‘ಈಗ’, ‘ಹುಚ್ಚ’; ಸುದೀಪ್​ ಜೀವನದಲ್ಲಿ ಮರೆಯಲಾಗದ ಈ 2 ಸಿನಿಮಾಗಳಿಗೆ ಸ್ಪೆಷಲ್​ ದಿನವಿದು

| Updated By: ಮದನ್​ ಕುಮಾರ್​

Updated on: Jul 06, 2021 | 1:04 PM

20 Years of Huchcha: ಸುದೀಪ್​ಗೆ ದೊಡ್ಡ ಯಶಸ್ಸು ನೀಡಿದ ‘ಹುಚ್ಚ’ ಚಿತ್ರ ಬಿಡುಗಡೆಯಾಗಿ ಸರಿಯಾಗಿ 20 ವರ್ಷ ಕಳೆದಿದೆ. ‘ಈಗ’ ಸಿನಿಮಾ ರಿಲೀಸ್​ ಆಗಿ 9 ವಸಂತ ಸಾಗಿದೆ.

‘ಈಗ’, ‘ಹುಚ್ಚ’; ಸುದೀಪ್​ ಜೀವನದಲ್ಲಿ ಮರೆಯಲಾಗದ ಈ 2 ಸಿನಿಮಾಗಳಿಗೆ ಸ್ಪೆಷಲ್​ ದಿನವಿದು
‘ಈಗ’, ‘ಹುಚ್ಚ’; ಸುದೀಪ್​ ಜೀವನದಲ್ಲಿ ಮರೆಯಲಾಗದ ಈ 2 ಸಿನಿಮಾಗಳಿಗೆ ಸ್ಪೆಷಲ್​ ದಿನವಿದು
Follow us on

ಕಿಚ್ಚ ಸುದೀಪ್​ ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಕಳೆದಿದೆ. ಈ ದೊಡ್ಡ ಪ್ರಯಾಣದಲ್ಲಿ ಅವರು ಕಂಡ ಏಳು-ಬೀಳು ಹಲವು. ಸೋಲು-ಗೆಲುವು ಏನೇ ಇದ್ದರೂ ಪ್ರೀತಿಯಿಂದ ಸಿನಿಮಾ ಮಾಡುವ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಸಿನಿಪ್ರಿಯರ ಹೃದಯದಲ್ಲಿ ಕಿಚ್ಚನಿಗೆ ಸ್ಥಾನವಿದೆ. ಈ 25 ವರ್ಷಗಳ ಸಿನಿಪಯಣದಲ್ಲಿ ಸುದೀಪ್​ ಪಾಲಿನ ಕೆಲವು ಸ್ಪೆಷಲ್​ ಸಿನಿಮಾಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ‘ಹುಚ್ಚ’ ಮತ್ತು ತೆಲುಗಿನ ‘ಈಗ’ ಚಿತ್ರಗಳಿಗೂ ಸ್ಥಾನವಿದೆ. ಈ ಎರಡೂ ಸಿನಿಮಾಗಳನ್ನು ಇಂದು (ಜು.6) ಸುದೀಪ್​ ನೆನಪಿಸಿಕೊಂಡಿದ್ದಾರೆ.

ಸುದೀಪ್​ಗೆ ದೊಡ್ಡ ಯಶಸ್ಸು ನೀಡಿದ ‘ಹುಚ್ಚ’ ಚಿತ್ರ ಬಿಡುಗಡೆಯಾಗಿ ಸರಿಯಾಗಿ 20 ವರ್ಷ ಕಳೆದಿದೆ. 2001ರ ಜು.6ರಂದು ರಾಜ್ಯಾದ್ಯಂತ ಹುಚ್ಚ ರಿಲೀಸ್​ ಆಗಿತ್ತು. ಡಿಫರೆಂಟ್​ ಆದ ಶೀರ್ಷಿಕೆ, ಪೋಸ್ಟರ್​ಗಳಲ್ಲಿ ಕಾಣಿಸಿಕೊಂಡ ಸುದೀಪ್​ ಅವರ ಡಿಫರೆಂಟ್​ ಗೆಟಪ್​ ನೋಡಿ ಸಹಜವಾಗಿಯೇ ಚಿತ್ರದ ಬಗ್ಗೆ ಜನರಲ್ಲಿ ನಿರೀಕ್ಷೆ ಮೂಡಿತ್ತು. ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದು ರಾಜೇಶ್​ ರಾಮ್​ನಾಥ್​ ಅವರ ಸುಮಧುರ ಹಾಡುಗಳು. ಜು.6ರಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರ ನಿರೀಕ್ಷೆ ಹುಸಿ ಆಗಲಿಲ್ಲ.

ಅದಾಗಿ 11 ವರ್ಷ ಕಳೆಯುವುದರಲ್ಲಿ, ಅಂದರೆ 2012ರಲ್ಲಿ ಸುದೀಪ್​ ಅವರು ನಿರ್ದೇಶಕ ರಾಜಮೌಳಿ ಜೊತೆ ಸಿನಿಮಾ ಮಾಡುವ ಮಟ್ಟಕ್ಕೆ ಬೆಳೆದರು. ಕನ್ನಡದಲ್ಲಿ ಸ್ಟಾರ್​ ನಟನಾಗಿದ್ದ ಅವರ ಜೊತೆ ರಾಜಮೌಳಿ ಕೈ ಜೋಡಿಸಿ ‘ಈಗ’ ಸಿನಿಮಾ ಮಾಡಿದರು. ತೆಲುಗು ಮತ್ತು ತಮಿಳಿನಲ್ಲಿ ಆ ಚಿತ್ರ ಬಿಡುಗಡೆಯಾಗಿ ಜಯಭೇರಿ ಬಾರಿಸಿತು. ‘ಈಗ’ ರಿಲೀಸ್​ ಆಗಿದ್ದು ಕೂಡ ಜು.6ರಂದು. ಹಾಗಾಗಿ ಕಿಚ್ಚ ಸುದೀಪ್​ ಪಾಲಿಗೆ ಈ ದಿನಾಂಕ ತುಂಬಾ ಸ್ಪೆಷಲ್​.

ಈ ಎರಡೂ ಸಿನಿಮಾಗಳನ್ನು ಕಿಚ್ಚ ಸುದೀಪ್​ ಈಗ ಮೆಲುಕು ಹಾಕಿದ್ದಾರೆ. ‘ಒಂದೇ ದಿನಾಂಕದಲ್ಲಿ ಎರಡು ಅವಿಸ್ಮರಣೀಯ ಸಿನಿಮಾಗಳು. ರೆಹಮಾನ್​ ಸರ್, ಓಂ ಪ್ರಕಾಶ್​ ರಾವ್​, ಸಾಯಿ ಅವರು ಮತ್ತು ರಾಜಮೌಳಿ ಸರ್​ಗೆ ಧನ್ಯವಾದಗಳು’ ಎಂದು ‘ಹುಚ್ಚ’ ಮತ್ತು ‘ಈಗ’ ಸಿನಿಮಾಗಳ ನಿರ್ಮಾಪಕ-ನಿರ್ದೇಶಕರಿಗೆ ಸುದೀಪ್​ ಕೃತಜ್ಞತೆ ಸಲ್ಲಿಸಿದ್ದಾರೆ.

ತಮಿಳಿನ ‘ಸೇತು’ ಸಿನಿಮಾದ ಕನ್ನಡ ರಿಮೇಕ್​ ಆಗಿ ‘ಹುಚ್ಚ’ ಚಿತ್ರ ಮೂಡಿಬಂದಿತ್ತು. ಅದರಲ್ಲಿ ಸುದೀಪ್​ಗೆ ಜೋಡಿಯಾಗಿ ರೇಖಾ ನಟಿಸಿದ್ದರು. ‘ಈಗ’ ಸಿನಿಮಾದಲ್ಲಿ ನಾನಿ ಮತ್ತು ಸಮಂತಾ ಅಕ್ಕಿನೇನಿ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದರು.

ಇದನ್ನೂ ಓದಿ:

ಸುದೀಪ್​ಗೆ ಅಚ್ಚರಿ ಮೂಡಿಸಿದ ‘ವಿಕ್ರಾಂತ್​ ರೋಣ’ ಪೋಸ್ಟರ್​; ಚಿತ್ರತಂಡಕ್ಕೂ ಇದಕ್ಕೂ ಸಂಬಂಧವಿಲ್ಲ

Kichcha sudeep: ಅಮೆರಿಕಾ ಅಮೆರಿಕಾ ಸಿನಿಮಾ ಕಿಚ್ಚ ಸುದೀಪ್​ ಕೈ ತಪ್ಪಿದ್ದೇಕೆ?