AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷ್ಣನ ಲೀಲಾಳಾದ ಶ್ರದ್ಧಾ ಶ್ರೀನಾಥ್

ಒಂದ್ ಕಾಲ ಇತ್ತು. ಯಾವ್ ಸಿನಿಮಾ ನೋಡೋದು. ಯಾವ ಸಿನಿಮಾ ಬಿಡೋದು ಅನ್ನೊ ಕಾಲವಿತ್ತು. ಆದ್ರೀಗ ಕೊರೊನಾ ಸಿನಿಮಾ ರಸಿಕರ ಈ ಸಂಭ್ರಮಕ್ಕೆ ತಣ್ಣೀರು ಸುರಿಸಿದೆ. ಹೊಚ್ಚ ಹೊಸ ಸಿನಿಮಾಗಳು ಥಿಯೇಟರ್​ನಲ್ಲಿ ಓಟಿಟಿಯಲ್ಲಿ ಬಿಡುಗಡೆಗೆ ತುದಿಗಾಲಲ್ಲಿ ನಿಂತಿವೆ. ಇಂತಹ ಸಿನಿಮಾಗಳಲ್ಲೊಂದು ಕೃಷ್ಣ ಆ್ಯಂಡ್ ಹಿಸ್ ಲೀಲಾ.. ಕೃಷ್ಣ ಆ್ಯಂಡ್ ಹಿಸ್ ಲೀಲಾ ಸಿನಿಮಾ ಕಳೆದ ವರ್ಷದಿಂದ್ಲೇ ಪ್ರಚಾರ ಆರಂಭಿಸಿತ್ತು. ಆದ್ರೆ ಇನ್ನೇನು ರಿಲೀಸ್ ಆಗ್ಬೇಕು ಅನ್ನುವಷ್ಟರಲ್ಲಿ ಕೊರೊನಾ ವಕ್ಕರಿಸಿ, ಎಲ್ಲಾ ಆಸೆಗಳಿಗೂ ತಣ್ಣೀರು ಸುರಿಸಿದೆ. ಅಂದ್ಹಾಗೆ ಈ […]

ಕೃಷ್ಣನ ಲೀಲಾಳಾದ ಶ್ರದ್ಧಾ ಶ್ರೀನಾಥ್
ಸಾಧು ಶ್ರೀನಾಥ್​
|

Updated on:Jun 22, 2020 | 6:57 PM

Share

ಒಂದ್ ಕಾಲ ಇತ್ತು. ಯಾವ್ ಸಿನಿಮಾ ನೋಡೋದು. ಯಾವ ಸಿನಿಮಾ ಬಿಡೋದು ಅನ್ನೊ ಕಾಲವಿತ್ತು. ಆದ್ರೀಗ ಕೊರೊನಾ ಸಿನಿಮಾ ರಸಿಕರ ಈ ಸಂಭ್ರಮಕ್ಕೆ ತಣ್ಣೀರು ಸುರಿಸಿದೆ. ಹೊಚ್ಚ ಹೊಸ ಸಿನಿಮಾಗಳು ಥಿಯೇಟರ್​ನಲ್ಲಿ ಓಟಿಟಿಯಲ್ಲಿ ಬಿಡುಗಡೆಗೆ ತುದಿಗಾಲಲ್ಲಿ ನಿಂತಿವೆ. ಇಂತಹ ಸಿನಿಮಾಗಳಲ್ಲೊಂದು ಕೃಷ್ಣ ಆ್ಯಂಡ್ ಹಿಸ್ ಲೀಲಾ..

ಕೃಷ್ಣ ಆ್ಯಂಡ್ ಹಿಸ್ ಲೀಲಾ ಸಿನಿಮಾ ಕಳೆದ ವರ್ಷದಿಂದ್ಲೇ ಪ್ರಚಾರ ಆರಂಭಿಸಿತ್ತು. ಆದ್ರೆ ಇನ್ನೇನು ರಿಲೀಸ್ ಆಗ್ಬೇಕು ಅನ್ನುವಷ್ಟರಲ್ಲಿ ಕೊರೊನಾ ವಕ್ಕರಿಸಿ, ಎಲ್ಲಾ ಆಸೆಗಳಿಗೂ ತಣ್ಣೀರು ಸುರಿಸಿದೆ. ಅಂದ್ಹಾಗೆ ಈ ಸಿನಿಮಾ ಬಗ್ಗೆ ಯಾಕಿಷ್ಟು ಕುತೂಹಲ ಅಂದ್ರೆ, ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ನಟಿಸಿದ್ದಾರೆ ಅನ್ನೋದು ಒಂದೆಡೆಯಾದ್ರೆ, ಇನ್ನೊಂದೆಡೆ ರಾಣಾ ದಗ್ಗುಬಾಟಿ ನಿರ್ಮಾಣ ಹಾಗೂ ರವಿಕಾಂತ್ ಪೆರುಪು ಅವರ ನಿರ್ದೇಶನವಿದೆ.

ನ್ಯಾಚುರಲ್ ಸ್ಟಾರ್ ನಾನಿ ಜೊತೆ ನಟಿಸಿದ್ದ ಶ್ರದ್ಧಾ ಶ್ರೀನಾಥ್​ಗೆ ತೆಲುಗು ಮಂದಿ ಭೇಷ್ ಅಂದಿದ್ರು. ಈ ವೇಳೆ ನಟಿಸಿದ ಮತ್ತೊಂದು ಸಿನಿಮಾನೇ ಕೃಷ್ಣ ಆ್ಯಂಡ್ ಹಿಸ್ ಲೀಲಾ. ಆದ್ರೆ, ಇನ್ನೇನು ಸಿನಿಮಾ ರಿಲೀಸ್ ಆಗ್ಬೇಕು ಅನ್ನುವಷ್ಟರಲ್ಲೇ ಕೊರೊನಾ ಮಾಹಾಮಾರಿ ಎಂಟ್ರಿ ಕೊಟ್ಟಿತ್ತು. ಹೀಗಾಗಿ ಈ ಸಿನಿಮಾ ಕಾದೂ ಕಾದು ಕೊನೆಗೂ ಓಟಿಟಿಯಲ್ಲಿ ಬಿಡುಗಡೆ ಸಿದ್ಧತೆ ನಡೆಸಿದೆ.

ಶ್ರದ್ಧಾ ಶ್ರೀನಾಥ್ ಜೊತೆ ಸೀರತ್ ಕಪೂರ್, ಶಾಲಿನಿ ವದ್ನಿಕಟ್ಟಿ ನಟಿಸಿದ್ರೆ, ಮೂವರಿಗೂ ಹೀರೋ ಆಗಿ ಸಿದ್ದು ಜಿನ್ನಲಗಡ್ಡ ಕಾಣಿಸಿಕೊಂಡಿದ್ದಾರೆ. ಮೂವರು ಯುವತಿಯರೊಂದಿಗೆ ಪ್ರೀತಿಯಲ್ಲಿ ಬೀಳುವ ನಾಯಕ ಯಾರನ್ನ ಆಯ್ಕೆ ಮಾಡಿಕೊಳ್ಳುತ್ತಾನೆ. ಅವರ ಭಾವನೆಗಳೇನು? ಅನ್ನೋದ ಸಿನಿಮಾದ ಕಥೆ. ಕೃಷ್ಣ ಆ್ಯಂಡ್ ಹಿಸ್ ಲೀಲಾ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿರೋ ಚಿತ್ರತಂಡ, ಎಲ್ಲಿ ಬಿಡುಗಡೆಯಾಗುತ್ತೆ ಅಂತ ಹೇಳಿದ್ದಾರೆ. ಆದ್ರೆ, ಬಿಡುಗಡೆ ದಿನಾಂಕವನ್ನ ಮಾತ್ರ ರಿವೀಲ್ ಮಾಡಿಲ್ಲ -ಮುರಳಿ

Published On - 6:56 pm, Mon, 22 June 20

‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಜನ ಮಾಡಿದ್ದೇನು ನೋಡಿ!
ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಜನ ಮಾಡಿದ್ದೇನು ನೋಡಿ!
ರಿಕೆಲ್ಟನ್ ಸೆಂಚುರಿ ಸಿಡಿಸಿದರೂ ಸೋತ ಎಂಐ ಪಡೆ
ರಿಕೆಲ್ಟನ್ ಸೆಂಚುರಿ ಸಿಡಿಸಿದರೂ ಸೋತ ಎಂಐ ಪಡೆ
ವಾಹನ ಸವಾರರೇ ಎಚ್ಚರ: ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ ಟ್ರಾಫಿಕ್ ಪೊಲೀಸ್
ವಾಹನ ಸವಾರರೇ ಎಚ್ಚರ: ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ ಟ್ರಾಫಿಕ್ ಪೊಲೀಸ್