Jailer Movie Review: ಇದು ಮಾಸ್ ಮಸಾಲ ‘ಜೈಲರ್’; ಇಷ್ಟವಾಗುತ್ತೆ ರಜನಿ, ಶಿವಣ್ಣನ ಖದರ್

ರಜನಿಕಾಂತ್ ವಯಸ್ಸು ಈಗ 72 ವರ್ಷ ದಾಟಿದೆ. ಆದರೂ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಮಾಸ್​ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ನಟಿಸುತ್ತಾರೆ. ಈಗ ಅವರ ನಟನೆಯ ‘ಜೈಲರ್’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಕೂಡ ನಟಿಸಿದ್ದಾರೆ. ಈ ಚಿತ್ರದ ವಿಮರ್ಶೆ ಇಲ್ಲಿದೆ.

Jailer Movie Review: ಇದು ಮಾಸ್ ಮಸಾಲ ‘ಜೈಲರ್’; ಇಷ್ಟವಾಗುತ್ತೆ ರಜನಿ, ಶಿವಣ್ಣನ ಖದರ್
Jailer Movie Review
Follow us
|

Updated on:Aug 10, 2023 | 11:41 AM

ಸಿನಿಮಾ: ಜೈಲರ್

ಪಾತ್ರವರ್ಗ: ರಜನಿಕಾಂತ್, ಶಿವರಾಜ್​ಕುಮಾರ್, ಮೋಹನ್​ಲಾಲ್, ರಮ್ಯಾ ಕೃಷ್ಣ, ವಿನಾಯಕನ್ ಟಿ.ಕೆ. ಮೊದಲಾದವರು

ನಿರ್ದೇಶನ: ನೆಲ್ಸನ್ ದಿಲೀಪ್​ ಕುಮಾರ್

ನಿರ್ಮಾಣ: ಸನ್ ಪಿಕ್ಚರ್ಸ್​

ಸಂಗೀತ ಸಂಯೋಜನೆ: ಅನಿರುದ್ಧ್ ರವಿಚಂದರ್

ರೇಟಿಂಗ್: 3/5

ರಜನಿಕಾಂತ್ ಸಿನಿಮಾ ಎಂದಾಗ ಭರ್ಜರಿ ನಿರೀಕ್ಷೆ ಸೃಷ್ಟಿ ಆಗುತ್ತದೆ. ರಜನಿಕಾಂತ್ ಜೊತೆ ಶಿವರಾಜ್​ಕುಮಾರ್ ಕೂಡ ನಟಿಸಿದ್ದಾರೆ ಎಂದಾಗ ನಿರೀಕ್ಷೆ ದ್ವಿಗುಣ ಆಗೋದು ಸಹಜ. ಈ ಕಾರಣದಿಂದ ‘ಜೈಲರ್’ ಸಿನಿಮಾ ಹೈಪ್ ಸೃಷ್ಟಿ ಮಾಡಿತ್ತು. ಸಾಂಗ್ ಹಾಗೂ ಟ್ರೇಲರ್ ಮೂಲಕ ಗಮನ ಸೆಳೆದಿದ್ದ ಈ ಸಿನಿಮಾ ಇಂದು (ಆಗಸ್ಟ್ 10) ರಿಲೀಸ್ ಆಗಿದೆ. ಈ ಚಿತ್ರದ ವಿಮರ್ಶೆ ಟಿವಿ9 ಕನ್ನಡ ಡಿಜಿಟಲ್​ನಲ್ಲಿ.

‘ಟೈಗರ್’ ಮುತ್ತುವೇಲ್ ಪಾಂಡ್ಯನ್ ಅಲಿಯಾಸ್ ಮುತ್ತು (ರಜನಿಕಾಂತ್) ಪಕ್ಕಾ ಫ್ಯಾಮಿಲಿಮ್ಯಾನ್. ತಾನಾಯಿತು ತನ್ನ ಕುಟುಂಬವಾಯಿತು ಎಂದಿರುವವನು. ಈತನ ಮಗ ಅರ್ಜುನ್ (ವಸಂತ್ ರವಿ) ನಿಷ್ಠಾವಂತ ಪೊಲೀಸ್ ಅಧಿಕಾರಿ. ಮೊಮ್ಮಗ, ಪತ್ನಿ (ರಮ್ಯಾ ಕೃಷ್ಣನ್) ಜೊತೆ ಹಾಯಾಗಿ ಜೀವನ ನಡೆಸುತ್ತಿದ್ದಾನೆ ಮುತ್ತು. ಆದರೆ ಒಂದು ದಿನ ಏಕಾಏಕಿ ಮಗ ಕಾಣೆಯಾಗುತ್ತಾನೆ. ಮಗನ ಹುಡುಕಲು ಹೊರಟ ಟೈಗರ್​​ನ ನಿಜವಾದ ಮುಖ ಅನಾವರಣ ಆಗುತ್ತದೆ. ಆತನಿಗೆ ಮತ್ತೊಂದು ಮುಖವಿದೆ ಅನ್ನೋದು ಗೊತ್ತಾಗುತ್ತದೆ. ಅರ್ಜುನ್ ಕಾಣೆ ಆಗಿದ್ದು ಏಕೆ? ಆತನ ಹುಡುಕಲು ಮುತ್ತು ಯಶಸ್ವಿ ಆಗುತ್ತಾನಾ ಅನ್ನೋದು ಚಿತ್ರದ ಒಂದೆಳೆ ಆದರೆ ಸಿನಿಮಾ ಉದ್ದಕ್ಕೂ ಬರೋ ಟ್ವಿಸ್ಟ್​ಗಳು ಪ್ರೇಕ್ಷಕನಿಗೆ ಸಿಗೋ ಬೋನಸ್.

ರಜನಿಕಾಂತ್ ನಟನೆಗೆ ಫುಲ್ ಮಾರ್ಕ್ಸ್​

ರಜನಿಕಾಂತ್ ನಟನೆಯ ‘ಬಾಷಾ’ ಸಿನಿಮಾ 1995ರಲ್ಲಿ ತೆರೆಗೆ ಬಂತು. ಈ ಚಿತ್ರ ಸೂಪರ್ ಹಿಟ್ ಆಯಿತು. ರಜನಿಕಾಂತ್ ಅವರು ಎರಡು ಶೇಡ್​​ನಲ್ಲಿ ಗಮನ ಸೆಳೆದಿದ್ದರು. ‘ಜೈಲರ್’ ನೋಡಿದ ಪ್ರೇಕ್ಷಕರಿಗೂ ಇದೇ ಅನುಭವ ಆಗುತ್ತದೆ. ರೆಟ್ರೋ ರಜನಿಕಾಂತ್ ಅವರನ್ನು ತೆರೆಮೇಲೆ ನೋಡಿದಂತೆ ಆಗುತ್ತದೆ. ಸಿನಿಮಾದಲ್ಲಿ ಅವರ ನಟನೆ ನೋಡಿದ ಯಾರೊಬ್ಬರೂ ಅವರ ವಯಸ್ಸು 72 ದಾಟಿದೆ ಎಂದು ಹೇಳಲು ಸಾಧ್ಯವೇ ಇಲ್ಲ. ಅಷ್ಟು ಎನರ್ಜಿಟಿಕ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಸಿನಿಮಾ ಉದ್ದಕ್ಕೂ ಎಷ್ಟು ಸಾಧ್ಯವೋ ಅಷ್ಟು ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಮಾಸ್ ಡೈಲಾಗ್ ಮೂಲಕ ಮಾಸ್ ಪ್ರಿಯರಿಗೆ ರಸದೌತಣ ಉಣಿಸುತ್ತಾರೆ.

ಮುತ್ತುಗೆ ಬೆಂಬಲವಾಗಿ ನಿಂತ ತ್ರಿಮೂರ್ತಿಗಳು

ಶಿವರಾಜ್​ಕುಮಾರ್ ಅವರು ನರಸಿಂಹನಾಗಿ ಅಬ್ಬರಿಸಿದ್ದಾರೆ. ಶಿವಣ್ಣ ಅವರು ತಮ್ಮ ಖದರ್​ನ ಬಿಟ್ಟುಕೊಟ್ಟಿಲ್ಲ. ಕಥಾ ನಾಯಕನಿಗೆ ನರಸಿಂಹ ಮಾಡುವ ಸಹಾಯ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮೋಹನ್​ಲಾಲ್​, ಜಾಕಿ ಶ್ರಾಫ್ ಪಾತ್ರ ಕೂಡ ಚಿತ್ರದಲ್ಲಿ ಮುಖ್ಯವಾಗಿದೆ. ಅಷ್ಟಕ್ಕೂ ಈ ಮೂವರು ಕಥಾ ನಾಯಕನಿಗೆ ಮಾಡುವ ಸಹಾಯ ಏನು? ಅವರು ಎಷ್ಟು ಹೊತ್ತು ತೆರೆಮೇಲೆ ಬರುತ್ತಾರೆ? ಅನ್ನೋದನ್ನು ಚಿತ್ರದಲ್ಲಿಯೇ ನೋಡಿ ತಿಳಿದುಕೊಳ್ಳಬೇಕು. ಈ ಸಿನಿಮಾದ ಕಥೆ ಮಂಡ್ಯದಲ್ಲಿ ಸಾಗುತ್ತದೆ. ಹೀಗಾಗಿ ತಮಿಳು ಸಿನಿಮಾದಲ್ಲಿ ನೀವು ಕನ್ನಡ ಡೈಲಾಗ್ ಕೇಳಬಹುದು. ರಜನಿ ಹೇಳುವ ಕನ್ನಡದ ಡೈಲಾಗ್​ಗೆ ಶಿಳ್ಳೆ ಬೀಳೋದು ಪಕ್ಕಾ.

ಉಳಿದ ಪಾತ್ರವರ್ಗ ಹೇಗಿದೆ?

ವಿಲನ್ ಪಾತ್ರದಲ್ಲಿ ಮಲಯಾಳಂ ನಟ ವಿನಾಯಕನ್ ಗಮನ ಸೆಳೆಯುತ್ತಾರೆ. ಭಿನ್ನ ಮ್ಯಾನರಿಸಂನಿಂದ ಅವರು ಸಿನಿಮಾದ ತೂಕ ಹೆಚ್ಚಿಸಿದ್ದಾರೆ. ಸಿನಿಮಾ ಉದ್ದಕ್ಕೂ ಅವರ ಪಾತ್ರ ಹೈಲೈಟ್ ಆಗುತ್ತದೆ. ಯೋಗಿ ಬಾಬು, ಸುನಿಲ್ ಮೊದಲಾದವರ ಕಾಮಿಡಿ ಪಂಚಿಂಗ್ ಹೈಲೈಟ್ ಆಗಿದೆ. ತಮನ್ನಾ ಭಾಟಿಯಾ ಒಂದು ಹಾಡಿನ ಜೊತೆಗೆ ಕೆಲವೇ ದೃಶ್ಯಗಳಿಗೆ ಸೀಮಿತವಾಗಿದ್ದಾರೆ.

‘ಜೈಲರ್’ ಸಿನಿಮಾದಲ್ಲಿ ಬಿಜಿಎಂ ಪಾತ್ರ ದೊಡ್ಡದಿದೆ. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ನೀಡಿರುವ ಹಿನ್ನೆಲೆ ಸಂಗೀತ ರಜನಿ ಮಾಸ್​ಗಿರಿಗೆ ಮತ್ತಷ್ಟು ಶಕ್ತಿ ನೀಡಿದೆ. ಸಿನಿಮಾದಲ್ಲಿ ಕಾಮಿಡಿ ಕೂಡ ವರ್ಕ್​ ಆಗಿದೆ. ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಭರಪೂರ ಮನರಂಜನೆ ಪಕ್ಕಾ. ನಿರ್ದೇಶಕ ನೆಲ್ಸನ್ ಅವರ ಕೆಲಸ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ರಜನಿ ಅಭಿಮಾನಿಗಳಿಗೆ ಒಂದು ಮಾಸ್ ಮಸಾಲ ಎಂಟರ್​ಟೇನ್ ಸಿನಿಮಾ ನೀಡಲು ಅವರು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: ರಜನಿ-ಶಿವಣ್ಣ ನಟನೆಯ ‘ಜೈಲರ್’ ಚಿತ್ರದ ಮೊದಲಾರ್ಧ ಹೇಗಿದೆ? ಇಲ್ಲಿದೆ ರಿಪೋರ್ಟ್

ಸಿನಿಮಾದ ಕೆಲವು ಕಡೆಗಳಲ್ಲಿ ಭರ್ಜರಿ ಕ್ರೌರ್ಯ ಇದೆ. ಇದನ್ನು ಪ್ರೇಕ್ಷಕರು ಸಹಿಸಿಕೊಳ್ಳಬೇಕು. ಸಿನಿಮಾದ ಅವಧಿ ದೀರ್ಘ ಎನಿಸುತ್ತದೆ. ಹೀಗಾಗಿ, ಕೆಲವು ಕಡೆಗಳಲ್ಲಿ ಪ್ರೇಕ್ಷಕನಿಗೆ ಸುಸ್ತೆನಿಸಬಹುದು. ಕೆಲವು ಕಡೆಗಳಲ್ಲಿ ಚಿತ್ರದ ಕಥೆ ಎತ್ತತ್ತಲೋ ಸಾಗಿ ಮತ್ತೆ ಸರಿದಾರಿಗೆ ಬರುತ್ತದೆ. ವೇಗವಾಗಿ ಸಾಗುವ ಮೊದಲಾರ್ಧ, ದ್ವೀಯಾರ್ಧದಲ್ಲಿ ವೇಗ ಕಳೆದುಕೊಳ್ಳುತ್ತದೆ. ಕ್ಲೈಮ್ಯಾಕ್ಸ್ ವೇಳೆಗೆ ಸಿನಿಮಾ ಸ್ಪೀಡ್ ಪಡೆದುಕೊಳ್ಳುತ್ತದೆ. ಅಂದರೆ ಸಿನಿಮಾ ಅಲ್ಲಲ್ಲಿ ನಿಂತು ಸಾಗುತ್ತದೆ.  ಸಿನಿಮಾದ ನಿರೂಪಣೆಯಲ್ಲಿ ಯಾವುದೇ ಹೊಸತನ ಇಲ್ಲ. ಕೆಲವು ತಿರುವುಗಳನ್ನು ಪ್ರೇಕ್ಷಕರು ಸುಲಭವಾಗಿ ಊಹಿಸಬಹುದು. ‘ಕಾವಾಲಾ..’ ಬಿಟ್ಟು ಮತ್ತಾವುದೇ ಹಾಡು ಗುನುಗುವುದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:22 am, Thu, 10 August 23

ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ