ರಂಜಿತ್ ಅವರಿಗೆ ಈ ಬಾರಿಯ ಬಿಗ್ ಬಾಸ್ನಲ್ಲಿ ಫಿನಾಲೆವರೆಗೆ ಹೋಗುವ ಅವಕಾಶ ಇತ್ತು. ಅವರು ಟಾಪ್ ಐದರಲ್ಲಿ ಒಬ್ಬರಾಗುತ್ತಾರೆ ಎಂದು ಅನೇಕರು ಊಹಿಸಿದ್ದರು. ಆದರೆ, ಅವರು ಮೂರನೇ ವಾರವೇ ಎಲಿಮಿನೇಟ್ ಆಗಿದ್ದಾರೆ. ಅವರು ಜಗದೀಶ್ ಅವರ ಮೈ ಮುಟ್ಟಿದ ಆರೋಪದಲ್ಲಿ ಮನೆಗೆ ಹೋಗಿದ್ದಾರೆ. ಈಗ ಅವರ ಮನೆಯಲ್ಲಿ ಒಂದು ಹಾಡು ಪ್ಲೇ ಆಗುತ್ತಿದೆಯಂತೆ. ಈ ಬಗ್ಗೆ ಸುದೀಪ್ ಅವರು ಮಾತನಾಡಿದ್ದಾರೆ.
ಕಿಚ್ಚ ಸುದೀಪ್ ಅವರಿಗೆ ರಂಜಿತ್ ಆಪ್ತರು. ರಂಜಿತ್ ಈ ರೀತಿ ಮಾಡಿಕೊಂಡು ಎಲಿಮಿನೇಟ್ ಆದ ಬಗ್ಗೆ ಸುದೀಪ್ಗೆ ಕೋಪ ಇದೆ. ಅವರು ಇನ್ನೂ ಹಲವು ದಿನ ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎಂಬುದು ಸುದೀಪ್ ಆಸೆ ಆಗಿತ್ತು. ಆದರೆ, ಸುಖಾಸುಮ್ಮನೆ ಫೈಟ್ ಮಾಡಿಕೊಂಡು ಅವರು ಹೊರ ಹೋಗಿದ್ದಾರೆ. ಈ ಬಗ್ಗೆ ವೀಕೆಂಡ್ನಲ್ಲಿ ಸುದೀಪ್ ಮಾತನಾಡಿದ್ದಾರೆ.
‘ಬಿಗ್ ಬಾಸ್’ ವೇದಿಕೆ ಮೇಲೆ ರಂಜಿತ್ ಎಲಿಮಿನೇಟ್ ಆದ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ರಂಜಿತ್ ಅವರ ಎಲಿಮಿನೇಷನ್ ಬಗ್ಗೆ ಮಾತನಾಡುತ್ತಾ ನಕ್ಕಿದ್ದಾರೆ. ‘ಎಲಿಮಿನೇಟ್ ಆದ ರಂಜಿತ್ ಮನೆಯಲ್ಲಿ ಈಗ ಒಂದು ಹಾಡು ಪ್ಲೇ ಆಗುತ್ತಿದೆಯಂತೆ. ಯಾವುದು ಗೊತ್ತಾ ಆ ಸಾಂಗ್? ಯಾರೋ ಯಾರೋ ಗೀಚಿ ಹೋದ ಹಾಡು’ ಎಂದು ಸುದೀಪ್ ಅಣಕಿಸಿದ್ದಾರೆ.
ಕಳೆದ ವಾರ ನಡೆದ ಘಟನೆಯಲ್ಲಿ ಮಾತನಾಡಬೇಕಿದ್ದಿದ್ದು ಹಂಸಾ ಹಾಗೂ ಜಗದೀಶ್. ಏಕೆಂದರೆ ಹಂಸಾ ವಿರುದ್ಧ ಜಗದೀಶ್ ಅವರು ಕೆಟ್ಟ ಪದ ಬಳಕೆ ಮಾಡಿದ್ದರು. ಈ ಪ್ರಕರಣದಲ್ಲಿ ರಂಜಿತ್ ಕೂಡ ಭಾಗಿ ಆದರು. ಅವರು ತಮಗೆ ಸಂಬಂಧವೇ ಇಲ್ಲದ ವಿಚಾರದಲ್ಲಿ ತಲೆ ಹಾಕಿ ಎಲ್ಲವನ್ನೂ ಹಾಳು ಮಾಡಿಕೊಂಡರು. ಇದರಿಂದ ಅವರಿಗೆ ಸಾಕಷ್ಟು ನಷ್ಟ ಆಗಿದೆ.
ಇದನ್ನೂ ಓದಿ: ಜಗದೀಶ್ ಬಗ್ಗೆ ಬಿಗ್ಬಾಸ್ ತೋರಿಸದೇ ಇದ್ದಿದ್ದನ್ನು ಹೇಳಿದ ರಂಜಿತ್
ಜಗದೀಶ್ ಅವರು ಬಳಕೆ ಮಾಡಿದ ಅವಾಚ್ಯ ಶಬ್ದಗಳ ವಿಚಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಜಗಳವೇ ನಡೆದು ಹೋಗಿದೆ. ಇದು ಕಳೆದ ವಾರದ ಹೈಲೈಟ್ ಆಗಿತ್ತು. ಈಗ ದೊಡ್ಮನೆಗೆ ಹನುಮಂತ್ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.