ಮಗುವಿನ ನಿರೀಕ್ಷೆಯಲ್ಲಿ ಕೃಷ್ಣ-ಮಿಲನಾ; ಸಿಹಿ ಸುದ್ದಿಕೊಟ್ಟ ‘ಲವ್ ಮಾಕ್ಟೇಲ್’ ದಂಪತಿ

2015ರಲ್ಲಿ ತೆರೆಗೆ ಬಂದ ‘ಚಾರ್ಲಿ’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದರು. ಆಗ ಇವರ ಮಧ್ಯೆ ಪ್ರೀತಿ ಮೂಡಿತ್ತು. ಡಾರ್ಲಿಂಗ್ ಕೃಷ್ಣ ಇಟ್ಟ ಬೇಡಿಕೆಯನ್ನು ಮಿಲನಾ ಒಪ್ಪಿದ್ದರು. 2021ರಲ್ಲಿ ಇವರು ಪ್ರೀತಿಗೆ ಹೊಸ ಅರ್ಥ ಕೊಟ್ಟರು. ಈಗ ಇವರ ಮನೆಗೆ ಹೊಸ ಸದಸ್ಯನ ಆಗಮನ ಆಗುತ್ತಿದೆ.  

ಮಗುವಿನ ನಿರೀಕ್ಷೆಯಲ್ಲಿ ಕೃಷ್ಣ-ಮಿಲನಾ; ಸಿಹಿ ಸುದ್ದಿಕೊಟ್ಟ ‘ಲವ್ ಮಾಕ್ಟೇಲ್’ ದಂಪತಿ

Updated on: Mar 08, 2024 | 11:41 AM

ನಟಿ ಮಿಲನಾ ನಾಗರಾಜ್ (Milana Nagaraj) ಹಾಗೂ ನಟ ‘ಡಾರ್ಲಿಂಗ್’ ಕೃಷ್ಣ ತೆರೆಮೇಲೆ ಹಾಗೂ ತೆರೆ ಹಿಂದೆ ಫೇವರಿಟ್ ಜೋಡಿ ಎನಿಸಿಕೊಂಡಿದ್ದಾರೆ. ಪರಸ್ಪರ ಪ್ರೀತಿಸುತ್ತಿದ್ದ ಇವರು 2021ರ ಫೆಬ್ರವರಿ 14ರಂದು ಮದುವೆ ಆದರು. ಈಗ ಮೂರು ವರ್ಷಗಳ ಬಳಿಕ ಈ ದಂಪತಿ ಸಿಹಿ ಸುದ್ದಿ ನೀಡಿದ್ದಾರೆ. 2024ರ ಸೆಪ್ಟೆಂಬರ್​ನಲ್ಲಿ ಮಗುವಿನ ಆಗಮನ ಆಗಲಿದೆ ಎಂದು ಮಿಲನಾ ಹಾಗೂ ಕೃಷ್ಣ ಘೋಷಣೆ ಮಾಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ. ದಂಪತಿಗೆ ವಿಶ್ ತಿಳಿಸುತ್ತಿದ್ದಾರೆ.

ಮಿಲನಾ ನಾಗರಾಜ್ ಹಾಗೂ ಕೃಷ್ಣ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 2015ರಲ್ಲಿ ತೆರೆಗೆ ಬಂದ ‘ಚಾರ್ಲಿ’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದರು. ಆಗ ಇವರ ಮಧ್ಯೆ ಪ್ರೀತಿ ಮೂಡಿತ್ತು. ಡಾರ್ಲಿಂಗ್ ಕೃಷ್ಣ ಇಟ್ಟ ಪ್ರಪೋಸಲ್​ನ ಮಿಲನಾ ಒಪ್ಪಿದ್ದರು. 2021ರಲ್ಲಿ ಇವರು ಪ್ರೀತಿಗೆ ಹೊಸ ಅರ್ಥ ಕೊಟ್ಟರು. ಈಗ ಇವರ ಮನೆಗೆ ಹೊಸ ಸದಸ್ಯನ ಆಗಮನ ಆಗುತ್ತಿದೆ.

ಮಿಲನಾ ಮಾಡಿರೋ ಪೋಸ್ಟ್..

ಸೋಶಿಯಲ್ ಮೀಡಿಯಾದಲ್ಲಿ ಮಿಲನಾ ನಾಗರಾಜ್ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. ಮಗುವಿನ ಶರ್ಟ್​ ಫೋಟೋನ ಹಂಚಿಕೊಂಡಿದ್ದಾರೆ ಅವರು. ಇದಕ್ಕೆ ‘KrissMi’ ಎಂದು ಬರೆದು ಹಾರ್ಟ್ ಮಾರ್ಕ್ ಹಾಕಿದ್ದಾರೆ. ಸೆಪ್ಟೆಂಬರ್ 2024 ಎಂದು ಬರೆದಿದ್ದಾರೆ. ಈ ಮೂಲಕ ಮಗುವಿನ ಆಗಮನದ ಬಗ್ಗೆ ಘೋಷಣೆ ಮಾಡಿದ್ದಾರೆ.

ಇತ್ತೀಚೆಗೆ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕೂಡ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ಮಗು ಜನಿಸಲಿದೆ ಎಂದು ದೀಪಿಕಾ ಪಡುಕೋಣೆ ಹೇಳಿದ್ದರು. ಈಗ ಮಿಲನಾ ನಾಗರಾಜ್ ಕಡೆಯಿಂದಲೂ ಫ್ಯಾನ್ಸ್​ಗೆ ಸಿಹಿ ಸುದ್ದಿ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:31 am, Fri, 8 March 24