‘ಗೂಗ್ಲಿ’ ನಟಿ ಕೃತಿ ಕರಬಂಧ ಮದುವೆ; ವರ, ದಿನಾಂಕದ ಬಗ್ಗೆ ಇಲ್ಲಿದೆ ಮಾಹಿತಿ..

|

Updated on: Feb 20, 2024 | 12:52 PM

ನಟಿ ಕೃತಿ ಕರಬಂಧ ಅವರ ಮದುವೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಅವರು ಈಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ‘ಗೂಗ್ಲಿ’ ಬೆಡಗಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಹಲವು ವರ್ಷಗಳಿಂದ ರಿಲೇಷನ್​ಶಿಪ್​ನಲ್ಲಿ ಇರುವ ಪ್ರಿಯಕರ ಪುಲ್ಕಿತ್​ ಸಾಮ್ರಾಟ್​ ಜೊತೆ ಅವರು ದಾಂಪತ್ಯ ಜೀವನ ಆರಂಭಿಸಲಿದ್ದಾರೆ.

‘ಗೂಗ್ಲಿ’ ನಟಿ ಕೃತಿ ಕರಬಂಧ ಮದುವೆ; ವರ, ದಿನಾಂಕದ ಬಗ್ಗೆ ಇಲ್ಲಿದೆ ಮಾಹಿತಿ..
ಪುಲ್ಕಿತ್​ ಸಾಮ್ರಾಟ್​, ಕೃತಿ ಕರಬಂಧ
Follow us on

ಖ್ಯಾತ ನಟಿ ಕೃತಿ ಕರಬಂಧ (Kriti Kharbanda) ಅವರು ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮೂಲತಃ ದೆಹಲಿಯವರಾದ ಅವರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿ ಹೆಚ್ಚು ಫೇಮಸ್​ ಆಗಿದ್ದಾರೆ. ಕನ್ನಡದಲ್ಲಿ ಯಶ್​ ಜೊತೆ ನಟಿಸಿದ ‘ಗೂಗ್ಲಿ’ ಸಿನಿಮಾದಿಂದ ಕೃತಿ ಕರಬಂಧ ಅವರಿಗೆ ಯಶಸ್ಸು ಸಿಕ್ಕಿತು. ಸದ್ಯಕ್ಕೆ ಬಾಲಿವುಡ್​ನಲ್ಲೇ ಬ್ಯುಸಿ ಆಗಿರುವ ಅವರು ಈಗ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಬಾಲಿವುಡ್​ ನಟ ಪುಲ್ಕಿತ್​ ಸಾಮ್ರಾಟ್​ (Pulkit Samrat) ಜೊತೆ ಕೃತಿ ಕರಬಂಧ ಅವರು ರಿಲೇಷನ್​ಶಿಪ್​ನಲ್ಲಿ ಇದ್ದಾರೆ. ಆ ವಿಚಾರ ಗುಟ್ಟಾಗಿ ಉಳಿದಿಲ್ಲ. ಪ್ರಿಯಕರನ ಜೊತೆ ಅವರು ಮಾರ್ಚ್​ 13ರಂದು ಕೃತಿ ಕರಬಂಧ ಮದುವೆ (Kriti Kharbanda Marriage) ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕೃತಿ ಕರಬಂಧ ಅವರಾಗಲಿ, ಪುಲ್ಕಿತ್​ ಸಾಮ್ರಾಟ್​ ಅವರಾಗಲಿ ಇನ್ನಷ್ಟೇ ಅಧಿಕೃತವಾಗಿ ಹೇಳಿಕೆ ನೀಡಬೇಕಿದೆ.

ಹಲವು ವರ್ಷಗಳಿಂದ ಕೃತಿ ಕರಬಂಧ ಮತ್ತು ಪುಲ್ಕಿತ್​ ಸಾಮ್ರಾಟ್​ ಅವರು ಪರಸ್ಪರ ಪ್ರೀತಿಸುತ್ತಿದ್ದಾರೆ. ಅವರಿಬ್ಬರು ಜೊತೆಯಾಗಿ ಇರುವ ಅನೇಕ ಫೋಟೋಗಳು ವೈರಲ್​ ಆಗಿವೆ. ತಮ್ಮ ಪ್ರೀತಿಯನ್ನು ಅವರು ಮುಚ್ಚಿಟ್ಟಿಲ್ಲ. ಈ ಸಂಬಂಧವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಅವರು ನಿರ್ಧರಿಸಿದ್ದಾರೆ. ಮಾರ್ಚ್​ 13ರಂದು ಅವರ ಮದುವೆ ನಡೆಯಲಿದೆ ಎಂದು ಮೂಲಗಳು ತಿಳಿಸಿರುವುದಾಗಿ ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ.

ಕೃತಿ ಕರಬಂಧ ಇನ್​ಸ್ಟಾಗ್ರಾಮ್​ ಪೋಸ್ಟ್​:

ಇತ್ತೀಚೆಗೆ ವ್ಯಾಲೆಂಟೈನ್ಸ್​ ಡೇ ದಿನ ಕೃತಿ ಸನೋನ್​ ಅವರು ಪುಲ್ಕಿಟ್​ ಸಾಮ್ರಾಟ್​ ಜೊತೆ ಇರುವ ಫೋಟೋ ಹಂಚಿಕೊಂಡು, ‘Let’s March together, hand in hand’ ಎಂದು ಕ್ಯಾಪ್ಷನ್​ ನೀಡಿದ್ದರು. ಅವರು ಬೇಕಂತಲೇ March ಎಂಬ ಪದವನ್ನು ಬಳಸಿದ್ದರು ಎಂದು ಫ್ಯಾನ್ಸ್ ಊಹಿಸಿದ್ದಾರೆ. ಈಗಾಗಲೇ ಮದುವೆಗೆ ಸಕಲ ತಯಾರಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಮದುವೆ ನಡೆಯುವ ಸ್ಥಳದ ಬಗ್ಗೆ ಮಾಹಿತಿ ಸಿಗುವುದು ಬಾಕಿ ಇದೆ. ಇತ್ತೀಚೆಗೆ ಅವರ ಎಂಗೇಜ್​ಮೆಂಟ್​ ನಡೆದಿದೆ.

ಇದನ್ನೂ ಓದಿ: ಬಾಲಿವುಡ್​ನಲ್ಲಿ ಸೆಟಲ್ ಆಗಿಬಿಟ್ಟರಾ ‘ಗೂಗ್ಲಿ’ ಚೆಲುವೆ ಕೃತಿ ಕರಬಂಧ

ಕನ್ನಡದ ಅನೇಕ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಕೃತಿ ಕರಬಂಧ ಕೆಲಸ ಮಾಡಿದ್ದಾರೆ. ‘ಚಿರು’, ‘ಪ್ರೇಮ್​ ಅಡ್ಡ’, ‘ಗಲಾಟೆ’, ‘ತಿರುಪತಿ ಎಕ್ಸ್​ಪ್ರೆಸ್​’, ‘ಸೂಪರ್​ ರಂಗ’, ‘ಬೆಳ್ಳಿ’, ‘ಮಿಂಚಾಗಿ ನೀನು ಬರಲು’, ‘ಮಾಸ್ತಿಗುಡಿ’, ‘ದಳಪತಿ’ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡದ ಪ್ರೇಕ್ಷಕರನ್ನು ಅವರು ರಂಜಿಸಿದ್ದಾರೆ. ಸ್ಯಾಂಡಲ್​ವುಡ್​ನ ಯಾವೆಲ್ಲ ಸೆಲೆಬ್ರಿಟಿಗಳಿಗೆ ಕೃತಿ ಕರಬಂಧ ಅವರ ಮದುವೆಯ ಆಹ್ವಾನ ಸಿಗಲಿದೆ ಎಂಬುದನ್ನು ಕಾದು ನೋಡಬೇಕು. ‘ಗೂಗ್ಲಿ’ ಸಿನಿಮಾದಲ್ಲಿ ಅವರ ಜೊತೆ ತೆರೆಹಂಚಿಕೊಂಡ ‘ರಾಕಿಂಗ್​ ಸ್ಟಾರ್​’ ಯಶ್​ ಅವರು ಈ ಮದುವೆಗೆ ಹಾಜರಿ ಹಾಕಲಿದ್ದಾರಾ ಎಂಬ ಕೌತುಕ ಅಭಿಮಾನಿಗಳಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ