ತಮಿಳು ಆಯ್ತು, ಈಗ ಮಲಯಾಳಂನಿಂದಲೂ ಶಿವಣ್ಣನಿಗೆ ಬೇಡಿಕೆ: ಚಾಲ್ತಿಯಲ್ಲಿದೆ ಮಾತುಕತೆ

Shiva Rajkumar: ತಮಿಳಿನ 'ಜೈಲರ್' ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟನೆಯ ಸಣ್ಣ ಪಾತ್ರ ಭಾರಿ ಜನಮನ್ನಣೆಗಳಿಸಿದ್ದು ಇದೀಗ ಮಲಯಾಳಂನಿಂದಲೂ ಶಿವಣ್ಣನಿಗೆ ಬೇಡಿಕೆ ಬಂದಿದೆ.

ತಮಿಳು ಆಯ್ತು, ಈಗ ಮಲಯಾಳಂನಿಂದಲೂ ಶಿವಣ್ಣನಿಗೆ ಬೇಡಿಕೆ: ಚಾಲ್ತಿಯಲ್ಲಿದೆ ಮಾತುಕತೆ
ಶಿವರಾಜ್ ಕುಮಾರ್
Follow us
ಮಂಜುನಾಥ ಸಿ.
|

Updated on: Aug 16, 2023 | 7:07 PM

ಕನ್ನಡ ಪ್ರೇಕ್ಷಕನಿಗೆ ಗೊತ್ತಿದ್ದ ಶಿವರಾಜ್ ಕುಮಾರ್ (Shiva Rajkumar) ಗತ್ತು, ‘ಜೈಲರ್‘ (Jailer) ಸಿನಿಮಾ ಮೂಲಕ ತಮಿಳು ಪ್ರೇಕ್ಷಕನಿಗೂ ತಿಳಿಯುವಂತಾಯ್ತು. ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮಾಡಿರುವ ಸಣ್ಣ ಪಾತ್ರ, ಇತರ ಪಾತ್ರಗಳನ್ನು ನುಂಗಿ ಹಾಕಿ, ಭರಪೂರ ಶಿಳ್ಳೆ, ಚಪ್ಪಾಳೆಗಳನ್ನು ಗಿಟ್ಟಿಸಿಕೊಳ್ಳುತ್ತಿದೆ. ‘ಜೈಲರ್’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸ್ವ್ಯಾಗ್ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿದ್ದು, ಇದೀಗ ಮಲಯಾಳಂ (Malayalam) ಚಿತ್ರರಂಗದಲ್ಲೂ ಶಿವಣ್ಣನಿಗೆ ಬೇಡಿಕೆ ಶುರುವಾಗಿದೆ.

ಮಲಯಾಳಂ ಸ್ಟಾರ್ ನಟ, ನಿರ್ದೇಶಕ, ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾಕ್ಕಾಗಿ ಶಿವರಾಜ್ ಕುಮಾರ್ ಅವರನ್ನು ಕೇಳಲಾಗಿದೆ. ಪೃಥ್ವಿರಾಜ್ ಸುಕುಮಾರನ್, ತಮ್ಮ ಮೆಚ್ಚಿನ ನಟ ಮೋಹನ್​ಲಾಲ್ ಅವರಿಗಾಗಿ ‘ಎಲ್​2: ಎಂಪುರಾನ್’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಮೋಹನ್​ಲಾಲ್ ಜೊತೆಗೆ ಇನ್ನೂ ಕೆಲವು ಪ್ರತಿಭಾವಂತ ನಟರಿದ್ದಾರೆ. ಇದೇ ಸಿನಿಮಾದಲ್ಲಿ ಅತಿಥಿ ಪಾತ್ರಕ್ಕಾಗಿ ಶಿವರಾಜ್ ಕುಮಾರ್ ಅವರನ್ನು ಕೇಳಲಾಗಿದೆ.

‘ಎಲ್​2: ಎಂಪುರಾನ್’ ಸಿನಿಮಾವು, ಮೋಹನ್​ಲಾಲ್ ನಟಿಸಿ ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ್ದ ಸೂಪರ್ ಹಿಟ್ ಸಿನಿಮಾ ‘ಲುಸಿಫರ್’ನ ಮುಂದಿನ ಭಾಗವಾಗಿದ್ದು, ಆ ಸಿನಿಮಾದಲ್ಲಿ ಸಾಕಷ್ಟು ಮಾಸ್ ಎಲಿಮೆಂಟ್​ಗಳು ಇದ್ದವು. ‘ಎಲ್​2: ಎಂಪುರಾನ್’ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾವನ್ನಾಗಿ ಮಾಡುವ ಯೋಚನೆಯಲ್ಲಿ ಪೃಥ್ವಿರಾಜ್ ಸುಕುಮಾರ್ ಇದ್ದು, ಅದೇ ಕಾರಣಕ್ಕೆ ಶಿವರಾಜ್ ಕುಮಾರ್ ಅವರನ್ನು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಪೃಥ್ವಿರಾಜ್ ಕೇಳಿದ್ದಾರೆ. ಮೋಹನ್​ಲಾಲ್ ಜೊತೆಗೆ ಆತ್ಮೀಯ ಬಂಧ ಹೊಂದಿರುವ ಶಿವಣ್ಣನೂ ಎಸ್ ಎಂದಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ತಮ್ಮದೇ ನಟನೆಯ ‘ಜೈಲರ್’ ಸಿನಿಮಾ ನೋಡಿದ ಶಿವರಾಜ್ ಕುಮಾರ್ ಸಿನಿಮಾದ ಬಗ್ಗೆ ಹೇಳಿದ್ದು ಹೀಗೆ

ಇನ್ನುಳಿದಂತೆ ಶಿವರಾಜ್ ಕುಮಾರ್ ತಮಿಳಿನ ‘ಜೈಲರ್’ ಸಿನಿಮಾದ ಜೊತೆಗೆ ಧನುಶ್ ಜೊತೆಗೆ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅತಿಥಿ ಪಾತ್ರವಲ್ಲದೆ ಸಹ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇನ್ನು ಕನ್ನಡದಲ್ಲಿ ‘ಘೋಸ್ಟ್’ ಸಿನಿಮಾದ ಶೂಟಿಂಗ್ ಅನ್ನು ಮುಗಿಸಿದ್ದು, ಹರ್ಷ ಜೊತೆಗಿನ ಸಿನಿಮಾ, ತೆಲುಗು ನಿರ್ದೇಶಕರೊಬ್ಬರ ಕನ್ನಡ ಸಿನಿಮಾ, ನರ್ತನ್ ನಿರ್ದೇಶನದ ‘ಭೈರತಿ ರಣಗಲ್’ ಸಿನಿಮಾ ಇನ್ನೂ ಹಲವು ಸಿನಿಮಾಗಳಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ. ಇದರ ಜೊತೆಗೆ ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ಜೊತೆಗೆ ಮತ್ತೊಂದು ಸಿನಿಮಾದಲ್ಲಿಯೂ ಶಿವರಾಜ್ ಕುಮಾರ್ ನಟಿಸುವ ಸಾಧ್ಯತೆ ಇದೆ. ‘ಜೈಲರ್’ ಸಿನಿಮಾದಲ್ಲಿನ ಶಿವರಾಜ್ ಕುಮಾರ್ ಅವರ ಸಣ್ಣ ಪಾತ್ರ ಅವರಿಗೆ ಪರ ರಾಜ್ಯಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಜನಮನ್ನಣೆ ದೊರಕಿಸಿಕೊಟ್ಟಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ