2024ರಲ್ಲಿ ವಿಜಯಲಕ್ಷ್ಮಿ ದರ್ಶನ್ ಕಲಿತ ಪಾಠಗಳೇನು?

|

Updated on: Dec 29, 2024 | 7:19 AM

Vijayalakshmi Darshan: ವಿಜಯಲಕ್ಷ್ಮಿ ದರ್ಶನ್ ಇನ್​ಸ್ಟಾಗ್ರಾಂ ಪೋಸ್ಟ್ ಹಂಚಿಕೊಂಡಿದ್ದಾರೆ. 2024ನೇ ವರ್ಷ ತಮಗೆ ಕಲಿಸಿದ ಪಾಠಗಳು ಎಂಥಹವು ಎಂದು ವಿಜಯಲಕ್ಷ್ಮಿ ಪಟ್ಟಿ ಮಾಡಿದ್ದಾರೆ. ಈ ವರ್ಷ ವಿಜಯಲಕ್ಷ್ಮಿ ಅವರ ಪಾಲಿಗೆ ಕರಾಳವಾಗಿತ್ತು. ಹಲವು ಏಳು-ಬೀಳುಗಳನ್ನು ಅವರು ಈ ವರ್ಷ ಕಂಡರು. ಈ ವರ್ಷ ಎದುರಿಸಿದ ಸವಾಲುಗಳು ಸಾಕಷ್ಟು ಪಾಠಗಳನ್ನು ಕಲಿಸಿವೆ.

2024ರಲ್ಲಿ ವಿಜಯಲಕ್ಷ್ಮಿ ದರ್ಶನ್ ಕಲಿತ ಪಾಠಗಳೇನು?
Vijayalakshmi Darshan
Follow us on

2024 ಮುಗಿಯಲು ಇನ್ನೆರಡು ದಿನಗಳಷ್ಟೆ ಬಾಕಿ ಇದೆ. 2024 ಹಲವರಿಗೆ ಹಲವು ರೀತಿಯ ಪಾಠಗಳನ್ನು ಕಲಿಸಿದರೆ, ಕೆಲವರಿಗೆ ಈ ವರ್ಷ ಒಳ್ಳೆಯದಾಗಿದ್ದರೆ ಕೆಲವರಿಗೆ ಸಾಧಾರಣವಾಗಿತ್ತು. ಆದರೆ ದರ್ಶನ್ ಮತ್ತು ಅವರ ಸುತ್ತ-ಮುತ್ತ ಇರುವವರ ಪಾಲಿಗೆ 2024 ಅತ್ಯಂತ ಕಷ್ಟಕರ ವರ್ಷವಾಗಿ ಪರಿಣಮಿಸಿದೆ. ಅದರಲ್ಲೂ ವಿಜಯಲಕ್ಷ್ಮಿ ದರ್ಶನ್ ಅವರಿಗಂತೂ ಈ ವರ್ಷ ನರಕ ಯಾತನೆಯನ್ನೇ ಅನುಭವಿಸಿದ್ದಾರೆ. ಆದರೆ ಆ ನೋವು, ಕಷ್ಟದಿಂದ ಹಲವು ಪಾಠಗಳನ್ನು ಸಹ ವಿಜಯಲಕ್ಷ್ಮಿ ಕಲಿತಿದ್ದಾರೆ. ಅಂದಹಾಗೆ 2024ನೇ ವರ್ಷ ವಿಜಯಲಕ್ಷ್ಮಿ ಅವರಿಗೆ ಕಲಿಸಿದ ಪಾಠಗಳು ಯಾವುವು? ಅವರೇ ಹಂಚಿಕೊಂಡಿದ್ದಾರೆ ನೋಡಿ.

2024 ತಮಗೆ ಕಲಿಸಿದ ಪಾಠಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ ವಿಜಯಲಕ್ಷ್ಮಿ ದರ್ಶನ್. ಕೆಲವು ಸಾಲುಗಳನ್ನು ಹೊಂದಿರುವ ಚಿತ್ರಗಳನ್ನು ವಿಜಯಲಕ್ಷ್ಮಿ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅವುಗಳ ಮೂಲಕ ತಾವು ಈ ವರ್ಷ ಕಲಿತ ಪಾಠಗಳು ಎಂಥಹವು ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ.‘ನೋವು ಜನರನ್ನು ಬದಲಾಯಿಸುತ್ತದೆ’ ಎಂದು ವಿಜಯಲಕ್ಷ್ಮಿ ಹಂಚಿಕೊಂಡಿದ್ದಾರೆ. ಈ ಸಾಲುಗಳ ಜೊತೆಗೆ ಹೃದಯ ಹಂತ ಹಂತವಾಗಿ ಕಠಿಣವಾದ ವಜ್ರವಾಗುವ ಚಿತ್ರವೂ ಇದೆ. ನೋವು ಮೃದು ಹೃದಯವನ್ನು ವಜ್ರದಂತೆ ಕಠಿಣವಾಗಿ ಮಾಡಿದೆ ಎಂದು ಹೇಳುತ್ತಿದ್ದಾರೆ ವಿಜಯಲಕ್ಷ್ಮಿ.

ಮತ್ತೊಂದು ಪೋಸ್ಟ್​ನಲ್ಲಿ, ಹುಳುವೊಂದು ಚಿಟ್ಟೆಯಾಗಿ ಹಾರುವ ಚಿತ್ರವನ್ನು ಹಂಚಿಕೊಂಡಿದ್ದು, ‘ಬದಲಾವಣೆ ಭಯ ‘ಹುಟ್ಟಿಸುತ್ತದೆ ಆದರೆ ಬದಲಾವಣೆಯೇ ಬೆಳವಣಿಗೆ’ ಎಂದಿದ್ದಾರೆ. ಸಾಧಾರಣ ಹುಳದಂತೆ ತಮಗೆ ತಾವು ಗಡಿ ಹಾಕಿಕೊಂಡು ಇದ್ದ ವಿಜಯಲಕ್ಷ್ಮಿ ಈ ವರ್ಷ, ದರ್ಶನ್ ಪ್ರಕರಣದ ನಂತರ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಗಡಿಗಳನ್ನು ದಾಟಿ ಹೊರಗೆ ಬಂದಿದ್ದಾರೆ. ಇದೇ ಕಾರಣಕ್ಕೆ ಈ ಚಿತ್ರ ಹಾಗೂ ಸಾಲುಗಳನ್ನು ವಿಜಯಲಕ್ಷ್ಮಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್

ನೀವು ಒಂದು ಮುದುಡಿದ ಹೂವು ಆಗಿ ಇದ್ದುಬಿಡುವ ಆಲೋಚನೆಯಲ್ಲಿರುತ್ತೀರಿ, ಆದರೆ ದೇವರು ನಿಮ್ಮನ್ನು ಹೂಗುಚ್ಛವನ್ನೇ ಮಾಡುವ ಆಲೋಚನೆಯಲ್ಲಿರುತ್ತಾರೆ ಎಂದಿರುವ ವಿಜಯಲಕ್ಷ್ಮಿ, ಸದಾ ದೇವರ ಯೋಜನೆಯೇ ಕಾರ್ಯರೂಪಕ್ಕೆ ಬರುತ್ತದೆ ಎಂಬರ್ಥ ಮೂಡುವ ಪೋಸ್ಟ್ ಹಂಚಿಕೊಂಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ ಬಳಿಕ ವಿಜಯಲಕ್ಷ್ಮಿ ಜವಾಬ್ದಾರಿ ತೆಗೆದುಕೊಂಡು ತಾವೇ ಮುಂದೆ ನಿಂತು ಎಲ್ಲೆಡೆ ಓಡಾಡಿ ವಕೀಲರ ಭೇಟಿಯಾಗಿ, ರಾಜಕಾರಣಿಗಳ ಭೇಟಿಯಾಗಿ ಕೊನೆಗೂ ದರ್ಶನ್​ಗೆ ಜಾಮೀನು ಕೊಡಿಸುವಲ್ಲಿ ಯಶಸ್ವಿ ಆಗಿದ್ದಾರೆ. ದರ್ಶನ್ ಜೈಲಿನಲ್ಲಿ ಇರುವಷ್ಟು ಸಮಯ ಸಾಕಷ್ಟು ಸವಾಲುಗಳನ್ನು ಅವರು ಹೊರಗೆ ಅನುಭವಿಸಿದ್ದಾರೆ. ಅದರಿಂದ ಸಾಕಷ್ಟು ಪಾಠಗಳನ್ನು ಅವರು ಕಲಿತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ