ಚಿತ್ರರಂಗಕ್ಕೆ ಕಾಲಿಟ್ಟ ನಂತರ ನಟ-ನಟಿಯರು ಸೋಶಿಯಲ್ ಮೀಡಿಯಾದಿಂದ, ಅಭಿಮಾನಿಗಳಿಂದ ದೂರ ಉಳಿಯೋದು ಕಷ್ಟ. ಹಾಗೆ ಮಾಡಿದರೆ ಅಭಿಮಾನಿಗಳಿಗೆ ಬೇಸರವಾಗುತ್ತದೆ. ಇದೇ ಕಾರಣಕ್ಕೆ ಬಹುತೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಾರೆ. ಆದರೆ, ಕೆಲವೊಮ್ಮೆ ನಟ-ನಟಿಯರಿಗೆ ಮುಜುಗರ ತರುವಂತಹ ಪ್ರಶ್ನೆ ಫ್ಯಾನ್ಸ್ನಿಂದ ಎದುರಾಗುತ್ತದೆ. ಕೆಲವರು ಇದಕ್ಕೆ ಉತ್ತರಿಸಿದರೆ, ಇನ್ನೂ ಕೆಲವರು ಮೌನ ತಾಳುತ್ತಾರೆ. ನಟಿ ಕೃತಿ ಕರಬಂಧಗೆ ಇದೇ ರೀತಿಯ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ.
ಹಲವು ತಿಂಗಳ ಹಿಂದೆ ಕೃತಿ ಇನ್ಸ್ಟಾಗ್ರಾಮ್ ಲೈವ್ ಬಂದಿದ್ದರು. ಈ ವೇಳೆ ಅವರು ಅಭಿಮಾನಿಗಳ ಜತೆ ಮಾತುಕತೆ ನಡೆಸಿದ್ದಾರೆ. ಅಭಿಮಾನಿಗಳು ಕೇಳಿದ ಪ್ರತಿ ಪ್ರಶ್ನೆಗೂ ಅವರು ಉತ್ತರ ನೀಡಿದ್ದಾರೆ. ‘ನಿಮ್ಮ ಇಷ್ಟದ ಹಾಡು ಯಾವುದು?’ ಎಂದು ಅಭಿಮಾನಿಯೋರ್ವ ಕೇಳಿದ್ದ. ಇದಕ್ಕೆ ಕೃತಿ ಉತ್ತರ ನೀಡಿದ್ದಾರೆ. ಕೆಲವರು ಆ ಹಾಡನ್ನು ಹಾಡುವಂತೆ ಮನವಿ ಮಾಡಿದ್ದರು. ಅಭಿಮಾನಿಗಳಿಗೋಸ್ಕರ ಆ ಹಾಡನ್ನು ಮಧುರವಾಗಿ ಹಾಡಿದ್ದಾರೆ ಕೃತಿ.
ಈ ವೇಳೆ ಅವರಿಗೆ ವಿಚಿತ್ರ ಪ್ರಶ್ನೆ ಒಂದು ಎದುರಾಗಿತ್ತು. ಅಭಿಮಾನಿಯೋರ್ವ, ‘ನಿಮ್ಮಿಷ್ಟದ ಪೋರ್ನ್ ಸ್ಟಾರ್ ಯಾರು’ ಎಂದು ಪ್ರಶ್ನೆ ಮಾಡಿದ್ದ. ಈ ಪ್ರಶ್ನೆಯನ್ನು ಕೃತಿ ನಿರ್ಲಕ್ಷ್ಯ ಮಾಡಬಹುದಿತ್ತು. ಆದರೆ, ಅವರು ಆ ರೀತಿ ಮಾಡಿಲ್ಲ. ಬದಲಿಗೆ ಉತ್ತರ ನೀಡಿದ್ದಾರೆ. ‘ನಾನು ಪೋರ್ನ್ ನೋಡಲ್ಲ. ಎಷ್ಟೊಂದು ಮೂರ್ಖರು ಇರುತ್ತಾರೆ’ ಎಂದು ಕೃತಿ ಅಸಮಾಧಾನ ಹೊರ ಹಾಕಿದ್ದಾರೆ. ಈ ವಿಡಿಯೋ ಕ್ಲಿಪ್ ಈಗ ಮತ್ತೆ ವೈರಲ್ ಆಗಿದೆ.
ಪುಲ್ಕಿತ್ ಸಾಮ್ರಾಟ್ ಜತೆ ಕೃತಿ ಡೇಟಿಂಗ್ ನಡೆಸುತ್ತಿದ್ದಾರೆ. ಅವರ ಜತೆಗಿನ ಫೋಟೋಗಳನ್ನು ಯಾವುದೇ ಮುಚ್ಚುಮರೆ ಇಲ್ಲದೆ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇಬ್ಬರ ಜೋಡಿ ಅಭಿಮಾನಿಗಳಿಗೂ ಇಷ್ಟವಾಗಿದೆ.
ಕೃತಿ ಹುಟ್ಟಿದ್ದು ದೆಹಲಿಯಲ್ಲಾದರೂ ಶಿಕ್ಷಣ ಪಡೆದಿದ್ದು ಬೆಂಗಳೂರಿನಲ್ಲಿ. ಹೀಗಾಗಿ ಅವರಿಗೆ ಕನ್ನಡದ ಮೇಲೆ ಅಪಾರವಾದ ಪ್ರೀತಿ ಇದೆ. ಕನ್ನಡದ ಅನೇಕ ಸಿನಿಮಾಗಳಲ್ಲಿ ಕೃತಿ ನಟಿಸಿದ್ದಾರೆ. ಅವರ ನಟನೆಯ ಕೊನೆಯ ಎರಡು ಸಿನಿಮಾಗಳು ಒಟಿಟಿಯಲ್ಲಿ ತೆರೆಕಂಡಿವೆ. ಸದ್ಯ, ಅವರು ಯಾವುದೇ ಚಿತ್ರಗಳನ್ನೂ ಒಪ್ಪಿಕೊಂಡಿಲ್ಲ.
ಇದನ್ನೂ ಓದಿ: Kriti Kharabanda: ಮದುವೆಯ ಗುಟ್ಟು ಬಿಟ್ಟುಕೊಟ್ಟ ಗೂಗ್ಲಿ ಬೆಡಗಿ ಕೃತಿ ಕರಬಂಧ!