
ಹೇಮಂತ್ ಎಂ. ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಜನಮನ ಗೆದ್ದಿದೆ. ಅಲ್ಲದೇ ಕಿಚ್ಚ ಸುದೀಪ್ (Kichcha Sudeep) ಕೂಡ ಈ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಚಿತ್ರ ನೋಡಿದ ಬಳಿಕ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ಇಡೀ ತಂಡಕ್ಕೆ ಅವರು ಹೊಗಳಿಕೆಯ ಮಳೆ ಸುರಿಸಿದ್ದಾರೆ. ವಿಶೇಷವಾಗಿ ನಟ, ನಿರ್ಮಾಪಕನಾಗಿ ರಕ್ಷಿತ್ ಶೆಟ್ಟಿ (Rakshit Shetty) ಅವರ ಪ್ರಯತ್ನವನ್ನು ಸುದೀಪ್ ಕೊಂಡಾಡಿದ್ದಾರೆ. ನಟಿಯರಾದ ಚೈತ್ರಾ ಜೆ. ಆಚಾರ್ ಮತ್ತು ರುಕ್ಮಿಣಿ ಅವರಿಗೂ ಸುದೀಪ್ ಕಡೆಯಿಂದ ಶ್ಲಾಘನೆ ಸಿಕ್ಕಿದೆ. ಇದರಿಂದ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ (SSE Side B) ಸಿನಿಮಾ ತಂಡದ ಬಲ ಹೆಚ್ಚಾಗಿದೆ.
‘ಅತ್ಯುತ್ತಮ ನಟನೆ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಛಾಯಾಗ್ರಹಣ. ಇಂಥ ಸಿನಿಮಾ ಮಾಡಲು ಧೈರ್ಯ ತೋರಿಸಿದ ನಿಮ್ಮನ್ನು ನಾನು ಬಹಳ ಗೌರವಿಸುತ್ತೇನೆ. ಹೇಮಂತ್ ರಾವ್ ಅವರು ಅದ್ಭುತ ವಿಷನ್ ಇರುವಂತಹ ನಿರ್ದೇಶಕ. ಕ್ಯಾಪ್ಟನ್ ಸ್ಥಾನದಲ್ಲಿ ಅವರ ಕೆಲಸ ಪರ್ಫೆಕ್ಟ್ ಆಗಿದೆ. ನಿಮ್ಮ ಮತ್ತು ನಿಮ್ಮ ತಂಡದ ಬಗ್ಗೆ ಹೆಮ್ಮೆ ಮೂಡಿದೆ. ಕತ್ತೆ’ ಎಂದು ಸುದೀಪ್ ಅವರು ಪೋಸ್ಟ್ ಮಾಡಿದ್ದಾರೆ. ಸಿನಿಮಾ ತೋರಿಸಿದ ರಕ್ಷಿತ್ ಶೆಟ್ಟಿಗೆ ಸುದೀಪ್ ಅವರು ಧನ್ಯವಾದ ತಿಳಿಸಿದ್ದಾರೆ.
‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾವನ್ನು ಸುದೀಪ್ ಅವರು ಮಾಸ್ಟರ್ ಪೀಸ್ ಎಂದು ಕರೆದಿದ್ದಾರೆ. ಆ ಮೂಲಕ ಅವರು ಇಡೀ ತಂಡವನ್ನು ಹುರಿದುಂಬಿಸಿದ್ದಾರೆ. ತುಂಬ ಗಟ್ಟಿಯಾದ ನಾಯಕಿ ಪಾತ್ರವನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸಿದ ರುಕ್ಮಿಣಿ ವಸಂತ್ ಅವರಿಗೆ ಸುದೀಪ್ ಕಡೆಯಿಂದ ಮೆಚ್ಚುಗೆ ಸಿಕ್ಕಿದೆ. ಹಾಗೆಯೇ, ಚೈತ್ರಾ ಆಚಾರ್ ಅವರು ತುಂಬ ಸಂಕೀರ್ಣವಾದ ಸುರಭಿ ಎಂಬ ಪಾತ್ರವನ್ನು ಬಹಳ ಸುಲಭವಾಗಿ ನಿಭಾಯಿಸಿದ್ದಾರೆ ಎಂದು ಸುದೀಪ್ ಹೊಗಳಿದ್ದಾರೆ. ಅವರಿಗೆ ಈ ಸಿನಿಮಾ ತುಂಬ ಇಷ್ಟ ಆಗಿದೆ.
SSE Side B Review: ‘ಸೈಡ್ ಎ’ ಬಳಿಕ ಮನು, ಪ್ರಿಯಾ ಬದುಕು ಬದಲಾದರೂ ‘ಸೈಡ್ ಬಿ’ ಲಯ ಬದಲಾಗಿಲ್ಲ
ಗಾಢವಾದ ಪ್ರೇಮಕಥೆ ಇರುವ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಸಿನಿಮಾ ಸೆಪ್ಟೆಂಬರ್ 1ರಂದು ಬಿಡುಗಡೆ ಆಗಿತ್ತು. ಮೊದಲು ಕನ್ನಡದಲ್ಲಿ ರಿಲೀಸ್ ಆದ ಈ ಚಿತ್ರಕ್ಕೆ ಪರಭಾಷೆಯ ಮಂದಿ ಕೂಡ ಫಿದಾ ಆದರು. ಬಳಿಕ ಬೇರೆ ಭಾಷೆಗೆ ಡಬ್ ಮಾಡಿ ತೆರೆ ಕಾಣಿಸಲಾಯಿತು. ಒಟಿಟಿಗೆ ಕಾಲಿಟ್ಟಾಗಲೂ ‘ಸೈಡ್ ಎ’ ಸಿನಿಮಾ ಮೆಚ್ಚುಗೆ ಗಳಿಸಿತು. ಈಗ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾ ಏಕಕಾಲಕ್ಕೆ ಕನ್ನಡದ ಜೊತೆ ಬೇರೆ ಭಾಷೆಗಳಲ್ಲೂ ರಿಲೀಸ್ ಆಗಿ ಉತ್ತಮ ವಿಮರ್ಶೆ ಪಡೆದಿದೆ. ನಟಿ ಸಮಂತಾ ರುತ್ ಪ್ರಭು ಕೂಡ ಈ ತಂಡಕ್ಕೆ ಭೇಷ್ ಎಂದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.