ಸ್ವಾತಂತ್ರ್ಯೋತ್ಸವಕ್ಕೆ ರಾಯನ್​ ರಾಜ್​ ಸರ್ಜಾ ಮುದ್ದಾದ ಸೆಲ್ಯೂಟ್​; ಚಿರು ಪುತ್ರನ ಫೋಟೋ ವೈರಲ್​

|

Updated on: Aug 15, 2023 | 3:43 PM

ಮೇಘನಾ ರಾಜ್​ ಅವರ ಪುತ್ರ ರಾಯನ್​ ಸರ್ಜಾ ತ್ರಿವರ್ಣ ಧ್ವಜ ಹಿಡಿದು ಮುದ್ದಾಗಿ ಪೋಸ್​ ನೀಡಿದ್ದಾನೆ. ‘ಲವ್​ ಯೂ ಜೂನಿಯರ್ ಚಿರು’ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ. ಆತನ ಕ್ಯೂಟ್ನೆಸ್​ ಕಂಡು ಫ್ಯಾನ್ಸ್​ ಮನಸೋತಿದ್ದಾರೆ. ಮೇಘನಾ ರಾಜ್​ ಅವರ ವೃತ್ತಿಜೀವನಕ್ಕೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

ಸ್ವಾತಂತ್ರ್ಯೋತ್ಸವಕ್ಕೆ ರಾಯನ್​ ರಾಜ್​ ಸರ್ಜಾ ಮುದ್ದಾದ ಸೆಲ್ಯೂಟ್​; ಚಿರು ಪುತ್ರನ ಫೋಟೋ ವೈರಲ್​
ರಾಯನ್​ ರಾಜ್​ ಸರ್ಜಾ
Follow us on

ನಟಿ ಮೇಘನಾ ರಾಜ್​ (Meghana Raj) ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ತಮ್ಮ ದಿನಚರಿಯ ಬಗ್ಗೆ, ಸಿನಿಮಾಗಳ ಬಗ್ಗೆ ಅವರು ಆಗಾಗ ಏನಾದರೂ ಪೋಸ್ಟ್​ ಮಾಡುತ್ತಾ ಇರುತ್ತಾರೆ. ಮಗನ ಆರೈಕೆ ಮತ್ತು ಸಿನಿಮಾ ಕೆಲಸ ಎರಡನ್ನೂ ಅವರು ಬ್ಯಾಲೆನ್ಸ್​ ಮಾಡುತ್ತಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಪುತ್ರ ರಾಯನ್​ ರಾಜ್​ ಸರ್ಜಾ (Raayan Raj Sarja) ಬಗ್ಗೆ ಪೋಸ್ಟ್​ ಮಾಡಲು ಮೇಘನಾ ರಾಜ್​ ಮರೆಯುವುದಿಲ್ಲ. ಇಂದು (ಆಗಸ್ಟ್​ 15) ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮಗನ ಫೋಟೋ ಮತ್ತು ವಿಡಿಯೋವನ್ನು ಮೇಘನಾ ರಾಜ್​ ಅವರು ಹಂಚಿಕೊಂಡಿದ್ದಾರೆ. ಇದರಲ್ಲಿ ರಾಯನ್​ ಮುದ್ದಾಗಿ ಸೆಲ್ಯೂಟ್​ ಮಾಡಿದ್ದಾನೆ. ಈ ಫೋಟೋ ವೈರಲ್​ ಆಗಿದೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಇದೇ ರೀತಿ ರಿಷಬ್​ ಶೆಟ್ಟಿ, ಶಿವರಾಜ್​ಕುಮಾರ್​, ಆಶಾ ಭಟ್​, ಅರವಿಂದ್​ ಕೆ.ಪಿ. ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸ್ವಾತಂತ್ರ್ಯೋತ್ಸವದ (Independence Day 2023) ಶುಭಾಶಯ ತಿಳಿಸಿದ್ದಾರೆ.

ಚಿರಂಜೀವಿ ಸರ್ಜಾ ಅಗಲಿಕೆ ನಂತರ ಮೇಘನಾ ರಾಜ್​ ಅವರ ಬದುಕಿನಲ್ಲಿ ದುಃಖ ಆವರಿಸಿತ್ತು. ಆದರೆ ರಾಯನ್​ ರಾಜ್​ ಸರ್ಜಾ ಆಗಮನದ ಬಳಿಕ ಮೇಘನಾ ಜೀವನದಲ್ಲಿ ಹೊಸ ಭರವಸೆ ಮೂಡಿತು. ಮಗನ ಆರೈಕೆಯಲ್ಲಿ ಅವರು ಸಂಪೂರ್ಣ ತೊಡಗಿಕೊಂಡರು. ರಾಯನ್​ಗೆ ಚಿರು ಅಭಿಮಾನಿಗಳು ಸಖತ್​ ಪ್ರೀತಿ ತೋರಿಸುತ್ತಾರೆ. ಆತನ ಪ್ರತಿ ಫೋಟೋಗೆ ಭರಪೂರ ಲೈಕ್ಸ್​ ನೀಡುತ್ತಾರೆ. ಮಗನ ಎಲ್ಲ ಬೆಳವಣಿಗೆ ಬಗ್ಗೆ ಮೇಘನಾ ರಾಜ್​ ಅವರು ಆಗಾಗ ಅಪ್​ಡೇಟ್​ ನೀಡುತ್ತಾ ಇರುತ್ತಾರೆ.

ಮೇಘನಾ ರಾಜ್​ ಇನ್​ಸ್ಟಾಗ್ರಾಮ್​ ಪೋಸ್ಟ್​:

ಇನ್ನೊಂದು ವಿಡಿಯೋದಲ್ಲಿ ಮೇಘನಾ ರಾಜ್​ ಅವರ ಪುತ್ರ ರಾಯನ್​ ಸರ್ಜಾ ತ್ರಿವರ್ಣ ಧ್ವಜ ಹಿಡಿದು ಮುದ್ದಾಗಿ ಪೋಸ್​ ನೀಡಿದ್ದಾನೆ. ‘ಲವ್​ ಯೂ ಜೂನಿಯರ್ ಚಿರು’ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ. ಆತನ ಕ್ಯೂಟ್ನೆಸ್​ ಕಂಡು ಫ್ಯಾನ್ಸ್​ ಮನಸೋತಿದ್ದಾರೆ. ಮೇಘನಾ ರಾಜ್​ ಅವರ ವೃತ್ತಿಜೀವನಕ್ಕೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

ಮೇಘನಾ ರಾಜ್​ ಅವರು ‘ತತ್ಸಮ ತದ್ಭವ’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್​ ದೇವರಾಜ್​ ಕೂಡ ಒಂದು ಪಾತ್ರ ಮಾಡಿದ್ದಾರೆ. ಪೊಲೀಸ್​ ಅಧಿಕಾರಿಯಾಗಿ ಪ್ರಜ್ವಲ್​ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೀಸರ್​ ಬಿಡುಗಡೆಯಾಗಿ ಗಮನ ಸೆಳೆದಿದೆ. ಕೊಲೆ ರಹಸ್ಯದ ಸುತ್ತ ಈ ಸಿನಿಮಾದ ಕಥೆ ಸಾಗಲಿದೆ. ವಿಶಾಲ್ ಆತ್ರೇಯ ನಿರ್ದೇಶನದ ‘ತತ್ಸಮ ತದ್ಭವ’ ಚಿತ್ರಕ್ಕೆ ಪನ್ನಗ ಭರಣ ಅವರು ಬಂಡವಾಳ ಹೂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.