Kichcha Sudeep: ಇನ್ಮುಂದೆ ಸುದೀಪ್ ಬಿಗ್ ಬಾಸ್ ಹೋಸ್ಟ್ ಮಾಡಲ್ಲ ಎಂಬ ವಿಚಾರದಲ್ಲಿಲ್ಲ ಸತ್ಯ

|

Updated on: Jan 30, 2024 | 7:35 AM

ಸ್ಪರ್ಧಿಗಳು ಹಾದಿ ತಪ್ಪಿದಾಗ ಅವರನ್ನು ತಿದ್ದುವ ಕೆಲಸ ಮಾಡಿದ್ದಾರೆ ಕಿಚ್ಚ ಸುದೀಪ್. ಈ ವೇಳೆ ಅವರು ಬಿಗ್ ಬಾಸ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ನಾನು ಇಷ್ಟಪಟ್ಟು ನಡೆಸಿಕೊಡುತ್ತಿರುವ ಶೋ ಎಂದು ಸುದೀಪ್ ಅನೇಕ ಬಾರಿ ಹೇಳಿದ್ದಾರೆ.

Kichcha Sudeep: ಇನ್ಮುಂದೆ ಸುದೀಪ್ ಬಿಗ್ ಬಾಸ್ ಹೋಸ್ಟ್ ಮಾಡಲ್ಲ ಎಂಬ ವಿಚಾರದಲ್ಲಿಲ್ಲ ಸತ್ಯ
ಸುದೀಪ್
Follow us on

ಕಿಚ್ಚ ಸುದೀಪ್ (Kichcha Sudeep) ಅವರು ಯಶಸ್ವಿಯಾಗಿ ‘ಬಿಗ್ ಬಾಸ್​’ನ 10 ಸೀಸನ್​ಗಳನ್ನು ನಡೆಸಿಕೊಟ್ಟಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ನಿರೂಪಕರು ಬದಲಾಗಿದ್ದಾರೆ. ಆದರೆ, ಕನ್ನಡದಲ್ಲಿ ಮಾತ್ರ ಹಾಗಾಗಿಲ್ಲ. ಮೊದಲಿನಿಂದಲೂ ಸುದೀಪ್ ಅವರೇ ಕಾರ್ಯಕ್ರಮ ನಡೆಸಿಕೊಡುತ್ತಾ ಬರುತ್ತಿದ್ದಾರೆ. ಈಗ ಅವರ ಒಪ್ಪಂದ ಮುಗಿದಿದ್ದು ಮುಂದಿನ ವರ್ಷದಿಂದ ಅವರು ಶೋ ನಡೆಸಿಕೊಡಲ್ಲ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ, ಈ ವಿಚಾರದಲ್ಲಿ ಯಾವುದೇ ಸತ್ಯ ಇಲ್ಲ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.

ಸುದೀಪ್ ಅವರು ‘ಬಿಗ್ ಬಾಸ್’ನ ಸಖತ್ ಇಷ್ಟಪಟ್ಟು ನಡೆಸಿಕೊಡುತ್ತಾರೆ. ‘ಹಣಕ್ಕಾಗಿ ನಾನು ಈ ಶೋ ಮಾಡುತ್ತಿಲ್ಲ’ ಎಂದು ಅವರು ಈ ಮೊದಲೇ ಹೇಳಿದ್ದರು. ಸ್ಪರ್ಧಿಗಳು ಹಾದಿ ತಪ್ಪಿದಾಗ ಅವರನ್ನು ತಿದ್ದುವ ಕೆಲಸ ಮಾಡಿದ್ದಾರೆ ಸುದೀಪ್. ಈ ವೇಳೆ ಅವರು ಬಿಗ್ ಬಾಸ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ನಾನು ಇಷ್ಟಪಟ್ಟು ನಡೆಸಿಕೊಡುತ್ತಿರುವ ಶೋ ಎಂದು ಸುದೀಪ್ ಅನೇಕ ಬಾರಿ ಹೇಳಿದ್ದಿದೆ. ಹೀಗಿರುವಾಗಲೇ ಅವರು ಬಿಗ್ ಬಾಸ್ ತೊರೆಯುತ್ತಾರೆ ಎಂದು ಹೇಳಲಾಗುತ್ತಿದೆ.

ಬಿಗ್ ಬಾಸ್ ಜೊತೆ ಸುದೀಪ್ ಮಾಡಿಕೊಂಡ ಒಪ್ಪಂದ ಮುಗಿದಿದೆಯಂತೆ. ಈ ಕಾರಣಕ್ಕೆ ಸುದೀಪ್ ಈ ಶೋ ತೊರೆಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅವರಿಗೆ ಆ ರೀತಿ ಆಲೋಚನೆ ಸದ್ಯಕ್ಕಂತೂ ಬಂದಿಲ್ಲ. ಈ ಮೊದಲು ಕೂಡ ಒಪ್ಪಂದ ಪೂರ್ಣಗೊಂಡಿತ್ತು. ಈ ಒಪ್ಪಂದವನ್ನು ನವೀಕರಿಸಿಕೊಂಡು ಅವರು ಶೋ ನಡೆಸಿಕೊಡಲು ಬಂದಿದ್ದಾರೆ. ಈ ಬಾರಿಯೂ ಅವರು ಹಾಗೆಯೇ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಯಾರು ಗೆಲ್ಲಬೇಕು ಅನ್ನೋದು ಫಿಕ್ಸ್​ ಆಗಿತ್ತು’: ಬಿಗ್ ಬಾಸ್​ ಮೇಲೆ ದೊಡ್ಡ ಆರೋಪ

ಇತ್ತೀಚೆಗೆ ಬಿಗ್ ಬಾಸ್ ಕನ್ನಡದ 10ನೇ ಸೀಸನ್ ಪೂರ್ಣಗೊಳ್ಳುವಾಗ ಸುದೀಪ್ ಒಂದು ಮಾತನ್ನು ಹೇಳಿದ್ದರು. ‘ಮುಂದೆ ಬರುವ ಹೊಸ ಸೀಸನ್​ಗಳಿಗೂ ಪ್ರೀತಿ ತೋರಿಸಿ’ ಎಂದು ಕೋರಿಕೊಂಡಿದ್ದರು. ಈ ಮಾತನ್ನು ಅನೇಕರು ನೆನಪಿಸಿಕೊಳ್ಳುತ್ತಿದ್ದಾರೆ. ‘ಕಲರ್ಸ್ ಕನ್ನಡ’ ವಾಹಿನಿ ಜೊತೆ ಸುದೀಪ್​ಗೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ವಾಹಿನಿಯವರು ಕೂಡ ಸುದೀಪ್​ ಬಗ್ಗೆ ವಿಶೇಷ ಗೌರವ ಹೊಂದಿದ್ದಾರೆ. ಒಪ್ಪಂದ ಪೂರ್ಣಗೊಂಡಿದ್ದರೆ ಅದನ್ನು ನವೀಕರಿಸಿಕೊಂಡು ಮತ್ತೆ ಬರುತ್ತಾರೆ ಎನ್ನುವ ನಂಬಿಕೆಯಲ್ಲಿ ಫ್ಯಾನ್ಸ್ ಇದ್ದಾರೆ. ಸದ್ಯ ಹರಿದಾಡುತ್ತಿರುವ ಸುದ್ದಿ ಅಂತೆ-ಕಂತೆ ಮಾತ್ರ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:34 am, Tue, 30 January 24