‘ಭೀಮ’ ನೋಡಿ ಮಗನಿಗೆ ಡ್ರಗ್ಸ್ ಮಾರಿದವನ ಹಿಡಿದುಕೊಟ್ಟ ತಂದೆ

Duniya Vijay: ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ಕೆಲ ವಾರದ ಹಿಂದೆ ಬಿಡುಗಡೆ ಆಗಿತ್ತು. ಆ ಸಿನಿಮಾ ನೋಡಿದ ವ್ಯಕ್ತಿಯೊಬ್ಬ ಮಗನಿಗೆ ಡ್ರಗ್ಸ್ ಮಾರುತ್ತಿದ್ದ ಪೆಡ್ಲರ್ ಒಬ್ಬಾತನನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ.

‘ಭೀಮ’ ನೋಡಿ ಮಗನಿಗೆ ಡ್ರಗ್ಸ್ ಮಾರಿದವನ ಹಿಡಿದುಕೊಟ್ಟ ತಂದೆ
Follow us
ಮಂಜುನಾಥ ಸಿ.
|

Updated on: Sep 12, 2024 | 7:03 PM

ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಂಡಿದೆ. ಸಿನಿಮಾದಲ್ಲಿ ಮಾದಕ ವಸ್ತುವಿಗೆ ಯುವಕರು ಬಲಿಯಾಗುತ್ತಿರುವ ರೀತಿಯನ್ನು ದುನಿಯಾ ವಿಜಯ್ ತೋರಿಸಿದ್ದರು. ಯುವಕರು ಹೇಗೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿತ್ತು. ಇದರ ಜೊತೆಗೆ ಬೆಂಗಳೂರಿನ ಯುವಕರಿಗೆ ಮಾದಕ ವಸ್ತು ಅದೆಷ್ಟು ಸುಲಭವಾಗಿ ಲಭ್ಯವಾಗುತ್ತಿದೆ. ಯಾವ ಯಾವ ರೂಪದಲ್ಲಿ ಲಭ್ಯವಾಗುತ್ತಿದೆ ಎಂಬುದನ್ನು ಸಹ ದುನಿಯಾ ವಿಜಿ ತೋರಿಸಿದ್ದರು.

ಸಿನಿಮಾ ಬಿಡುಗಡೆ ಆದ ಬಳಿಕವೂ ಸಹ ದುನಿಯಾ ವಿಜಯ್ ಪ್ರತ್ಯೇಕ ವಿಡಿಯೋಗಳನ್ನು ಮಾಡಿ, ಹೇಗೆ ಮೆಡಿಕಲ್ ಶಾಪ್​ಗಳಲ್ಲಿ ಕೆಲವು ಮಾತ್ರೆಗಳನ್ನು ಯಾವುದೇ ವೈದ್ಯರ ಪ್ರಿಸ್ಕ್ರಿಪ್ಷನ್​ಗಳಿಲ್ಲದೆ ಮೆಡಿಕಲ್ ಶಾಪ್​ಗಳವರು ನೀಡುತ್ತಿದ್ದಾರೆ ಎಂಬುದನ್ನು ತೋರಿಸಿದ್ದರು. ಇದೀಗ ದುನಿಯಾ ವಿಜಿ, ‘ಭೀಮ’ ಸಿನಿಮಾ ಮಾಡಿದ ಉದ್ದೇಶ ತುಸುವಾದರೂ ಈಡೇರಿದಂತಿದೆ. ವ್ಯಕ್ತಿಯೊಬ್ಬ, ತನ್ನ ಮಗನಿಗೆ ಡ್ರಗ್ಸ್ ಮಾರುತ್ತಿದ್ದ ಯುವಕನೊಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾತ್ರವಲ್ಲದೆ ತನ್ನ ಮಗನನ್ನೂ ಸಹ ಡ್ರಗ್ಸ್​ನಿಂದ ವಿಮುಕ್ತಿಗೊಳಿಸುವ ಪ್ರಯತ್ನ ನಡೆಸಿದ್ದಾರೆ.

ಬೆಂಗಳೂರಿನ ವಾಲ್ಮೀಕಿ ನಗರದ ಇಕ್ಬಾಲ್ ಪಾಷಾ ಎಂಬುವರು ದುನಿಯಾ ವಿಜಯ್ ನಟಿಸಿರುವ ‘ಭೀಮ’ ಸಿನಿಮಾ ವೀಕ್ಷಿಸಿದ್ದರು. ಸಿನಿಮಾ ನೋಡಿದ ಬಳಿಕ ತಮ್ಮ 20 ವರ್ಷದ ಮಗನ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವರಿಗೆ ಕೆಲ ಅನುಮಾನಗಳು ಬಂದಿವೆ. ಮಗ ಯಾವಾಗಲೂ ಒಬ್ಬನೇ ಇರುತ್ತಾನೆ, ಸದಾ ಮತ್ತಿನಲ್ಲಿರುವಂತೆ ಇರುತ್ತಾನೆ, ಕಣ್ಣುಗಳ ಬಣ್ಣ ಬದಲಾಗಿರುತ್ತದೆ ಇತ್ಯಾದಿಗಳನ್ನು ಗಮನಿಸಿದ್ದ ಇಕ್ಬಾಲ್ ಪಾಷಾ ಮಗನ ಚಲನ ವಲನಗಳ ಮೇಲೆ ಕಣ್ಣಿರಿಸಿದ್ದರು.

ಇದನ್ನೂ ಓದಿ:ವಿನಯ್ ನಟನೆಯ ‘ಪೆಪೆ’ ಸಿನಿಮಾಕ್ಕಾಗಿ ಹರಕೆ ಹೊತ್ತ ನಟ ದುನಿಯಾ ವಿಜಯ್

ಮಗನಿಗೆ ಮಾತ್ರೆ ಹೇಗೆ ಸಿಗುತ್ತಿದೆ ಎಂದು ತಿಳಿಯಲು ಕಾರ್ಯಾಚರಣೆ ಆರಂಭಿಸಿದರು. ವಾಲ್ಮಿಕಿ ದೇವಾಲಯದ ಬಳಿ ಒಬ್ಬರೇ ನಿಂತು ಕೆಲವು ಅನುಮಾನಾಸ್ಪದ ವ್ಯಕ್ತಿಗಳ ಬಳಿ ಮಾತ್ರೆಗಳಿಗಾಗಿ ವಿಚಾರಿಸಿದ್ದಾರೆ. ಆಗ ಒಬ್ಬ ಅಪ್ರಾಪ್ತ ಯುವಕ ‘ನನ್ನ ಬಳಿ ಮಾತ್ರೆ ಇದೆ ಅದನ್ನು ತೆಗೆದುಕೊಂಡರೆ ದೇಹದಾರ್ಢ್ಯ ಹೆಚ್ಚಾಗುತ್ತದೆ ಒಂದು ಮಾತ್ರೆಗೆ 100 ರೂಪಾಯಿ’ ಎಂದಿದ್ದಾರೆ. ಆಗ ಇಕ್ಬಾಲ್, 200 ಕೊಟ್ಟು ಎರಡು ಮಾತ್ರೆ ಖರೀದಿ ಮಾಡಿದ್ದಾರೆ. ಬಳಿಕ ಅದನ್ನು ತೆಗೆದುಕೊಂಡು ಮೆಡಿಕಲ್ ಶಾಪ್​ಗೆ ಹೋಗಿ ವಿಚಾರಿಸಿದಾಗ ಅದು ನೋವಿನ ಮಾತ್ರೆಯಾಗಿದ್ದು ಅದರಲ್ಲಿ ಮತ್ತು ಬರುವ ಅಂಶವಿರುವುದು ಗೊತ್ತಾಗಿದೆ. ಆ ಮಾತ್ರೆಯನ್ನು ನಶೆಗಾಗಿ ಬಳಸುವ ವಿಚಾರವೂ ತಿಳಿದುಕೊಂಡಿದ್ದಾರೆ.

ಕೂಡಲೇ ಚಾಮರಾಜನಗರ ಪೊಲೀಸ್ ಠಾಣೆಗೆ ತೆರಳಿದ ಇಕ್ಬಾಲ್, ತನಗೆ ಮಾತ್ರೆ ಮಾರಾಟ ಮಾಡಿದ ಅಪ್ರಾಪ್ತ ವ್ಯಕ್ತಿ ಹಾಗೂ ಆತನ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಆ ಅಪ್ರಾಪ್ತನನ್ನು ಬಂಧಿಸಿ, ಆತನಿಂದ 180 ಟೈಡಾಲ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ