Kotigobba 3: ಇಂದು ಬಿಡುಗಡೆಯಾಗುತ್ತಿಲ್ಲ ‘ಕೋಟಿಗೊಬ್ಬ 3’; ಇನ್ಯಾವಾಗ ಬಿಡುಗಡೆ? ಇಲ್ಲಿದೆ ಮಾಹಿತಿ

| Updated By: shivaprasad.hs

Updated on: Oct 14, 2021 | 12:21 PM

Kichcha Sudeep: ನಟ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ‘ಕೋಟಿಗೊಬ್ಬ 3’ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ. ಈ ಕುರಿತು ನಿರ್ಮಾಪಕ ಸೂರಪ್ಪ ಬಾಬು ಸ್ಪಷ್ಟನೆ ನೀಡಿದ್ದಾರೆ.

Kotigobba 3: ಇಂದು ಬಿಡುಗಡೆಯಾಗುತ್ತಿಲ್ಲ ‘ಕೋಟಿಗೊಬ್ಬ 3’; ಇನ್ಯಾವಾಗ ಬಿಡುಗಡೆ? ಇಲ್ಲಿದೆ ಮಾಹಿತಿ
‘ಕೋಟಿಗೊಬ್ಬ 3’ ಚಿತ್ರದಲ್ಲಿ ಸುದೀಪ್
Follow us on

‘ಕೋಟಿಗೊಬ್ಬ 3’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ ಅನಿವಾರ್ಯ ಕಾರಣದಿಂದ ಚಿತ್ರ ಬಿಡುಗಡೆಯಾಗುತ್ತಿಲ್ಲ. ಈ ಕುರಿತು ನಿರ್ಮಾಪಕ ಸೂರಪ್ಪ ಬಾಬು ವಿಡಿಯೋ ಮೂಲಕ ಮನವಿ ಮಾಡಿದ್ದು, ನಾಳೆಯಿಂದ(ಶುಕ್ರವಾರ) ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ವಿತರಕರ ಷಡ್ಯಂತ್ರದಿಂದ ಇಂದು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ನಾಳೆ ಮುಂಜಾನೆ 6 ಗಂಟೆಯಿಂದಲೇ ರಾಜ್ಯಾದ್ಯಂತ ಶೋ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ವಿಡಿಯೋ ಮುಖಾಂತರ ಮಾಹಿತಿ ನೀಡಿರುವ ಅವರು, ‘‘ಇಂದು ಕೋಟಿಗೊಬ್ಬ3 ರಿಲೀಸ್ ಮಾಡಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಎಲ್ಲರೂ ನನ್ನನ್ನ ಕ್ಷಮಿಸಿ. ಕೆಲವರ ಷಡ್ಯಂತರದಿಂದ ಕೋಟಿಗೊಬ್ಬ ರಿಲೀಸ್ ಮಾಡಲು ಸಾಧ್ಯವಾಗಿಲ್ಲ. ಈ ಹಿಂದೆಯೂ ಸಾಕಷ್ಟು ಷಡ್ಯಂತರ ಮಾಡಿದ್ದರು. ಈಗಲೂ ಹಾಗೇ ಆಗಿದೆ. ಸುದೀಪ್ ಅಭಿಮಾನಿಗಳು ಕ್ಷಮಿಸಬೇಕು. ನಾಳೆ ಬೆಳಗ್ಗೆ (ಅಕ್ಟೋಬರ್ 15) ಆರು ಗಂಟೆಯಿಂದ ಶೋ ಆರಂಭವಾಗಲಿವೆ’’ ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ. ಈ ಕುರಿತು ಸುದೀಪ್ ಅವರಲ್ಲೂ ಕ್ಷಮೆ ಕೋರಿರುವ ಸೂರಪ್ಪ ಬಾಬು, ಅಭಿಮಾನಿಗಳಿಗೆ ಅವರು ಟ್ವೀಟ್ ಮೂಲಕ ಮಾಹಿತಿ ನೀಡಬೇಕೆಂದು ಕೋರಿದ್ದಾರೆ.

ಸುದೀಪ್ ಇಂದು ಟ್ವೀಟ್ ಮಾಡಿ ಅಭಿಮಾನಿಗಳು ಶಾಂತ ರೀತಿಯಿಂದ ಇರುವಂತೆ ಕೋರಿಕೊಂಡಿದ್ಧಾರೆ. ಕೋಟಿಗೊಬ್ಬ 3 ಚಿತ್ರ ಬಿಡುಗಡೆಯಾಗದ ಹಿನ್ನಲೆಯಲ್ಲಿ ಸುದೀಪ್ ಪತ್ರ ಬರೆದಿದ್ದು, ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ತಾಳ್ಮೆ ಕಳೆದುಕೊಳ್ಳದಂತೆ ಅಭಿಮಾನಿಗಳಲ್ಲಿ ಅವರು ಮನವಿ ಮಾಡಿದ್ದು, ಚಿತ್ರಮಂದಿರದ ಆವರಣಕ್ಕೆ ಧಕ್ಕೆ ತರದಂತೆ ಕೇಳಿಕೊಂಡಿದ್ದಾರೆ. ನಿಗಾವಹಿಸಬೇಕಾದವರ ನಿರ್ಲಕ್ಷ್ಯ ದಿಂದ ಅವ್ಯವಸ್ಥೆಯಾಗಿದ್ದು, ಇದಕ್ಕೆ ಕ್ಷಮೆಯಾಚಿಸುತ್ತೇನೆ. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವುದಾಗಿ ಅವರು ತಿಳಿಸಿದ್ದಾರೆ.

Published On - 12:09 pm, Thu, 14 October 21