Meghana Raj: ಜೂನಿಯರ್ ಚಿರುಗೆ ಆರು ತಿಂಗಳು; ಸಂಭ್ರಮಿಸಿದ ಮೇಘನಾ ರಾಜ್​

Junior Chiru: ಈಗ ಮೇಘನಾ ಮಗುವಿಗೆ ಆರು ತಿಂಗಳು ತುಂಬಿದ ಖುಷಿಯಲ್ಲಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

Meghana Raj: ಜೂನಿಯರ್ ಚಿರುಗೆ ಆರು ತಿಂಗಳು; ಸಂಭ್ರಮಿಸಿದ ಮೇಘನಾ ರಾಜ್​
ಮೇಘನಾ ರಾಜ್
Edited By:

Updated on: Apr 25, 2021 | 8:54 PM

ಮೇಘನಾ ರಾಜ್ ಮಗ ಸಿಂಬಾ ಜನಿಸಿ ಆರು ತಿಂಗಳು ಕಳೆದಿದೆ. ಈ ವಿಶೇಷ ಕ್ಷಣವನ್ನು ಮೇಘನಾ ರಾಜ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕ್ಯೂಟ್​ ಕ್ಯೂಟ್​ ಫೋಟೋಗಳನ್ನು ಅವರು ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ. ಸಿಂಬಾಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.

ಕಳೆದ ವರ್ಷ ಜನರು ಕೊರೋನಾದಿಂದ ತತ್ತರಿಸಿ, ಲಾಕ್‌ಡೌನ್‌ ಕಾರಣದಿಂದ ಬಂಧಿಯಾಗಿದ್ದರು. ಇದಾದ ಬೆನ್ನಲ್ಲೇ ನಟ ಚಿರಂಜೀವಿ ಸರ್ಜಾ ಹೃದಯಾಘಾತಕ್ಕೆ ತುತ್ತಾಗಿ ಅಕಾಲಿಕ ಮರಣಕ್ಕೆ ಹೊಂದಿದ್ದರು. ಇದು ಸರ್ಜಾ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿತ್ತು. ಈ ಸಂದರ್ಭದಲ್ಲಿ ಮೇಘನಾ ಗರ್ಭಿಣಿ ಆಗಿದ್ದರು.

ದುಃಖದಲ್ಲಿಯೇ ದಿನದೂಡಿದ ಮೇಘನಾ ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಗಂಡು ಮಗು ಜನಿಸಿದ್ದರಿಂದ ಆತನನ್ನು ಜೂನಿಯರ್​ ಚಿರು ಎಂದೇ ಕರೆಯಲಾಗಿತ್ತು. ಮಗನ ನಗುವಿನಲ್ಲಿ ಪತಿಯ ಸಾವಿನ ನೋವನ್ನು ಮರೆಯುವುದಾಗಿ ಮೇಘನಾ ಹೇಳಿಕೊಂಡಿದ್ದರು.

ಈಗ ಮೇಘನಾ ಮಗುವಿಗೆ ಆರು ತಿಂಗಳು ತುಂಬಿದ ಖುಷಿಯಲ್ಲಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಈ ಫೋಟೋ ಸಾಕಷ್ಟು ವೈರಲ್​ ಆಗಿದೆ.

ಇತ್ತೀಚೆಗೆ ಮಗುವಿಗೆ ಕೊರೊನಾ ಅಂಟುವ ಭಯ ಕಾಡಿದ ಬಗ್ಗೆ ಮೇಘನಾ ಹೇಳಿಕೊಂಡಿದ್ದರು. ನನ್ನ ಗೆಳೆಯರ ಜತೆ ನಾನು ಸಂಪರ್ಕದಲ್ಲಿದ್ದೆ. ಆದರೆ, ಅವರಿಗೆ ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿತ್ತು. ಹೀಗಾಗಿ, ನಾನು ಸೆಲ್ಫ್​ ಕ್ವಾರಂಟೈನ್​ ಆದೆ. ನನ್ನ ಮಗು ಹಾಗೂ ಪಾಲಕರ ಆರೋಗ್ಯದ ಬಗ್ಗೆ ನೆನೆದು ತುಂಬಾನೇ ಭಯಗೊಂಡಿದ್ದೆ. ನನ್ನಲ್ಲಿ ಯಾವುದೇ ಕೊರೊನಾ ಲಕ್ಷಣ ಕಾಣಿಸಿಲ್ಲ. ಆದಾಗ್ಯೂ, ನಾನು ಕೊರೊನಾ ಪರೀಕ್ಷೆಗೆ ಒಳಪಟ್ಟೆ. ಈ ವೇಳೆ ನೆಗೆಟಿವ್​ ಬಂದಿದೆ ಎಂದು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: Meghana Raj | ಸಿಂಬಾ ಎಂದು ಜೂ.ಚಿರುವನ್ನು ಪರಿಚಯಿಸಿದ ಮೇಘನಾ ರಾಜ್.. ಪ್ರೇಮಿಗಳ ದಿನದಂದೇ ಚಿರು ಪುತ್ರನ ವಿಡಿಯೋ ರಿವಿಲ್

Meghana Raj: ನಟಿ ಮೇಘನಾ ರಾಜ್​ ಮಗುವಿನ ಆರೋಗ್ಯದ ಬಗ್ಗೆ ತೀವ್ರವಾಗಿ ಆತಂಕಗೊಂಡಿದ್ದೇಕೆ?

Published On - 8:03 pm, Sun, 25 April 21