ಯಶ್​-ರಾಧಿಕಾ ಪಂಡಿತ್​ ಚಿತ್ರರಂಗದ ಬೆಸ್ಟ್​ ಕಪಲ್​; ಮನಃಪೂರ್ವಕವಾಗಿ ಹೊಗಳಿದ ಪರಭಾಷಾ ನಟಿ

ನಟಿ ರಾಧಿಕಾ ಪಂಡಿತ್​ ಹಾಗೂ ಯಶ್​ ದಂಪತಿ ಸ್ಯಾಂಡಲ್​ವುಡ್​ನ ಖ್ಯಾತ ಸೆಲೆಬ್ರಿಟಿ ಜೋಡಿಗಳ ಪೈಕಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರ ನಿಶ್ಚಿತಾರ್ಥ ನೆರವೇರಿ ಆಗಸ್ಟ್​ 12ಕ್ಕೆ ಐದು ವರ್ಷ ತುಂಬಿದೆ.

ಯಶ್​-ರಾಧಿಕಾ ಪಂಡಿತ್​ ಚಿತ್ರರಂಗದ ಬೆಸ್ಟ್​ ಕಪಲ್​; ಮನಃಪೂರ್ವಕವಾಗಿ ಹೊಗಳಿದ ಪರಭಾಷಾ ನಟಿ
ಯಶ್​-ರಾಧಿಕಾ ಪಂಡಿತ್​ ಚಿತ್ರರಂಗದ ಬೆಸ್ಟ್​ ಕಪಲ್​; ಮನಃಪೂರ್ವಕವಾಗಿ ಹೊಗಳಿದ ಪರಭಾಷಾ ನಟಿ
Updated By: ರಾಜೇಶ್ ದುಗ್ಗುಮನೆ

Updated on: Aug 13, 2021 | 7:43 PM

ಯಶ್​-ರಾಧಿಕಾ ಪಂಡಿತ್​ ದಂಪತಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇವರನ್ನು ನಟ-ನಟಿಯಾಗಿ ಇಷ್ಟಪಡುವವರು ಒಂದಷ್ಟು ಜನರಾದರೆ, ಮಾದರಿ ದಂಪತಿ ಎನ್ನುವ ಕಾರಣಕ್ಕೆ ಅನೇಕರಿಗೆ ಇವರು ಇಷ್ಟವಾಗುತ್ತಾರೆ. ಈಗ ಪರಭಾಷಾ ನಟಿ ಮಾಳವಿಕಾ ಮೋಹನನ್​ ಅವರು ಈ ದಂಪತಿಯನ್ನು ಮನಃಪೂರ್ವಕವಾಗಿ ಹೊಗಳಿದ್ದಾರೆ.

ನಟಿ ರಾಧಿಕಾ ಪಂಡಿತ್​ ಹಾಗೂ ಯಶ್​ ದಂಪತಿ ಸ್ಯಾಂಡಲ್​ವುಡ್​ನ ಖ್ಯಾತ ಸೆಲೆಬ್ರಿಟಿ ಜೋಡಿಗಳ ಪೈಕಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರ ನಿಶ್ಚಿತಾರ್ಥ ನೆರವೇರಿ ಆಗಸ್ಟ್​ 12ಕ್ಕೆ ಐದು ವರ್ಷ ತುಂಬಿದೆ. ಈ ಮಧುರ ಕ್ಷಣವನ್ನು ರಾಧಿಕಾ ಪಂಡಿತ್​ ನೆನೆದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅವರು ವಿಶೇಷ ವಿಡಿಯೋ ಕೂಡ ಹಂಚಿಕೊಂಡಿದ್ದರು. ಇದಕ್ಕೆ ‘ಅದ್ಭುತ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಇಂದು 5 ವರ್ಷಗಳಾಗಿವೆ. ನನಗೆ ಆ ದಿನ ಇನ್ನೂ ನೆನಪಿದೆ. ಆ ಪರಿಪೂರ್ಣ ದಿನವನ್ನು ಮತ್ತೆ ಮೆಲುಕು ಹಾಕಲು ಈ ವಿಡಿಯೋವನ್ನು ಶೇರ್ ಮಾಡಿದ್ದೇನೆ’ ಎಂದು ರಾಧಿಕಾ ಪಂಡಿತ್​ ಬರೆದುಕೊಂಡಿದ್ದರು. ಇದೆ ರೀತಿಯ ಮತ್ತೊಂದು ಪೋಸ್ಟ್​ ಅನ್ನು ರಾಧಿಕಾ ಹಂಚಿಕೊಂಡಿದ್ದರು.

ಈ ಪೋಸ್ಟ್​ಗೆ ಮಾಳವಿಕಾ ಕಮೆಂಟ್​ ಮಾಡಿದ್ದಾರೆ. ‘ಇಂಡಸ್ಟ್ರಿಯ ಅತ್ಯುತ್ತಮ ಕಪಲ್​’ ಎಂದು ಕಮೆಂಟ್​ ಮಾಡಿರುವ ಮಾಳವಿಕಾ ಹೃದಯದ ಎಮೋಜಿ ಹಾಕಿದ್ದಾರೆ. ಇದು ಅನೇಕರಿಗೆ ಇಷ್ಟವಾಗಿದೆ.

2013ರಲ್ಲಿ ತೆರೆಗೆ ಬಂದ ಮಲಯಾಳಂನ ‘ಪಟ್ಟಮ್​ ಪೋಲೆ’ ಸಿನಿಮಾ ಮೂಲಕ ಮಾಳವಿಕಾ ಬಣ್ಣದ ಬದುಕು ಆರಂಭಿಸಿದರು. 2016ರಲ್ಲಿ ತೆರೆಗೆ ಬಂದ ‘ನಾನು ಮತ್ತು ವರಲಕ್ಷ್ಮೀ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಇದು ಅವರ ಮೊದಲ ಮತ್ತು ಕೊನೆಯ ಕನ್ನಡ ಸಿನಿಮಾ. ಇದಾದ ನಂತರದಲ್ಲಿ ಸಾಕಷ್ಟು ತಮಿಳು ಚಿತ್ರಗಳಲ್ಲಿ ಮಾಳವಿಕಾ ನಟಿಸಿದ್ದಾರೆ.

ರಾಧಿಕಾ ಪಂಡಿತ್​ ನಟನೆಯಿಂದ ದೂರ ಉಳಿದಿದ್ದಾರೆ. ಆಗೊಂದು ಈಗೊಂದು ಪೋಸ್ಟ್​ ಹಾಕುವ ಮೂಲಕ ಅಭಿಮಾನಿಗಳ ಜತೆ ರಾಧಿಕಾ ಪಂಡಿತ್​ ಸಂಪರ್ಕದಲ್ಲಿದ್ದಾರೆ. ಇನ್ನು, ರಾಧಿಕಾ ಕೊನೆಯದಾಗಿ ಕಾಣಿಸಿಕೊಂಡಿದ್ದು 2019ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮಿ ಪುರಾಣ’ ಚಿತ್ರದಲ್ಲಿ. ಈ ಸಿನಿಮಾ ತೆರೆಗೆ ಬಂದ ನಂತರದಲ್ಲಿ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಇನ್ನು, ಯಶ್​ ‘ಕೆಜಿಎಫ್​ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಸಂಜಯ್​ ದತ್​ ಅಧೀರನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ  ರಿಲೀಸ್​ ದಿನಾಂಕ ಕೊವಿಡ್​ ಎರಡನೆ ಅಲೆ ಕಾರಣದಿಂದ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ: ರಾಧಿಕಾ ಪಂಡಿತ್​-ಯಶ್​ ನಿಶ್ಚಿತಾರ್ಥಕ್ಕೆ ಐದು ವರ್ಷ; ವಿಶೇಷ ವಿಡಿಯೋ ಹಂಚಿಕೊಂಡ ನಟಿ