ಮನಸ್ಸಿಗೆ ನೆಮ್ಮದಿಯೇ ಇಲ್ಲ’; ಥಿಯೇಟರ್ ಮುಂದೆ ದೈವಾರಾಧನೆ ಅನುಕರಣೆ ಮಾಡಿದ್ದವನ ಕ್ಷಮೆ

Kantara Chapter 1: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆದ ದಿನ ವ್ಯಕ್ತಿಯೊಬ್ಬನ ವಿಡಿಯೋ ಒಂದು ಸಹ ವೈರಲ್ ಆಗಿತ್ತು. ಸಿನಿಮಾ ಬಿಡುಗಡೆ ಆದ ದಿನ ಚಿತ್ರಮಂದಿರದ ಮುಂದೆ ವ್ಯಕ್ತಿಯೊಬ್ಬ ಮೈಮೇಲೆ ದೆವ್ವ ಬಂದವನಂತೆ ಹುಚ್ಚನಂತೆ ಆಡಿದ್ದ. ಆ ವಿಡಿಯೋ ವೈರಲ್ ಆಗಿತ್ತು. ಈಗ ಆ ವ್ಯಕ್ತಿ ಕ್ಷಮೆ ಕೇಳಿದ್ದಾನೆ.

ಮನಸ್ಸಿಗೆ ನೆಮ್ಮದಿಯೇ ಇಲ್ಲ’; ಥಿಯೇಟರ್ ಮುಂದೆ ದೈವಾರಾಧನೆ ಅನುಕರಣೆ ಮಾಡಿದ್ದವನ ಕ್ಷಮೆ
Kantara (7)
Updated By: ಮಂಜುನಾಥ ಸಿ.

Updated on: Oct 07, 2025 | 11:37 AM

ಕಾಂತಾರ’ (Kantara) ಹಾಗೂ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಕಂಡ ಬಳಿಕ ದೈವದ ವಿಷಯವು ಹೆಚ್ಚು ಬೆಳಕಿಗೆ ಬಂತು. ಕರಾವಳಿ ಭಾಗದ ಜನತೆಯ ಆಚರಣೆ ದೈವಾರಾಧನೆ ಮೇಲೆ ಈ ಸಿನಿಮಾಗಳು ಬೆಳಕು ಚೆಲ್ಲುವ ರೀತಿಯಲ್ಲಿ ಇದೆ. ಆದರೆ, ಈ ಸಿನಿಮಾ ರಿಲೀಸ್ ಆದ ಬಳಿಕ ಕೆಲವರು ಇದನ್ನು ಅನುಕರಣೆ ಮಾಡಲು ಹೋಗಿದ್ದನ್ನು ನೀವು ಕಾಣಬಹುದು. ಇದು ಸರಿ ಅಲ್ಲ ಎಂದು ಅನೇಕರು ಹೇಳುತ್ತಾ ಬರುತ್ತಿದ್ದಾರೆ. ಈಗ ಇದೇ ರೀತಿ ಮಾಡಿದ ವ್ಯಕ್ತಿಯೋರ್ವ ಕ್ಷಮೆ ಕೇಳಿದ್ದಾನೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆ ಕಂಡಿತು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಈ ಸಿನಿಮಾ ರಿಲೀಸ್ ಆದ ಬಳಿಕ ವ್ಯಕ್ತಿಯೊಬ್ಬನು ಥಿಯೇಟರ್​ನ ಹೊರ ಭಾಗದಲ್ಲಿ ದೈವ ಬಂದಂತೆ ಆಡಿದ್ದನು ಮತ್ತು ಈ ವಿಡಿಯೋ ವೈರಲ್ ಆಗಿತ್ತು. ‘ರಿಷಬ್ ಅವರಲ್ಲಿ ದೇವರನ್ನು ನೋಡಿದೆ’ ಎಂದೆಲ್ಲ ಆತ ಹೇಳಿಕೊಂಡಿದ್ದ.

ಈ ವಿಡಿಯೋ ವೈರಲ್ ಆದ ಬಳಿಕ ಅನೇಕರು ವಿರೋಧ ಹೊರ ಹಾಕಿದ್ದರು. ಈ ರೀತಿ ಮಾಡೋದು ಸರಿ ಅಲ್ಲ ಎಂದು ಕೆಲವರು ಹೇಳಿದ್ದರು. ಇದು ದೈವಕ್ಕೆ ಮಾಡುವ ಅವಮಾನ ಎಂಬ ಮಾತುಗಳು ಕೂಡ ಕೇಳಿ ಬಂದವು. ಈಗ ಈ ವಿಚಾರದಲ್ಲಿ ಆ ವ್ಯಕ್ತಿ ಕ್ಷಮೆ ಕೇಳಿದ್ದಾನೆ. ಕಳೆದ ಕೆಲವು ದಿನಗಳಿಂದ ಮನಸ್ಸಿಗೆ ನೆಮ್ಮದಿ ಇಲ್ಲದಂತೆ ಆಗಿದೆ ಎಂದು ಕೋರಿರುವ ಆತನು, ಈ ರೀತಿ ಯಾರೂ ಮಾಡಲು ಹೋಗಬೇಡಿ ಎಂದು ಕೋರಿದ್ದಾನೆ. ‘ನನ್ನ ಹೆಸರು ವೆಂಕಟ್ ಎಂದು. ಇತ್ತೀಚೆಗೆ ವೈರಲ್ ಆದ ವಿಡಿಯೋ ನೋಡಿರ್ತೀರಿ. ಅದು ಉದ್ದೇಶ ಪೂರ್ವಕವಾಗಿ ಮಾಡಿಲ್ಲ. ರಿಷಬ್ ಶೆಟ್ಟಿ, ಕಾಂತಾರ ಟೀಮ್​ಗೆ ನನ್ನ ಕ್ಷಮೆ ಇರಲಿ. ಮಂಗಳೂರು ಜನತೆಗೆ, ತುಳು ನಾಡಿನ ಜನತೆಗೆ ಕ್ಷಮೆ ಇರಲಿ. ಪ್ಲೀಸ್ ಈ ರೀತಿ ಮಾಡಬೇಡಿ. ಈ ಘಟನೆ ಆದಾಗಿನಿಂದ ನೆಮ್ಮದಿ-ಶಾಂತಿ ಇಲ್ಲ. ನನ್ನನ್ನು ಕ್ಷಮಿಸಿ’ ಎಂದು ಆತನ ಕೋರಿಕೊಂಡಿದ್ದಾನೆ.

ದೈವಾರಾಧನೆ ಮಾಡಲು ಅದರದ್ದೇ ಆದ ಪದ್ದತಿ ಇರುತ್ತದೆ. ಅದನ್ನು ಈ ರೀತಿ ಮಾಡುವುದು ಆ ಆಚರಣೆಗೆ ಮಾಡುವ ಅವಮಾನವೇ ಆಗಿರುತ್ತದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ಕರಾವಳಿ ಸಂಸ್ಕೃತಿ ವಿಶ್ವ ಮಟ್ಟಕ್ಕೆ ಹರಡಿದೆ ಅನ್ನೋದು ವಿಶೇಷ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ