ಈ ಚಾಲೆಂಜ್​ ಗೆದ್ದರೆ ನಿಮಗೆ ಸಿಗಲಿದೆ ಮೇಘನಾ ರಾಜ್ ಭೇಟಿ ಮಾಡುವ ಅವಕಾಶ; ನೀವು ಮಾಡಬೇಕಾಗಿದ್ದಿಷ್ಟೇ..

|

Updated on: Aug 16, 2023 | 1:03 PM

Meghana Raj: ಸಿನಿಮಾ ಪ್ರಚಾರಕ್ಕೆ ಸೆಲೆಬ್ರಿಟಿಗಳು ನಾನಾ ಮಾರ್ಗ ಅನುಸರಿಸುತ್ತಾರೆ. ನಟಿ ಮೇಘನಾ ರಾಜ್ ಅವರು ಕೂಡ ಈಗ ಇದೇ ತಂತ್ರ ಮಾಡಿದ್ದಾರೆ. ಅವರು ಕಂಬ್ಯಾಕ್ ಮಾಡುತ್ತಿರುವ ‘ತತ್ಸಮ ತದ್ಭವ’ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಪ್ರಚಾರದ ಭಾಗವಾಗಿ ಅವರು ಒಂದು ಟಾಸ್ಕ್ ನೀಡಿದ್ದಾರೆ.

ಈ ಚಾಲೆಂಜ್​ ಗೆದ್ದರೆ ನಿಮಗೆ ಸಿಗಲಿದೆ ಮೇಘನಾ ರಾಜ್ ಭೇಟಿ ಮಾಡುವ ಅವಕಾಶ; ನೀವು ಮಾಡಬೇಕಾಗಿದ್ದಿಷ್ಟೇ..
ಮೇಘನಾ ರಾಜ್
Follow us on

ಸೆಲೆಬ್ರಿಟಿಗಳನ್ನು ಭೇಟಿ ಆಗಬೇಕು ಎಂಬುದು ಅನೇಕರ ಆಸೆ ಆಗಿರುತ್ತದೆ. ಭೇಟಿ ಆದಮೇಲೆ ನಾಲ್ಕು ಮಾತನಾಡಿದರಂತೂ ಅಭಿಮಾನಿಗಳ ಖುಷಿಗೆ ಪಾರವೇ ಇರುವುದಿಲ್ಲ. ಆದರೆ, ಎಲ್ಲಾ ಸೆಲೆಬ್ರಿಟಿಗಳು ಅಷ್ಟು ಸುಲಭಕ್ಕೆ ಸಿಗುವುದಿಲ್ಲ. ಸಿಕ್ಕರೂ ಮಾತನಾಡೋಕೆ ಅವರಿಗೆ ಸಮಯ ಇರುವುದಿಲ್ಲ. ಈಗ ನಟಿ ಮೇಘನಾ ರಾಜ್ (Meghana Raj) ಅವರು ತಮ್ಮನ್ನು ಭೇಟಿ ಆಗೋಕೆ ಅವಕಾಶ ನೀಡಿದ್ದಾರೆ. ಅದಕ್ಕೆ ಅವರು ಕೊಟ್ಟ ಒಂದು ಚಾಲೆಂಜ್​ನ ಗೆಲ್ಲಬೇಕು. ಹಾಗೆ ಚಾಲೆಂಜ್ ಗೆದ್ದ ಮೂವರಿಗೆ ಮೇಘನಾ ರಾಜ್​ನ ಭೇಟಿ ಮಾಡುವ ಮತ್ತು ಸ್ವಲ್ಪ ಹೊತ್ತು ಮಾತನಾಡುವ ಅವಕಾಶ ಸಿಗಲಿದೆ.

ಸಿನಿಮಾ ಪ್ರಚಾರಕ್ಕೆ ಸೆಲೆಬ್ರಿಟಿಗಳು ನಾನಾ ಮಾರ್ಗ ಅನುಸರಿಸುತ್ತಾರೆ. ನಟಿ ಮೇಘನಾ ರಾಜ್ ಅವರು ಕೂಡ ಈಗ ಇದೇ ತಂತ್ರ ಮಾಡಿದ್ದಾರೆ. ಅವರು ಕಂಬ್ಯಾಕ್ ಮಾಡುತ್ತಿರುವ ‘ತತ್ಸಮ ತದ್ಭವ’ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಪ್ರಚಾರದ ಭಾಗವಾಗಿ ಅವರು ಒಂದು ಟಾಸ್ಕ್ ನೀಡಿದ್ದಾರೆ.

‘ತತ್ಸಮ ತದ್ಭವ ಚಿತ್ರದ ‘ದೂರಿ ಲಾಲಿ..’ ಹಾಡು ರಿಲೀಸ್ ಆಗಿದೆ. ತಾಯಿ ಮಗುವನ್ನು ಮಲಗಿಸಲು ಹಾಡುವ ಹಾಡು ಇದು. ಈ ಹಾಡಿಗೆ ಮೇಘನಾ ರಾಜ್ ರೀಲ್ಸ್​ ಮಾಡಿದ್ದಾರೆ. ಮಗ ರಾಯನ್ ರಾಜ್ ಸರ್ಜಾನ ಮಲಗಿಸಲು ಮೇಘನಾ ಈ ಹಾಡನ್ನು ಹಾಡಿದ್ದಾರೆ. ಜೊತೆಗೆ ಅವರು ಒಂದು ಚಾಲೆಂಜ್ ನೀಡಿದ್ದಾರೆ.

‘ನಮ್ಮ ಸಿನಿಮಾ ತತ್ಸಮ ತದ್ಭವ ಸಿನಿಮಾದ ದೂರಿ ಲಾಲಿ ಹಾಡು ರಿಲೀಸ್ ಆಗಿದೆ. ಅದನ್ನು ಕೇಳಿ ಖುಷಿಪಟ್ಟಿದ್ದೀರಿ ಎಂದು ನಾನು ಭಾವಿಸುತ್ತೇನೆ. ದೂರಿ ಲಾಲಿ ಚಾಲೆಂಜ್ ಕೊಡುತ್ತಿದ್ದೇನೆ. ಈ ಹಾಡನ್ನು ಹಾಡುತ್ತಾ ನಿಮ್ಮ ಮಗುವನ್ನು ಹೇಗೆ ಮಲಗಿಸುತ್ತೀರಿ ಎಂಬ ವಿಡಿಯೋನ ರೀಲ್ಸ್​ನಲ್ಲಿ ಅಪ್​ಲೋಡ್ ಮಾಡಿ. ಗೆದ್ದ ಮೂವರು ತಾಯಂದಿರಿಗೆ ನನ್ನ ಭೇಟಿ ಮಾಡುವ ಅವಕಾಶ ಸಿಗುತ್ತದೆ. ಆಗ ನಿಮ್ಮ ಮಕ್ಕಳ ಬಗ್ಗೆ ನನ್ನ ಬಳಿ, ನನ್ನ ಮಕ್ಕಳ ಬಗ್ಗೆ ನಿಮ್ಮ ಬಳಿ ಮಾತನಾಡುತ್ತಾ ಸ್ವಲ್ಪ ಸಮಯ ಕಳೆಯಬಹುದು’ ಎಂದು ಮೇಘನಾ ರಾಜ್ ಹೇಳಿದ್ದಾರೆ.

ಇದನ್ನೂ ಓದಿ: ‘ಒಳ್ಳೆಯವರಿಗೆ ಏಕೆ ಶಿಕ್ಷೆ ಆಗುತ್ತಿದೆ?’; ಸ್ಪಂದನಾ ಸಾವಿಗೆ ಮೇಘನಾ ರಾಜ್ ಬೇಸರ

ಈ ವಿಡಿಯೋಗೆ DooriLaaliChallenge ಹ್ಯಾಶ್​ಟ್ಯಾಗ್ ಹಾಕಬೇಕು. ಜೊತೆಗೆ ಮೇಘನಾ ರಾಜ್ ಸೇರಿ ಕೆಲವರಿಗೆ ಈ ವಿಡಿಯೋನ ಟ್ಯಾಗ್​ ಮಾಡಬೇಕು. ಬಳಿಕ ತಂಡದವರು ಮೂವರು ವಿನ್ನರ್​​ಗಳ ಹೆಸರನ್ನು ಘೋಷಣೆ ಮಾಡುತ್ತಾರೆ. ‘ತತ್ಸಮ ತದ್ಭವ’ ಸಿನಿಮಾನ ವಿಶಾಲ್ ಆತ್ರೇಯ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಪನ್ನಗ ಭರಣ ಹಾಗೂ ಸ್ಫೂರ್ತಿ ಅನಿಲ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಇದೆ. ಪ್ರಜ್ವಲ್ ದೇವರಾಜ್ ಹಾಗೂ ಮೊದಲಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:01 pm, Wed, 16 August 23