‘ಅರ್ಜುನ್​ ಗೌಡ’, ‘ಹುಟ್ಟುಹಬ್ಬದ ಶುಭಾಶಯಗಳು’, ‘ಲವ್​ ಯೂ ರಚ್ಚು’ ಬಿಡುಗಡೆ; ಗಲ್ಲಾಪೆಟ್ಟಿಗೆ ಭವಿಷ್ಯ ಏನು?

| Updated By: ಮದನ್​ ಕುಮಾರ್​

Updated on: Dec 31, 2021 | 9:50 AM

ಕರ್ನಾಟಕ ಬಂದ್​ ಕ್ಯಾನ್ಸಲ್​ ಆಗಿರುವ ಹಿನ್ನೆಲೆಯಲ್ಲಿ ಕನ್ನಡದ ಮೂರು ಸಿನಿಮಾಗಳ ಬಿಡುಗಡೆಗೆ ದಾರಿ ಸುಗಮ ಆಗಿದೆ. ಬೇರೆ ಬೇರೆ ಕಾರಣದಿಂದ ಈ ಚಿತ್ರಗಳು ನಿರೀಕ್ಷೆ ಮೂಡಿಸಿವೆ.

‘ಅರ್ಜುನ್​ ಗೌಡ’, ‘ಹುಟ್ಟುಹಬ್ಬದ ಶುಭಾಶಯಗಳು’, ‘ಲವ್​ ಯೂ ರಚ್ಚು’ ಬಿಡುಗಡೆ; ಗಲ್ಲಾಪೆಟ್ಟಿಗೆ ಭವಿಷ್ಯ ಏನು?
ಡಿ.31ರಂದು ತೆರೆ ಕಾಣಲಿರುವ ಮೂರು ಸಿನಿಮಾಗಳು
Follow us on

ನೋಡನೋಡುತ್ತಿದ್ದಂತೆಯೇ 2021ರ ವರ್ಷ ಮುಗಿದು ಹೋಗಿದೆ. ವರ್ಷದ ಕೊನೇ ದಿನವಾದ ಇಂದು (ಡಿ.31) ಎಲ್ಲರೂ ಪಾರ್ಟಿ ಮೂಡ್​ನಲ್ಲಿ ಇದ್ದಾರೆ. ಈ ನಡುವೆ ಮನರಂಜನೆಯ ಮುದ ನೀಡಲು ಕನ್ನಡದ ಮೂರು ಸಿನಿಮಾಗಳು ರಿಲೀಸ್​ ಆಗುತ್ತಿವೆ. ಪ್ರಜ್ವಲ್​ ದೇವರಾಜ್​ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಜೋಡಿಯಾಗಿ ನಟಿಸಿರುವ ‘ಅರ್ಜುನ್​ ಗೌಡ’  (Arjun Gowda Movie)ಚಿತ್ರ ಇಂದು ತೆರೆಕಾಣುತ್ತಿದೆ. ಅದೇ ರೀತಿ, ಅಜಯ್​ ರಾವ್​ ಹಾಗೂ ರಚಿತಾ ರಾಮ್​ ಜೋಡಿಯ ‘ಲವ್​ ಯೂ ರಚ್ಚು’  (Love You Rachchu)ಸಿನಿಮಾ ಕೂಡ ಬಿಡುಗಡೆ ಆಗುತ್ತಿದೆ. ದಿಗಂತ್​ ಮತ್ತು ಕವಿತಾ ಗೌಡ ನಟಿಸಿರುವ ‘ಹುಟ್ಟುಹಬ್ಬದ ಶುಭಾಶಯಗಳು’ (Huttu Habbada Shubhashayagalu) ಚಿತ್ರವೂ ಇಂದು ತೆರೆಕಾಣುತ್ತಿದೆ. ಕರ್ನಾಟಕ ಬಂದ್​ (Karnataka Bandh) ಕ್ಯಾನ್ಸಲ್​ ಆಗಿರುವ ಹಿನ್ನೆಲೆಯಲ್ಲಿ ಈ ಚಿತ್ರಗಳ ಬಿಡುಗಡೆಗೆ ದಾರಿ ಸುಗಮ ಆಗಿದೆ. ಯಾವ ಚಿತ್ರಕ್ಕೆ ಪ್ರೇಕ್ಷಕರು ಮನಸೋಲುತ್ತಾರೆ? ಈ ಸಿನಿಮಾಗಳ ಗಲ್ಲಾಪೆಟ್ಟಿಗೆ ಭವಿಷ್ಯ ಏನಾಗಲಿದೆ ಎಂಬ ಕೌತುಕ ಮನೆ ಮಾಡಿದೆ.

 

ನಿರೀಕ್ಷೆ ಮೂಡಿಸಿರುವ ‘ಲವ್​ ಯೂ ರಚ್ಚು’

ಅಜಯ್​ ರಾವ್​ ಮತ್ತು ರಚಿತಾ ರಾಮ್​ ನಟನೆಯ ‘ಲವ್​ ಯೂ ರಚ್ಚು’ ಚಿತ್ರ ಹಲವು ಕಾರಣದಿಂದ ನಿರೀಕ್ಷೆ ಮೂಡಿಸಿದೆ. ಟ್ರೇಲರ್​ ಮತ್ತು ಹಾಡುಗಳು ಗಮನ ಸೆಳೆದಿವೆ. ಶಂಕರ್​ ರಾಜ್​ ಎಸ್​. ನಿರ್ದೇಶನ ಮಾಡಿದ್ದಾರೆ. ಗುರು ದೇಶಪಾಂಡೆ ಅವರು ನಿರ್ಮಾಣ ಮಾಡುವುದರ ಜತೆಗೆ ಕ್ರಿಯೇಟಿವ್​ ಹೆಡ್​ ಆಗಿ ಕೆಲಸ ಮಾಡಿದ್ದಾರೆ. ಕದ್ರಿ ಮಣಿಕಾಂತ್​ ಅವರ ಸಂಗೀತ ಈ ಚಿತ್ರಕ್ಕಿದೆ.

ಕೋಟಿ ರಾಮು ನಿರ್ಮಾಣದ ‘ಅರ್ಜುನ್​ ಗೌಡ’

ನಿರ್ಮಾಪಕ ಕೋಟಿ ರಾಮು ಅವರು ಈ ವರ್ಷ ಕೊವಿಡ್​ನಿಂದ ನಿಧನರಾಗಿದ್ದು ನೋವಿನ ಸಂಗತಿ. ಅವರು ನಿರ್ಮಿಸಿದ ‘ಅರ್ಜುನ್​ ಗೌಡ’ ಚಿತ್ರವನ್ನು ಅವರ ಪತ್ನಿ ಮಾಲಾಶ್ರೀ ಬಿಡುಗಡೆ ಮಾಡುತ್ತಿದ್ದಾರೆ. ಮುಖ್ಯ ಪಾತ್ರದಲ್ಲಿ ಪ್ರಜ್ವಲ್​ ದೇವರಾಜ್​ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಅಭಿನಯಿಸಿದ್ದಾರೆ. ಶಂಕರ್​ ನಿರ್ದೇಶನ ಮಾಡಿದ್ದು, ಧರ್ಮ ವಿಶ್​ ಸಂಗೀತ ನೀಡಿದ್ದಾರೆ.

ದಿಗಂತ್​ಗೆ ‘ಹುಟ್ಟುಹಬ್ಬದ ಶುಭಾಶಯಗಳು’

ನಟ ದಿಗಂತ್​ ಮತ್ತು ಕಿರುತೆರೆಯ ಖ್ಯಾತ ನಟಿ ಕವಿತಾ ಗೌಡ ಅವರು ಬಣ್ಣ ಹಚ್ಚಿರುವ ‘ಹುಟ್ಟುಹಬ್ಬದ ಶುಭಾಶಯಗಳು’ ಸಿನಿಮಾದ ಟ್ರೇಲರ್​ ಗಮನ ಸೆಳೆದಿದೆ. ಸಸ್ಪೆನ್ಸ್​ ಥ್ರಿಲ್ಲರ್​ ಶೈಲಿಯಲ್ಲಿ ಈ ಚಿತ್ರ ಮೂಡಿಬಂದಿದೆ. ಟಿಆರ್​ ಚಂದ್ರಶೇಖರ್​ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಾಗರಾಜ್​ ಬೇತೂರು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಶ್ರೀಧರ್​ ವಿ. ಸಂಭ್ರಮ್​ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ:

Love You Rachchu: ‘ಲವ್​ ಯೂ ರಚ್ಚು’ನಲ್ಲಿ ಮಿಲನಾ, ಡಾರ್ಲಿಂಗ್ ಕೃಷ್ಣಗೆ ಇಷ್ಟ ಆಗಿದ್ದೇನು? ವಿಡಿಯೋ ಇಲ್ಲಿದೆ

‘ಅರ್ಜುನ್​ ಗೌಡ’ ಚಿತ್ರದಲ್ಲಿ ಆರಂಭದಿಂದ ಕೊನೆಯವರೆಗೂ ನಾನಿರ್ತೀನಿ; ಬಿಗ್​​ ಬಾಸ್ ಪ್ರಿಯಾಂಕಾ ತಿಮ್ಮೇಶ್​

Published On - 8:07 am, Fri, 31 December 21