ಹಿಮಾಚಲ ಪ್ರದೇಶದಲ್ಲಿ ಎರಡು ಗಂಟೆ ಟ್ರೆಕ್ಕಿಂಗ್ ಮಾಡಿದ ರಜನಿಕಾಂತ್

ಆಗಸ್ಟ್ 15ರಂದು ಅವರು ಉತ್ತರಕಾಂಡದ ಮಹಾವತಾರ್ ಬಾಬಾಜಿ ಗುಹೆಗೆ ತೆರಳಲು ಎರಡು ಗಂಟೆಗಳ ಕಾಲ ಟ್ರೆಕ್ಕಿಂಗ್ ಮಾಡಿದ್ದಾರೆ. ಗುಹೆಯಲ್ಲಿ ರಜನಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಧ್ಯಾನದಲ್ಲಿ ಮಗ್ನರಾದರು.  ಅವರ ಹಿಮಾಲಯ ಪ್ರವಾಸದ ವಿಡಿಯೋಗಳು ವೈರಲ್ ಆಗಿವೆ.

ಹಿಮಾಚಲ ಪ್ರದೇಶದಲ್ಲಿ ಎರಡು ಗಂಟೆ ಟ್ರೆಕ್ಕಿಂಗ್ ಮಾಡಿದ ರಜನಿಕಾಂತ್
ರಜನಿಕಾಂತ್
Follow us
|

Updated on:Aug 16, 2023 | 12:13 PM

ರಜನಿಕಾಂತ್ (Rajinikanth) ನಟನೆಯ ‘ಜೈಲರ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಮತ್ತೊಂದು ಕಡೆ ರಜನಿಕಾಂತ್ ಅವರು ಮನಶಾಂತಿಯನ್ನು ಅರಸಿ ಹಿಮಾಲಯಕ್ಕೆ ತೆರಳಿದ್ದಾರೆ. ಹಲವು ಆಧ್ಯಾತ್ಮಿಕ ಗುರುಗಳನ್ನು ಭೇಟಿ ಮಾಡುತ್ತಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ರಜನಿಕಾಂತ್ ಅವರು ಹಿಮಾಚಲ ಪ್ರದೇಶಕ್ಕೆ ತೆರಳಿ ವಾರದ ಮೇಲಾಗಿದೆ. ಇನ್ನೂ ಕೆಲವು ದಿನಗಳು ಅವರು ಅಲ್ಲಿಯೇ ಉಳಿದುಕೊಳ್ಳಲಿದ್ದಾರೆ.

‘ಜೈಲರ್’ ಸಿನಿಮಾ ಆಗಸ್ಟ್ 10ರಂದು ರಿಲೀಸ್ ಆಯಿತು. ಈ ಚಿತ್ರ ರಿಲೀಸ್​ಗೂ ಮೊದಲೇ ರಜನಿಕಾಂತ್ ಅವರು ಹಿಮಾಚಲ ಪ್ರದೇಶಕ್ಕೆ ತೆರಳಿದರು. ಮೊದಲು ಅವರು ಹೃಷಿಕೇಶಕ್ಕೆ ತೆರಳಿದ್ದಾರೆ. ಅಲ್ಲಿ ಕೆಲ ಸಮಯ ತಂಗಿ ಬೇರೆ ಕಡೆ ಹೊರಟಿದ್ದಾರೆ. ರಜನಿಕಾಂತ್ ಜೊತೆ ಅವರ ಗೆಳೆಯರು ಸಾಥ್ ನಿಡಿದ್ದಾರೆ. ಆಗಸ್ಟ್ 15ರಂದು ಅವರು ಉತ್ತರಕಾಂಡದ ಮಹಾವತಾರ್ ಬಾಬಾಜಿ ಗುಹೆಗೆ ತೆರಳಲು ಎರಡು ಗಂಟೆಗಳ ಕಾಲ ಟ್ರೆಕ್ಕಿಂಗ್ ಮಾಡಿದ್ದಾರೆ. ಗುಹೆಯಲ್ಲಿ ರಜನಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಧ್ಯಾನದಲ್ಲಿ ಮಗ್ನರಾದರು.  ಅವರ ಹಿಮಾಲಯ ಪ್ರವಾಸದ ವಿಡಿಯೋಗಳು ವೈರಲ್ ಆಗಿವೆ.

ರಜನಿಕಾಂತ್ ಅವರು 1992ರಿಂದಲೂ ಹಿಮಾಲಯಕ್ಕೆ ತೆರಳುವ ರೂಢಿ ಇಟ್ಟುಕೊಂಡಿದ್ದಾರೆ. ಕೊವಿಡ್ ಬಂದಿದ್ದರಿಂದ ಕಳೆದ ನಾಲ್ಕು ವರ್ಷಗಳಿಂದ ಅವರಿಗೆ ಹಿಮಾಚಲ ಪ್ರದೇಶಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಈಗ ರಜನಿ ಮತ್ತೆ ಆಧ್ಯಾತ್ಮ ಗುರುಗಳನ್ನು ಭೇಟಿ ಮಾಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ.

ಇದನ್ನೂ ಓದಿ: ಇದು ಮಾಸ್ ಮಸಾಲ ‘ಜೈಲರ್’; ಇಷ್ಟವಾಗುತ್ತೆ ರಜನಿ, ಶಿವಣ್ಣನ ಖದರ್

‘ಜೈಲರ್’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಮಟ್ಟದಲ್ಲಿ ಕಮಾಯಿ ಮಾಡುತ್ತಿದೆ. ಸಿನಿಮಾ ನೋಡಿದ ಅನೇಕರು ಮೆಚ್ಚಿಕೊಂಡಿದ್ದಾರೆ. ಶಿವರಾಜ್​ಕುಮಾರ್, ಮೋಹನ್​ಲಾಲ್, ಜಾಕಿ ಶ್ರಾಫ್ ಮೊದಲಾದ ಸ್ಟಾರ್ ಹೀರೋಗಳು ಸಿನಿಮಾದಲ್ಲಿ ನಟಿಸಿದ್ದಾರೆ. ನೆಲ್ಸನ್ ದಿಲೀಪ್​ ಕುಮಾರ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:52 am, Wed, 16 August 23