AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ದ್ವೀಪದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಕುಟುಂಬಗಳು‌; ಇದು ‘ಕುದ್ರು’ ಕಹಾನಿ

‘ಕುದ್ರು’ ಸಿನಿಮಾಗೆ ಉಡುಪಿ, ಮಲೆನಾಡು, ಗೋವಾ ಮತ್ತು ಸೌದಿ ಅರೇಬಿಯಾದಲ್ಲಿ ಶೂಟಿಂಗ್​ ಮಾಡಲಾಗಿದೆ. ಈ ಸಿನಿಮಾದ ಹಾಡುಗಳು ಮತ್ತು ಟೀಸರ್​ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದಕ್ಕೆ ಚಿತ್ರತಂಡ ಖುಷಿಯಾಗಿದೆ. ಅಕ್ಟೋಬರ್​ 13ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ..

ಒಂದೇ ದ್ವೀಪದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಕುಟುಂಬಗಳು‌; ಇದು ‘ಕುದ್ರು’ ಕಹಾನಿ
ಕುದ್ರು ಸಿನಿಮಾ ತಂಡ
ಮದನ್​ ಕುಮಾರ್​
|

Updated on: Oct 05, 2023 | 1:29 PM

Share

ಕನ್ನಡ ಚಿತ್ರರಂಗದಲ್ಲಿ (Sandalwood) ಇತ್ತೀಚೆಗೆ ಕರಾವಳಿ ಭಾಗದ ಕಥೆಗಳು ಹೆಚ್ಚುತ್ತಿವೆ. ಡಿಫರೆಂಟ್​ ಹಿನ್ನೆಲೆ ಇರುವ ಕಹಾನಿಯನ್ನು ಪ್ರೇಕ್ಷಕರಿಗೆ ಪರಿಚಯಿಸಲಾಗುತ್ತಿದೆ. ಆ ಸಾಲಿಗೆ ‘ಕುದ್ರು’ ಸಿನಿಮಾ ಕೂಡ ಸೇರ್ಪಡೆ ಆಗುತ್ತಿದೆ. ಕರಾವಳಿಯಲ್ಲಿ ಕೋಮು ಗಲಭೆಯ ಸುದ್ದಿ ಆಗಾಗ ಕೇಳಿಬರುವುದುಂಟು. ಅದರ ಎಳೆಯನ್ನು ಇಟ್ಟುಕೊಂಡು ‘ಕುದ್ರು’ ಸಿನಿಮಾ (Kudru Movie) ಮೂಡಿಬಂದಿದೆ. ಈ ಸಿನಿಮಾದ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಕ್ಟೋಬರ್​ 13ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಒಂದೇ ಪ್ರದೇಶದಲ್ಲಿ ವಾಸಿಸುವ ಹಿಂದೂ, ಕ್ರಿಶ್ಚಿಯನ್​, ಮುಸ್ಲಿಂ ಕುಟುಂಬಗಳ ಕಥೆಯನ್ನು ‘ಕುದ್ರು’ ಸಿನಿಮಾ ಒಳಗೊಂಡಿದೆ.

ಇತ್ತೀಚೆಗೆ ‘ಕುದ್ರು’ ಸಿನಿಮಾದ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಅದರಲ್ಲಿ ಭಾಗಿಯಾದ ಚಿತ್ರತಂಡದವರು ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾಸ್ಕರ್​ ನಾಯ್ಕ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಕೂಡ ಅವರದ್ದೇ. ‘ಕುದ್ರು’ ಎಂದರೆ ಏನು? ‘ನೀರಿನಿಂದ ಸುತ್ತುವರೆದ ದ್ವೀಪ’ ಎಂದು ಉತ್ತರಿಸಿದ್ದಾರೆ ನಿರ್ದೇಶಕ ಭಾಸ್ಕರ್​ ನಾಯ್ಕ್​. ಅದರಲ್ಲಿ ನಡೆಯುವ ಒಂದು ಇಂಟರೆಸ್ಟಿಂಗ್​ ಕಥೆ ಈ ಸಿನಿಮಾದಲ್ಲಿದೆ.

ಇದನ್ನೂ ಓದಿ: ಮಹೇಶ್​ ಬಾಬು ನಿರ್ದೇಶನದ ಹೊಸ ಸಿನಿಮಾಗೆ ‘ಕನ್ನಡತಿ’ ಧಾರಾವಾಹಿಯ ಸ್ಮೈಲ್ ಗುರು ರಕ್ಷಿತ್ ಹೀರೋ

‘ಈ ದ್ವೀಪದಲ್ಲಿ ಮುಸ್ಲಿಂ, ಕ್ರಿಶ್ಚಿಯನ್​ ಹಾಗೂ ಹಿಂದೂ ಸಮುದಾಯದ ಕುಟುಂಬಗಳು‌ ಸಹಬಾಳ್ವೆಯಿಂದ ಜೀವನ ನಡೆಸುತ್ತಾ ಇರುತ್ತಾರೆ. ಅಂತಹ ಸಂದರ್ಭದಲ್ಲಿ ವಾಟ್ಸಪ್ ಮೂಲಕ ಬರುವ ಒಂದು ಸಂದೇಶವು ಎಲ್ಲರ ನಡುವೆ ಮನಸ್ತಾಪಕ್ಕೆ ಕಾರಣ ಆಗುತ್ತದೆ. ಕಾಲೇಜಿನಲ್ಲಿ ಸಿನಿಮಾದ ಮೊದಲ ಭಾಗದ ಕಹಾನಿ ನಡೆಯುತ್ತದೆ. ಬಳಿಕ ಕುತೂಹಲದ ಹಂತಕ್ಕೆ ಕಥೆ ತಲುಪುತ್ತದೆ. ಅದು ಏನು ಎಂಬುದನ್ನು ಸಿನಿಮಾದಲ್ಲೇ ನೋಡಬೇಕು’ ಎಂದಿದ್ದಾರೆ ನಿರ್ಮಾಪಕ ಮತ್ತು ನಿರ್ದೇಶಕ ಭಾಸ್ಕರ್ ನಾಯ್ಕ್.

ಇದನ್ನೂ ಓದಿ: ನಿಖಿಲ್​ ಕುಮಾರ್​ ಸಿನಿಮಾದ ಸೆಟ್​ಗೆ ಭೇಟಿ ನೀಡಿದ ಶಿವರಾಜ್​ಕುಮಾರ್​; ಫೋಟೋ ವೈರಲ್​

ಈ ಸಿನಿಮಾದಲ್ಲಿ ಮುಸ್ಲಿಂ ಕುಟುಂಬದ ಹುಡುಗಿಯಾಗಿ ನಟಿ ಡೈನಾ ಡಿಸೋಜ ಅಭಿನಯಿಸಿದ್ದಾರೆ. ಮುಸ್ಲಿಂ ಹುಡುಗನ ಪಾತ್ರಕ್ಕೆ ಫರ್ಹಾನ್ ಬಣ್ಣ ಹಚ್ಚಿದ್ದಾರೆ. ಹಿಂದೂ ಹುಡುಗನಾಗಿ ಹರ್ಷಿತ್ ಶೆಟ್ಟಿ, ಕ್ರಿಶ್ಚಿಯನ್ ಹುಡುಗನ ಪಾತ್ರದಲ್ಲಿ ಗಾಡ್ವಿನ್, ಹಿಂದೂ ಹುಡುಗಿಯಾಗಿ ಪ್ರಿಯಾ ಹೆಗ್ಡೆ ಅಭಿನಯಿಸಿದ್ದಾರೆ. ಶ್ರೀಪುರಾಣಿಕ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಪ್ರತೀಕ್ ಕುಂದು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಶ್ರೀನಿವಾಸ್ ಕಲಾಲ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಉಡುಪಿ ಕೃಷ್ಣ ಆಚಾರ್ ಸಂಭಾಷಣೆ ಬರೆದಿದ್ದಾರೆ. ‘ಕುದ್ರು’ ಸಿನಿಮಾಗೆ ಉಡುಪಿ, ಮಲೆನಾಡು, ಗೋವಾ ಮತ್ತು ಸೌದಿ ಅರೇಬಿಯಾದಲ್ಲಿ ಶೂಟಿಂಗ್​ ಮಾಡಲಾಗಿದೆ. ಈ ಸಿನಿಮಾದ ಹಾಡುಗಳು ಮತ್ತು ಟೀಸರ್​ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದಕ್ಕೆ ಚಿತ್ರತಂಡ ಖುಷಿಯಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.