
ಡಿಸೆಂಬರ್ ಅಭಿಮಾನಿಗಳ ಪಾಲಿಗೆ ಹಬ್ಬ. ಕನ್ನಡ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ವಿವಿಧ ಚಿತ್ರಗಳು ರಿಲೀಸ್ ಆಗುತ್ತಾ ಇವೆ. ಕನ್ನಡದಲ್ಲೂ ಕೂಡ ಹಲವು ಚಿತ್ರಗಳು ತೆರೆಗೆ ಬರಲು ರೆಡಿ ಆಗಿವೆ. ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇದೇ ವಾರ (ಡಿಸೆಂಬರ್ 11) ರಿಲೀಸ್ ಆಗುತ್ತಿದೆ. ಸುದೀಪ್ ನಟನೆಯ ‘ಮಾರ್ಕ್’ ಚಿತ್ರ (Mark Movie) ಡಿಸೆಂಬರ್ 25ಕ್ಕೆ ರಿಲೀಸ್ ಆಗುತ್ತಿದೆ. ರಾಜ್ ಬಿ ಶೆಟ್ಟಿ, ಉಪೇಂದ್ರ, ಶಿವರಾಜ್ಕುಮಾರ್ ಅಭಿನಯದ ‘45’ ಕೂಡ ತೆರೆಗೆ ಬರುತ್ತಿದೆ. ಈ ಪೈಕಿ ಡೆವಿಲ್ ಹಾಗೂ ಮಾರ್ಕ್ ಟ್ರೇಲರ್ ರಿಲೀಸ್ ಆಗಿದ್ದು, ದಾಖಲೆಯ ವೀಕ್ಷಣೆ ಕಂಡಿದೆ.
‘ಡೆವಿಲ್’ ಹಾಗೂ ‘ಮಾರ್ಕ್’ ಟ್ರೇಲರ್ ನೋಡಿದ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.ಕೆಲವೇ ದಿನಗಳ ಅಂತರದಲ್ಲಿ ಎರಡೂ ಸಿನಿಮಾಗಳು ತೆರೆಗೆ ಬರುತ್ತಿರುವುದು ವಿಶೇಷ. ಎರಡೂ ಸಿನಿಮಾಗಳಲ್ಲಿ ಆ್ಯಕ್ಷನ್ ಹೈಲೈಟ್ ಆಗಿದೆ. ‘ಡೆವಿಲ್’ ಚಿತ್ರದಲ್ಲಿ ದರ್ಶನ್ ಅವರದ್ದು ದ್ವಿಪಾತ್ರ ಎನ್ನಲಾಗುತ್ತಿದೆ. ಸುದೀಪ್ ಅವರು ‘ಮಾರ್ಕ್’ ಚಿತ್ರದಲ್ಲಿ ಪೊಲೀಸ್ ಆಗಿ ಕಾಣಿಸಿಕೊಂಡಿದ್ದಾರೆ.
ಮಿಲನ ಪ್ರಕಾಶ್ ನಿರ್ದೇಶನದ ‘ಡೆವಿಲ್’ ಸಿನಿಮಾ ಟ್ರೇಲರ್ ಡಿಸೆಂಬರ್ 5ರಂದು ರಿಲೀಸ್ ಆಗಿದೆ. ಹಲವು ಆ್ಯಕ್ಷನ್ ಹಾಗೂ ಮಾಸ್ ಡೈಲಾಗ್ ಮೂಲಕ ಟ್ರೇಲರ್ ಗಮನ ಸೆಳೆದಿದೆ. ಈ ಚಿತ್ರದ ಟ್ರೇಲರ್ ಈವರೆಗೆ 11 ಮಿಲಿಯನ್ ಅಂದರೆ 1.1 ಕೋಟಿ ಬಾರಿ ವೀಕ್ಷಣೆ ಕಂಡಿದೆ. ಈ ದಾಖಲೆಯನ್ನು ವಿಜಯ್ ಕಾರ್ತಿಕೇಯ ನಿರ್ದೇಶನದ ಮಾರ್ಕ್ ಟ್ರೇಲರ್ ಕೇವಲ 10 ಗಂಟೆ ಅವಧಿಯಲ್ಲಿ ಮುರಿದು ಹಾಕಿದೆ. ಸದ್ಯ ಮಾರ್ಕ್ ಟ್ರೇಲರ್ 14 ಮಿಲಿಯನ್ ವೀಕ್ಷಣೆ ಕಂಡಿದೆ. ಅಂದರೆ, 1.1 ಕೋಟಿ ಬಾರಿ ಟ್ರೇಲರ್ ವೀಕ್ಷಣೆ ಕಂಡಿದೆ.
ಇದನ್ನೂ ಓದಿ: ‘ಮಾರ್ಕ್’ ಎಷ್ಟು ದೊಡ್ಡ ಸಿನಿಮಾ? ವಿವರಿಸಿದ ಕಿಚ್ಚ ಸುದೀಪ್
‘ಕಾಟೇರ’ ಬಳಿಕ ತೆರೆಗೆ ಬರುತ್ತಿರುವ ದರ್ಶನ್ ಅಭಿನಯದ ಚಿತ್ರ ‘ಡೆವಿಲ್’. ಸದ್ಯ ಅವರು ಜೈಲಿನಲ್ಲಿ ಇರುವುದರಿಂದ ಅವರ ಮುಂದಿನ ಸಿನಿಮಾ ಸದ್ಯಕ್ಕಂತೂ ಬರೋದಿಲ್ಲ. ಇನ್ನು, ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರ ಕಳೆದ ವರ್ಷ ಡಿಸೆಂಬರ್‌ನಲ್ಲಿ ರಿಲೀಸ ಆಗಿತ್ತು. ಈಗ ಅದೇ ನಿರ್ದೇಶಕನ ಜೊತೆ ಅವರು ಮಾರ್ಕ್ ಸಿನಿಮಾ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.