400 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಜೈಲರ್’ ಸಿನಿಮಾ; ಕರ್ನಾಟಕದಲ್ಲಿ ಎಷ್ಟು ಗಳಿಕೆ?

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದ ‘ಜೈಲರ್’ ಸಿನಿಮಾ ತಮಿಳುನಾಡಿನಲ್ಲಿ ಅಬ್ಬರಿಸಿದೆ. ಈ ಸಿನಿಮಾ ತಮಿಳುನಾಡಿನಲ್ಲಿ ಆರು ದಿನಕ್ಕೆ 134 ಕೋಟಿ ರೂಪಾಯಿ ಬಾಚಿಕೊಂಡಿದೆ. ಆಂಧ್ರ ಪ್ರದೇಶ-ನಿಜಾಮ್ ಭಾಗದಲ್ಲಿ ಸಿನಿಮಾಗೆ 49 ಕೋಟಿ ರೂಪಾಯಿ ಗಳಿಕೆ ಆಗಿದೆ.

400 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಜೈಲರ್’ ಸಿನಿಮಾ; ಕರ್ನಾಟಕದಲ್ಲಿ ಎಷ್ಟು ಗಳಿಕೆ?
ರಜನಿಕಾಂತ್​, ಶಿವರಾಜ್​ಕುಮಾರ್​
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Aug 16, 2023 | 12:17 PM

ನಟ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ (Jailer Movie) ಆಗಸ್ಟ್ 10ರಂದು ವಿಶ್ವಾದ್ಯಂತ ರಿಲೀಸ್ ಆಯಿತು. ಮಲ್ಟಿ ಸ್ಟಾರರ್ ಸಿನಿಮಾ ಎನ್ನುವ ಕಾರಣಕ್ಕೆ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇತ್ತು. ಹೀಗಾಗಿ, ಈ ಚಿತ್ರಕ್ಕೆ ಮೊದಲ ದಿನವೇ ಭರ್ಜರಿ ಸ್ವಾಗತ ಸಿಕ್ಕಿತು. ಬಾಕ್ಸ್ ಆಫೀಸ್​ನಲ್ಲಿ ಸಿನಿಮಾ ಮ್ಯಾಜಿಕ್ ಮಾಡಿದೆ. ಆರು ದಿನಕ್ಕೆ ಈ ಚಿತ್ರದ ಒಟ್ಟಾರೆ ಗಳಿಕ 400 ಕೋಟಿ ರೂಪಾಯಿ ಆಗಿದೆ. ವಿಶ್ವ ಮಟ್ಟದಲ್ಲಿ ಸಿನಿಮಾ ಸದ್ದು ಮಾಡುತ್ತಿದೆ. ರಜನಿಕಾಂತ್ (Rajinikanth) ವೃತ್ತಿ ಜೀವನದಲ್ಲಿ ಈ ಚಿತ್ರ ಪ್ರಮುಖ ಎನಿಸಿಕೊಂಡಿದೆ. ಕರ್ನಾಟಕದಲ್ಲೂ ಸಿನಿಮಾಗೆ ಒಳ್ಳೆಯ ಗಳಿಕೆ ಆಗಿದೆ.

ರಜನಿಕಾಂತ್ ಅವರು ಸೂಪರ್ ಸ್ಟಾರ್ ಎಂದೇ ಫೇಮಸ್ ಆದವರು. ಅವರನ್ನು ಆರಾಧಿಸುವ ಅನೇಕರಿದ್ದಾರೆ. ಅವರ ನಟನೆಯ ‘ಜೈಲರ್’ ಟ್ರೇಲರ್ ನೋಡಿ ಜನರು ಮೆಚ್ಚಿಕೊಂಡಿದ್ದರು. ಸಿನಿಮಾ ಕೂಡ ನಿರೀಕ್ಷೆಯ ಮಟ್ಟವನ್ನೂ ಮೀರಿದ್ದರಿಂದ ಸಹಜವಾಗಿಯೇ ಉತ್ತಮ ಗಳಿಕೆ ಆಗುತ್ತಿದೆ. ಬೇರೆ ಬೇರೆ ಭಾಷೆಯ ಸ್ಟಾರ್​ಗಳು ನಟಿಸಿದ್ದು ಚಿತ್ರಕ್ಕೆ ಸಹಕಾರಿ ಆಗಿದೆ. ತಮನ್ನಾ ಹೆಜ್ಜೆ ಹಾಕಿದ ‘ಕಾವಾಲಾ..’ ಹಾಡು ಕೂಡ ಮೋಡಿ ಮಾಡಿದೆ. ಈ ಎಲ್ಲಾ  ಕಾರಣದಿಂದ ಸಿನಿಮಾದ ಗಳಿಕೆ ಆರು ದಿನಕ್ಕೆ 400 ಕೋಟಿ ರೂಪಾಯಿ ಆಗಿದೆ.

ಯಾವ ರಾಜ್ಯದಲ್ಲಿ ಎಷ್ಟೆಷ್ಟು ಗಳಿಕೆ?

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದ ‘ಜೈಲರ್’ ಸಿನಿಮಾ ತಮಿಳುನಾಡಿನಲ್ಲಿ ಅಬ್ಬರಿಸಿದೆ. ಈ ಸಿನಿಮಾ ತಮಿಳುನಾಡಿನಲ್ಲಿ ಆರು ದಿನಕ್ಕೆ 134 ಕೋಟಿ ರೂಪಾಯಿ ಬಾಚಿಕೊಂಡಿದೆ. ಆಂಧ್ರ ಪ್ರದೇಶ-ನಿಜಾಮ್ ಭಾಗದಲ್ಲಿ ಸಿನಿಮಾಗೆ 49 ಕೋಟಿ ರೂಪಾಯಿ ಗಳಿಕೆ ಆಗಿದೆ. ಈ ಚಿತ್ರ ತೆಲುಗಿಗೂ ಡಬ್ ಆಗಿ ರಿಲೀಸ್ ಆಗಿದ್ದರಿಂದ ತೆಲುಗು ಭಾಗದ ಕಲೆಕ್ಷನ್ ಹೆಚ್ಚಲು ಸಹಕಾರಿ ಆಗಿದೆ. ತೆಲುಗಿನಲ್ಲಿ ರಿಲೀಸ್ ಆದ ‘ಭೋಲಾ ಶಂಕರ್’ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದು ‘ಜೈಲರ್’ ಚಿತ್ರದ ಕಲೆಕ್ಷನ್ ಹೆಚ್ಚಲು ಪ್ರಮುಖ ಕಾರಣ.

ಕೇರಳದಲ್ಲಿ ಈ ಚಿತ್ರ 33 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಚಿತ್ರದಲ್ಲಿ ಮಲಯಾಳಂ ನಟರಾದ ಮೋಹನ್​ಲಾಲ್ ಹಾಗೂ ವಿನಾಯಕನ್ ಅಭಿನಯಿಸಿದ್ದಾರೆ. ವಿನಾಯಕನ್ ಅವರು ವಿಲನ್ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಇನ್ನು ಕರ್ನಾಟಕದಲ್ಲಿ ಚಿತ್ರ ಅಬ್ಬರಿಸಿದೆ. ಈ ಸಿನಿಮಾ ನಮ್ಮ ರಾಜ್ಯದಲ್ಲಿ 44 ಕೋಟಿ ರೂಪಾಯಿ ಬಾಚಿಕೊಂಡಿದೆ. ಶಿವರಾಜ್​ಕುಮಾರ್ ಅವರ ಮಾಸ್ ಎಂಟ್ರಿಗೆ ಜನರು ಫಿದಾ ಆಗಿದ್ದಾರೆ. ಇದು ಕರ್ನಾಟಕದ ಕಲೆಕ್ಷನ್ ಹೆಚ್ಚಲು ಪ್ರಮುಖ ಕಾರಣ. ಉಳಿದ ರಾಜ್ಯಗಳಿಂದ ಚಿತ್ರಕ್ಕೆ 7 ಕೋಟಿ ರೂಪಾಯಿ ಸಿಕ್ಕಿದೆ.

ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಎರಡು ಗಂಟೆ ಟ್ರೆಕ್ಕಿಂಗ್ ಮಾಡಿ ಗುರುಗಳ ಭೇಟಿ ಮಾಡಿದ ರಜನಿಕಾಂತ್

ವಿದೇಶದಲ್ಲೂ ಈ ಚಿತ್ರ ರಿಲೀಸ್ ಆಗಿದೆ. ಅಲ್ಲಿಯೂ ರಜನಿಗೆ ಅಭಿಮಾನಿಗಳಿದ್ದಾರೆ. ಈ ಸಿನಿಮಾಗೆ ವಿದೇಶದಲ್ಲಿ 145 ಕೋಟಿ ರೂಪಾಯಿ ಗಳಿಕೆ ಆಗಿದೆ. ಈ ಮೂಲಕ ವಿಶ್ವ ಮಟ್ಟದಲ್ಲಿ ಈ ಚಿತ್ರದ ಗಳಿಕೆ 410 ಕೋಟಿ ರೂಪಾಯಿ ಆಗಿದೆ.

ವಾರಾದ ದಿನದಲ್ಲೂ ಅಬ್ಬರ

‘ಜೈಲರ್’ ಸಿನಿಮಾಗೆ ವೀಕೆಂಡ್ ಹಾಗೂ ಸ್ವಾತಂತ್ರ್ಯೋತ್ಸವದ ದಿನ ಭರ್ಜರಿ ಕಲೆಕ್ಷನ್ ಆಗಿದೆ. ಇದರ ಜೊತೆಗೆ ವಾರದ ದಿನಗಳಲ್ಲೂ ಸಿನಿಮಾ ಅಬ್ಬರಿಸುತ್ತಿದೆ. ಅನೇಕ ಕಡೆಗಳಲ್ಲಿ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಮಲ್ಟಿಪ್ಲೆಕ್ಸ್​​ನಲ್ಲಿ ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಆಗುತ್ತಿದೆ.

ಹಿಮಾಚಲ ಪ್ರದೇಶದಲ್ಲಿ ರಜನಿಕಾಂತ್

‘ಜೈಲರ್’ ಸಿನಿಮಾ ಇಷ್ಟು ದೊಡ್ಡ ಮಟ್ಟದ ಗಳಿಕೆ ಮಾಡುತ್ತಿರುವುದು ರಜನಿಕಾಂತ್​ಗೆ ಖುಷಿ ನೀಡಿದೆ. ಅವರು ಸಿನಿಮಾ ರಿಲೀಸ್​ಗೂ ಮೊದಲೇ ಹಿಮಾಚಲ ಪ್ರದೇಶಕ್ಕೆ ತೆರಳಿದ್ದರು. ಈಗ ಅಲ್ಲಿಯೇ ಇದ್ದಾರೆ. ಆಧ್ಯಾತ್ಮ ಗುರುಗಳನ್ನು ಅವರು ಭೇಟಿ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ