Kichcha Sudeep: ಕಿಚ್ಚ ಸುದೀಪ್​ ಧರಿಸೋ ವಾಚ್​ ಬೆಲೆ ಎಷ್ಟು ಕೋಟಿ ರೂಪಾಯಿ ಗೊತ್ತಾ?

ಸುದೀಪ್​ ಧರಿಸಿದ್ದ ವಾಚ್​ ರಿಚರ್ಡ್​ ಮಿಲ್ಲೆ (Richard Mille) ಕಂಪೆನಿಗೆ ಸೇರಿದ್ದಾಗಿದೆ. ಸ್ವಿಸ್​ ಮೂಲದ ಈ ಕಂಪೆನಿ 2001ರಲ್ಲಿ ಸ್ಥಾಪನೆಗೊಂಡಿತ್ತು.

Kichcha Sudeep: ಕಿಚ್ಚ ಸುದೀಪ್​ ಧರಿಸೋ ವಾಚ್​ ಬೆಲೆ ಎಷ್ಟು ಕೋಟಿ ರೂಪಾಯಿ ಗೊತ್ತಾ?
ಸದೀಪ್ ಧರಿಸಿದ ವಾಚ್​
Edited By:

Updated on: Mar 10, 2021 | 4:08 PM

ಸೆಲೆಬ್ರಿಟಿಗಳು ಧರಿಸುವ ಬಟ್ಟೆಯಿಂದ ಹಿಡಿದು ಅವರು ಹಾಕುವ ವಾಚ್, ಶೂ, ಚೈನ್​ ಮತ್ತಿತ್ಯಾದಿ ವಿಚಾರಗಳು ಫ್ಯಾನ್ಸ್​ ಗಮನ ಸೆಳೆಯುತ್ತಲೇ ಇರುತ್ತವೆ. ಸೆಲೆಬ್ರಿಟಿಗಳು ಸ್ಪೋರ್ಟ್ಸ್​ ಬಟ್ಟೆ ತೊಟ್ಟು ಜಿಮ್​ಗೆ ಹೋದರೆ ಅದರ ಬೆಲೆಯನ್ನು ಹುಡುಕಿ, ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅಚ್ಚರಿ ಹೊರ ಹಾಕುವವರ ಪಟ್ಟಿ ದೊಡ್ಡದಿದೆ. ಈಗ ಇಂಥದ್ದೇ ವಿಚಾರಕ್ಕೆ ಕಿಚ್ಚ ಸುದೀಪ್​ ಸುದ್ದಿಯಾಗಿದ್ದಾರೆ. ಅವರು ಧರಿಸಿದ ದುಬಾರಿ ಬೆಲೆಯ ವಾಚ್​ ಎಲ್ಲರ ಕಣ್ಣು ಕುಕ್ಕಿದೆ.

ಕಿಚ್ಚ ಸುದೀಪ್​ ಕಾರು ಹಾಗೂ ಬೈಕ್​ಗಳ ಬಗ್ಗೆ ಕ್ರೇಜ್​ ಹೊಂದಿದ್ದಾರೆ. ಅವರ ಕಾರ್​​ ಕಲೆಕ್ಷನ್​ ಎಲ್ಲರ ಗಮನ ಸೆಳೆಯುವಂಥದ್ದು. ಇದರ ಜತೆಗೆ ಅವರು ವಾಚ್​ ಪ್ರಿಯರು! ಅವರ ಬಳಿ ಸಾಕಷ್ಟು ದುಬಾರಿ ವಾಚ್​ಗಳಿವೆ ಅನ್ನೋದು ವಿಶೇಷ. ಇತ್ತೀಚೆಗೆ ಅವರು ಧರಿಸಿದ್ದ ವಾಚ್​ ಒಂದು ಎಲ್ಲರ ಗಮನ ಸೆಳೆದಿದೆ.

ಕಿಚ್ಚ ಸುದೀಪ್​ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ. ಇದೇ ವಿಶೇಷ ದಿನದಂದು ಕನ್ನಡ ಸಂಘಟನೆಗಳೆಲ್ಲ ಸೇರಿ ಸುದೀಪ್​ಗೆ ಸನ್ಮಾನ ಮಾಡಿದ್ದವು. ಈ ವೇಳೆ ಸುದೀಪ್​ ಧರಿಸಿದ್ದ ವಾಚ್​ ಎಲ್ಲರ ಗಮನ ಸೆಳೆದಿದೆ. ಅವರು ಧರಿಸಿದ್ದ ವಾಚ್​ ಯಾವುದು? ಇದರ ಬೆಲೆ ಎಷ್ಟು ಎನ್ನುವ ಬಗ್ಗೆ ಅಭಿಮಾನಿಗಳು ಗೂಗಲ್​ನಲ್ಲಿ ಸರ್ಚ್​ ಮಾಡಿದ್ದಾರೆ.

ಸುದೀಪ್​ ಧರಿಸಿದ್ದ ವಾಚ್​ ರಿಚರ್ಡ್​ ಮಿಲ್ಲೆ (Richard Mille) ಕಂಪೆನಿಗೆ ಸೇರಿದ್ದಾಗಿದೆ. ಸ್ವಿಸ್​ ಮೂಲದ ಈ ಕಂಪೆನಿ 2001ರಲ್ಲಿ ಸ್ಥಾಪನೆಗೊಂಡಿತ್ತು. ಐಷಾರಾಮಿ ವಾಚ್​ಗಳನ್ನು ಸಿದ್ಧಪಡಿಸೋದಕ್ಕೆ ಈ ಕಂಪೆನಿ ಹೆಸರುವಾಸಿಯಾಗಿದೆ.

ಸುದೀಪ್​ ಧರಿಸಿರೋ ವಾಚ್​ ಬೆಲೆ 1.5 ಕೋಟಿ ರೂಪಾಯಿ ಇದೆ ಎಂದು ಅಂದಾಜಿಸಲಾಗಿದೆ. ಈ ಸಂಸ್ಥೆ ಸಿದ್ಧಪಡಿಸುವ ವಾಚ್​ನ ಆರಂಭಿಕ ಬೆಲೆ 1 ಕೋಟಿ ಮೇಲಿದೆ. ಸದ್ಯ, ಸುದೀಪ್​ ವಾಚ್​ ಮೌಲ್ಯ ಕೇಳಿ ಅನೇಕರು ಅಚ್ಚರಿ ಹೊರ ಹಾಕಿದ್ದಾರೆ. ಸುದೀಪ್​ಗೆ ಕಾರು, ಬೈಕ್ ಕ್ರೇಜ್ ಇದೆ ಎಂಬುದು ಅಭಿಮಾನಿಗಳಿಗೆ ಗೊತ್ತಿತ್ತು. ಇದರ ಜತೆಗೆ ವಾಚ್ ಕ್ರೇಜ್ ಇದೆ ಎಂಬ ವಿಚಾರವೂ ಈಗ ಅಭಿಮಾನಿಗಳಿಗೆ ತಿಳಿದಂತಾಗಿದೆ.

ಇದನ್ನೂ ಓದಿ: Kichcha Sudeep: ನಟ ಕಿಚ್ಚ ಸುದೀಪ್​​ಗೆ ಸನ್ಮಾನ ಮಾಡಲಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us