಣೆ ಆಗಲಿ ಫ್ಯಾನ್ಸ್ ಕಾಯುತ್ತಿದ್ದಾರೆ. ‘K46’ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡುತ್ತಿದ್ದಾರೆ. ವಿ ಕ್ರಿಯೇಷನ್ಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಅಜ್ನೀಶ್ ಲೋಕನಾಥ್ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ