ಸ್ಪಂದನಾ ಆತ್ಮವನ್ನು ಒಳಗೆ ಕರೆಸುವ ಶಾಸ್ತ್ರ: ಸಂಬಂಧಿ ವಿವರಿಸಿದ್ದು ಹೀಗೆ

Spandan Vijay Raghavendra: ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾರ ಉತ್ತರ ಕ್ರಿಯೆಗಳು (ಆಗಸ್ಟ್ 16) ನಾಳೆ ನಡೆಯಲಿವೆ. ಸ್ಪಂದನಾರ ತವರು ಮನೆಯಲ್ಲಿಯೂ ಕೆಲವು ಕಾರ್ಯಗಳು ನಡೆಯಲಿವೆ. ಸ್ಪಂದನಾರ ಆತ್ಮವನ್ನು ಕರೆಸಿ ಶಾಂತಿ ಕೋರುವ ಕ್ರಿಯೆಯ ಬಗ್ಗೆ ಅವರ ಸಂಬಂಧಿ ವಿವರಿಸಿದ್ದಾರೆ.

ಸ್ಪಂದನಾ ಆತ್ಮವನ್ನು ಒಳಗೆ ಕರೆಸುವ ಶಾಸ್ತ್ರ: ಸಂಬಂಧಿ ವಿವರಿಸಿದ್ದು ಹೀಗೆ
ಸ್ಪಂದನಾ-ವಿಜಯ್
Follow us
ಮಂಜುನಾಥ ಸಿ.
|

Updated on: Aug 15, 2023 | 7:55 PM

ನಟ ವಿಜಯ್ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ನಿಧನ ಹೊಂದಿ 10 ದಿನಗಳಾಗಿದ್ದು ಅವರ ನಾಳೆ ಹನ್ನೊಂದನೇ ದಿನ (ಆಗಸ್ಟ್ 16) ಅವರ ಉತ್ತರ ಕ್ರಿಯೆಗಳು ನಡೆಯಲಿವೆ. ಬೆಂಗಳೂರಿನಲ್ಲಿ ವಿಜಯ್ ರಾಘವೇಂದ್ರ ಅವರ ಮನೆಯಲ್ಲಿ ಹಾಗೂ ಸ್ಪಂದನಾರ ತವರು ಮನೆಯಲ್ಲಿಯೂ ಕೆಲವು ಕಾರ್ಯಕ್ರಮಗಳು ಜರುಗಲಿವೆ. ಅದರಲ್ಲಿಯೂ ಸ್ಪಂದನಾ ತವರು ಮನೆಯಲ್ಲಿ ಮುಗ್ಗಗುತ್ತು ಕುಟುಂಬದವರು ತಮ್ಮ ಮನೆತನದ ಕೆಲವು ಕ್ರಿಯಾ ಕರ್ಮಗಳನ್ನು ನಡೆಸಲಿದ್ದು, ಆ ಬಗ್ಗೆ ಸ್ಪಂದನಾರ ಹತ್ತಿರದ ಸಂಬಂಧಿ ಮಾಹಿತಿ ಹಂಚಿಕೊಂಡಿದ್ದಾರೆ.

ಬುಧವಾರ ಹನ್ನೊಂದನೇ ದಿನವಾಗಿದ್ದು ಕಾಗೆಗೆ ಅನ್ನ ಇಡುವ ಕಾರ್ಯಕ್ರಮವನ್ನು ಕುಟುಂಬದವರು ಮಾಡಲಿದ್ದೇವೆ. ಸಸ್ಯಹಾರಿ ಖಾದ್ಯಗಳನ್ನು ಮಾಡಿ, ಸ್ಪಂದನಾರಿಗೆ ಪ್ರಿಯವಾದ ಅಡುಗೆಗಳನ್ನು ತಯಾರಿಸಿ ಪ್ರಾರ್ಥನೆ ಮಾಡಿ ಬೆಳಿಗ್ಗೆ ಕಾಗೆ ಇಡುತ್ತೇವೆ. ಮಧ್ಯಾಹ್ನದ ವೇಳೆಗೆ ಎಲ್ಲ ಬಂಧುಗಳಿಗೆ, ಸ್ನೇಹಿತರಿಗೆ ಅನ್ನಸಂತರ್ಪಣೆ ಮಾಡುತ್ತೇವೆ. ಜೊತೆಗೆ ಸ್ಪಂದನಾ ಅವರಿಗೆ ನುಡಿ ನಮನ ಕಾರ್ಯಕ್ರಮವೂ ಹಮ್ಮಿಕೊಂಡಿದ್ದೇವೆ ಎಂದರು ಸ್ಪಂದನಾರ ಹತ್ತಿರದ ಸಂಬಂಧಿ ಶೇಖರ್ ಬಂಗೇರ.

ರಾತ್ರಿ ಮಡಪ್ಪಾಜೆ ಹಾಕುವ ಕಾರ್ಯಕ್ರಮವಿದೆ. ನಮ್ಮ ನಂಬಿಕೆಯ ಪ್ರಕಾರ, ಆತ್ಮ ಹೊರಗೆ ಓಡಾಡಿಕೊಂಡಿರುತ್ತದೆ. ಅದನ್ನು ಕೆಲವು ಕ್ರಿಯೆಗಳನ್ನು ಮಾಡುವ ಮೂಲಕ ಮನೆಯ ಒಳಗೆ ಕರೆಸುತ್ತೇವೆ. ಕೋಳಿಯಿಂದ ಮಾಡಿದ ಪದಾರ್ಥವನ್ನು ಕುಟುಂಬದವರೆಲ್ಲ ಸೇರಿ ಇಟ್ಟು ಪ್ರಾರ್ಥಿಸಿ ಆತ್ಮವನ್ನು ಒಳಗೆ ಕರೆಯುತ್ತೇವೆ. ಯಾರೆಲ್ಲ ಆ ಕಾರ್ಯದಲ್ಲಿ ಭಾಗಿಯಾಗಿ ಪದಾರ್ಥ ಇಟ್ಟು ಪ್ರಾರ್ಥಿಸಿರುತ್ತಾರೊ ಅವರಿಗಷ್ಟೆ ಅದನ್ನು ನೀಡಲಾಗುತ್ತದೆ. ಈ ವಿಧಿ ವಿಧಾನವನ್ನು ಕುಟುಂಬದವರಷ್ಟೆ ಮಾಡುತ್ತಾರೆ” ಎಂದರು.

ಇದನ್ನೂ ಓದಿ:ಸ್ಪಂದನಾ ಸಾವಿಗೆ ಮರುಗಿದ ರಾಧಿಕಾ ಕುಮಾರಸ್ವಾಮಿ, ವಿಜಯ್ ರಾಘವೇಂದ್ರರ ಸಂತೈಸಿದ್ದು ಹೀಗೆ

”ಸ್ಪಂದನಾ ಮುಗ್ಗ ಗುತ್ತಿನ ಕುಟುಂಬದ ಕುಡಿ. ಆಕೆಯ ಆತ್ಮವನ್ನು ಕುಟುಂಬದ ಹಿರಿಯರೊಟ್ಟಿಗೆ ಸೇರಿಸುವ ಕಾರ್ಯಕ್ರಮವೂ ಇದೆ. ಈ ಕಾರ್ಯವನ್ನು ಸಾಮಾನ್ಯವಾಗಿ ಆಟಿ ಅಮವಾಸ್ಯೆಗೆ ಮಾಡಲಾಗುತ್ತದೆ. ಆದರೆ ಸ್ಪಂದನಾ ಸಣ್ಣ ವಯಸ್ಸಿಗೆ ತೀರಿಕೊಂಡ ಕಾರಣ ಮೂರು ತಿಂಗಳ ಒಳಗಾಗಿ ಮಾಡಬೇಕು ಎಂಬ ನಿಯಮ ಇದೆ. ಹಾಗಾಗಿ ಬೇಗನೇ ಈ ಕಾರ್ಯವನ್ನು ಮಾಡುತ್ತೇವೆ, ವಿಜಯ್ ರಾಘವೇಂದ್ರ, ಅವರ ತಂದೆ-ತಾಯಿಗಳನ್ನೂ ಕರೆಸಿ ಕಾರ್ಯ ಮಾಡುತ್ತೇವೆ” ಎಂದು ಶೇಖರ್ ಬಂಗೇರ ಮಾಹಿತಿ ನೀಡಿದ್ದಾರೆ.

ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಆಗಸ್ಟ್ 6 ರಂದು ಬ್ಯಾಂಕಾಕ್​ನಲ್ಲಿ ನಿಧನ ಹೊಂದಿದರು. ತಮ್ಮ ಕಸಿನ್​ಗಳ ಜೊತೆಗೆ ಬ್ಯಾಂಕಾಕ್​ಗೆ ಸ್ಪಂದನಾ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿ ಕಡಿಮೆ ರಕ್ತದೊತ್ತಡದಿಂದಾಗಿ ಆದ ಹೃದಯಾಘಾತದಿಂದ ನಿಧನ ಹೊಂದಿದರು. ಪತಿ ವಿಜಯ್ ರಾಘವೇಂದ್ರ ಜೊತೆಗೆ ಶೌರ್ಯ ಹೆಸರಿನ ಮಗನೊಬ್ಬ ಇದ್ದಾನೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ