ಕನ್ನಡ ಚಿತ್ರರಂಗದ ಯುವ ನಟ ವಿನಯ್ ರಾಜ್‌ಕುಮಾರ್ ಅವರು ಬೇರೆ ಬೇರೆ ಬಗೆಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ನಟಿಸಿರುವ ‘ಪೆಪೆ’ ಸಿನಿಮಾ ಒಂದಷ್ಟು ಕಾರಣಗಳಿಂದ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಈ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ರಿಲೀಸ್ಗೆ ಸಜ್ಜಾಗಿರುವ ಈ ಸಿನಿಮಾ ಬಗ್ಗೆ ಇನ್ನೊಂದು ನ್ಯೂಸ್ ಸಿಕ್ಕಿದೆ. ಈ ಚಿತ್ರವನ್ನು ವಿತರಣೆ ಮಾಡಲು ‘ಕೆಆರ್‌ಜಿ’ ಸಂಸ್ಥೆ ಮುಂದೆ ಬಂದಿದೆ. ಹೌದು, ‘ಕೆಆರ್‌ಜಿ ಸ್ಟುಡಿಯೋಸ್’ ಮೂಲಕ ‘ಪೆಪೆ’ ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ಅವರು ರಾಜ್ಯಾದ್ಯಂತ ವಿತರಣೆ ಮಾಡಲಿದ್ದಾರೆ.
‘ಪೆಪೆ’ ಮತ್ತು ‘ಕೆಆರ್‌ಜಿ ಸ್ಟುಡಿಯೋಸ್’ ಕೈ ಜೋಡಿಸಿರುವುದರಿಂದ ನಿರೀಕ್ಷೆ ಹೆಚ್ಚಾಗಿದೆ. ಇಷ್ಟು ದಿನ ಕ್ಲಾಸ್ ಹೀರೋ ಪಾತ್ರಗಳಲ್ಲಿ ಸೈ ಎನಿಸಿಕೊಂಡ ವಿನಯ್ ರಾಜ್‌ಕುಮಾರ್ ಅವರು ಈಗ ‘ಪೆಪೆ’ ಸಿನಿಮಾದಲ್ಲಿ ಮಾಸ್ ಗೆಟಪ್ ತಾಳಿದ್ದಾರೆ. ಇದು ಕೂಡ ಸಿನಿಮಾದ ವಿಶೇಷತೆಗಳಲ್ಲಿ ಒಂದು. ಈಗಾಗಲೇ ಹೊರಬಂದಿರುವ ಟೈಟಲ್ ಸಾಂಗ್ ಸದ್ದು ಮಾಡಿದೆ.
ಇದನ್ನೂ ಓದಿ: ‘ಓಂ’ ಕ್ಲೈಮ್ಯಾಕ್ಸ್ನಲ್ಲಿ ವಿನಯ್ ರಾಜ್‌ಕುಮಾರ್-ಯುವ ಇದ್ರು; ಯಾವ ದೃಶ್ಯ ಎಂದು ಊಹಿಸುತ್ತೀರಾ?
ಸದ್ಯದಲ್ಲೇ ‘ಪೆಪೆ’ ಸಿನಿಮಾ ಬಿಡುಗಡೆ ಆಗಲಿದೆ. ರವಿವರ್ಮ, ಡಿಫರೆಂಟ್ ಡ್ಯಾನಿ, ಚೇತನ್ ಡಿಸೋಜಾ, ನರಸಿಂಹ ಅವರು ಈ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ಮೈಸೂರು, ಬೆಂಗಳೂರು, ಕೊಡಗು, ಸಕಲೇಶಪುರ ಮುಂತಾದೆಡೆ ಸಿನಿಮಾದ ಶೂಟಿಂಗ್ ನಡೆದಿದೆ. ‘ಉದಯ್ ಸಿನಿ ವೆಂಚರ್’, ‘ದೀಪಾ ಫಿಲ್ಮ್ಸ್ ಬ್ಯಾನರ್’ ಮೂಲಕ ಉದಯ್ ಶಂಕರ್ ಎಸ್. ಮತ್ತು ಬಿ.ಎಮ್. ಶ್ರೀರಾಮ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
#Pepethefilm Entire KARNATAKA Release by @KRG_Studios 🔥#Pepe @PePeTheFilm @Karthik1423 @yogigraj pic.twitter.com/pXNrviatfE
— Vinay Rajkumar (@vinayrajkumar) August 9, 2024
‘ಪೆಪೆ’ ಸಿನಿಮಾಗೆ ಶ್ರೀಲೇಶ್ ಎಸ್. ನಾಯರ್ ಅವರು ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ. ಚೊಚ್ಚಲ ಪ್ರಯತ್ನದಲ್ಲೇ ಡಿಫರೆಂಟ್ ಆದಂತಹ ಸಿನಿಮಾವನ್ನು ಅವರು ಪ್ರೇಕ್ಷಕರಿಗೆ ನೀಡುವ ಭರವಸೆ ನೀಡಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಜಲ್ ಕುಂದರ್ ಅವರು ನಟಿಸಿದ್ದಾರೆ. ಮಯೂರ್ ಪಟೇಲ್, ಬಲ ರಾಜ್‌ವಾಡಿ, ಯಶ್ ಶೆಟ್ಟಿ, ಮೇದಿನಿ ಕೆಳಮನೆ, ನವೀನ್ ಡಿ. ಪಡೀಲ್, ಅರುಣಾ ಬಾಲರಾಜ್ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅಭಿಷೇಕ್ ಜಿ. ಕಾಸರಗೋಡು ಅವರು ಛಾಯಾಗ್ರಹಣ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.