ಒಳ್ಳೆಯ ಸಿನಿಮಾ ಮಾಡುವುದು ಎಷ್ಟು ಮುಖ್ಯವೋ ಪ್ರೇಕ್ಷಕರ ಗಮನ ಸೆಳೆಯುವುದು ಕೂಡ ಅಷ್ಟೇ ಮುಖ್ಯ. ಅದಕ್ಕಾಗಿ ಚಿತ್ರರಂಗದಲ್ಲಿ ಹಲವು ಬಗೆಯ ಪ್ರಯೋಗಗಳು ನಡೆಯುತ್ತವೆ. ರಿಲೀಸ್ಗೂ ಮುನ್ನವೇ ಹಲವಾರು ಬಗೆಯಲ್ಲಿ ಹೈಪ್ ಹೆಚ್ಚಿಸುವ ಕೆಲಸ ಆಗುತ್ತಿದೆ. ಈಗ ಕನ್ನಡದ ‘ಅನ್ಲಾಕ್ ರಾಘವ’ (Unlock Raghava) ಸಿನಿಮಾ ತಂಡ ಕೂಡ ಅಂತಹ ಪ್ರಯತ್ನಗಳನ್ನು ಮಾಡುತ್ತಿದೆ. ಸೆಟ್ಟೇರಿದ ದಿನದಿಂದಲೂ ಈ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಒಂದಷ್ಟು ವಿಶೇಷತೆಗಳಿವೆ. ಅವುಗಳ ಸಾಲಿಗೆ ಇಂಟರೆಸ್ಟಿಂಗ್ ಆದಂತಹ ಒಂದು ಟೀಸರ್ ಕೂಡ ಸೇರ್ಪಡೆ ಆಗಿದೆ. ‘ಮೂಡ್ಸ್ ಆಫ್ ರಾಘವ’ (Moods Of Raghava) ಎಂಬ ಶೀರ್ಷಿಕೆಯಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ.
‘ಅನ್ಲಾಕ್ ರಾಘವ’ ಸಿನಿಮಾದ ‘ಮೂಡ್ಸ್ ಆಫ್ ರಾಘವ’ ಟೀಸರ್ನಲ್ಲಿ ಕಥೆಯ ಎಮೋಷನ್ಗಳನ್ನು ತೋರಿಸಲಾಗಿದೆ. ಪ್ರೀತಿ, ಖುಷಿ, ಕೋಪದಲ್ಲಿ ರಾಘವ ಹೇಗೆಲ್ಲ ಇರುತ್ತಾನೆ ಎಂಬುದರ ಝಲಕ್ ಈ ಟೀಸರ್ನಲ್ಲಿ ಕಾಣಿಸಿದೆ. ಅದಕ್ಕೆ ತಕ್ಕಂತೆಯೇ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತಿದೆ. ಅಕ್ಟೋಬರ್ 4ರಂದು ಈ ಟೀಸರ್ ಬಿಡುಗಡೆ ಆಗಿದೆ. 24 ಗಂಟೆ ಕಳೆಯುವುದರೊಳಗೆ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಆ ಮೂಲಕ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
‘ಮಯೂರ ಮೋಷನ್ ಪಿಕ್ಚರ್ಸ್’ ಬ್ಯಾನರ್ ಮೂಲಕ ಮಂಜುನಾಥ್ ದಾಸೇಗೌಡ ಮತ್ತು ಗಿರೀಶ್ ಕುಮಾರ್ ಅವರು ಒಟ್ಟಾಗಿ ‘ಅನ್ಲಾಕ್ ರಾಘವ’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ದೀಪಕ್ ಮಧುವನಹಳ್ಳಿ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದಿರುವ ಡೈರೆಕ್ಟರ್ ಸತ್ಯಪ್ರಕಾಶ್ ಅವರು ಈ ಸಿನಿಮಾಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಲವಿತ್ ಅವರು ಛಾಯಾಗ್ರಾಹಣ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶಕ ಮತ್ತು ಅಜಯ್ ಕುಮಾರ್ ಅವರ ಸಂಕಲನ ಈ ಸಿನಿಮಾಗಿದೆ.
ಗರುಡ ಪುರಾಣ ಟೀಸರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್ಕುಮಾರ್
ಮಿಲಿಂದ್ ಗೌತಮ್ ಅವರು ‘ಅನ್ಲಾಕ್ ರಾಘವ’ ಸಿನಿಮಾಗೆ ನಾಯಕ. ಅವರಿಗೆ ಜೋಡಿಯಾಗಿ ರೇಚಲ್ ಡೇವಿಡ್ ಅವರು ನಟಿಸಿದ್ದಾರೆ. ಅವಿನಾಶ್, ಸಾಧುಕೋಕಿಲ, ಶೋಭರಾಜ್, ವೀಣಾ ಸುಂದರ್, ರಮೇಶ್ ಭಟ್, ಸುಂದರ್, ಸಾಯಿ ಕುಡ್ಲ, ಧರ್ಮಣ್ಣ ಕಡೂರು, ಭೂಮಿ ಶೆಟ್ಟಿ, ಮೂಗೂರು ಸುರೇಶ್ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ಅನ್ಲಾಕ್ ರಾಘವ’ ಸಿನಿಮಾದ ಹಾಡುಗಳಿಗೆ ಧನಂಜಯ್ ಮಾಸ್ಟರ್ ಮತ್ತು ಮುರಳಿ ಮಾಸ್ಟರ್ ನೃತ್ಯನಿರ್ದೇಶನ ಮಾಡಿದ್ದಾರೆ. ವಿನೋದ್ ಮಾಸ್ಟರ್, ಅರ್ಜುನ್ ಮಾಸ್ಟರ್ ಅವರು ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಟೀಸರ್ ನೋಡಿದ ನೆಟ್ಟಿಗರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.