ಶಿವಮೊಗ್ಗದಲ್ಲಿ ನಡೆದಿರುವುದು ಹಿಂದೂ-ಮುಸ್ಲಿಂ ಗಲಾಟೆ ಅಲ್ಲ, ಪೊಲೀಸ್-ಮಸ್ಲಿಂ ಗಲಾಟೆ ಎಂದ ಚಕ್ರವರ್ತಿ ಸೂಲಿಬೆಲೆ
ಶಿವಮೊಗ್ಗದಲ್ಲಿ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಭೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಿಂದೂ Shivamogga riots: ಮುಸ್ಲಿಮರ ನಡುವೆ ಗಲಾಟೆಯಾಗಿದೆ ಎಂದು ಸುದ್ದಿ ಹರಿದಾಡುತ್ತಿದೆ. ಆದ್ರೆ, ಶಿವಮೊಗ್ಗದಲ್ಲಿ ನಡೆದಿರುವುದು ಹಿಂದೂ-ಮುಸ್ಲಿಂ ನಡುವಿನ ಗಲಾಟೆ ಅಲ್ವಂತೆ. ಮುಸ್ಲಿಂ-ಪೊಲೀಸರ ನಡುವೆ ನಡೆದ ಗಲಾಟೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಉಡುಪಿ, (ಅಕ್ಟೋಬರ್ 02): ಶಿವಮೊಗ್ಗದ (Shivamogga) ರಾಗಿಗುಡ್ಡ ಪ್ರದೇಶದಲ್ಲಿ ಭಾನುವಾರ ಸಂಜೆ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಭೆಗೆ(Shivamogga riots) ಸಂಬಂಧಿಸಿದಂತೆ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪ ಜೋರಾಗಿದೆ. ಇನ್ನು ಈ ಗಾಲಾಟೆ ಹಿಂದೂ-ಮುಸ್ಲಿಮರ ನಡುವೆ ನಡೆದಿದೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಆದ್ರೆ, ಇದು ಹಿಂದೂ ಮುಸ್ಲಿಂ ಗಲಾಟೆ ಅಲ್ಲ. ಇದು ಮುಸ್ಲಿಂ ಮತ್ತು ಪೊಲೀಸರ ನಡುವಿನ ಗಲಾಟೆ ಎಂದು ಚಕ್ರವರ್ತಿ ಸೂಲಿಬೆಲೆ ಹೊಸ ಬಾಂಬ್ ಸಿಡಿಸಿದ್ದಾರೆ.
ಉಡುಪಿಯಲ್ಲಿಂದು ಶಿವಮೊಗ್ಗ ಗಲಭೆ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಸರ್ಕಾರ ಪೊಲೀಸರ ರಕ್ಷಣೆ ಮಾಡುತ್ತದೆ ಎಂಬ ಬಗ್ಗೆ ನನಗೆ ಅನುಮಾನ ಇದೆ. ಗೃಹ ಸಚಿವರು ತಮ್ಮ ಇಲಾಖೆಯನ್ನು ರಕ್ಷಣೆ ಮಾಡುವ ಜವಾಬ್ದಾರಿ ಹೊರಬೇಕು. ಶಿವಮೊಗ್ಗದಲ್ಲಿ ನಡೆದಿರುವುದು ಹಿಂದೂ ಮುಸ್ಲಿಂ ಗಲಾಟೆ ಅಲ್ಲ. ಚಿತ್ರಣದಲ್ಲಿ ಹಿಂದೂಗಳು ಇಲ್ಲ ಎಂಬ ಕಾರಣಕ್ಕೆ ಹಿಂದೂಗಳ ಮನೆಗಳ ಮೇಲೆ ದಾಳಿ ನಡೆಸಲಗಿದೆ. ಇದು ಮುಸ್ಲಿಂ ಮತ್ತು ಪೊಲೀಸರ ನಡುವಿನ ಗಲಾಟೆ ಎಂದರು.
ಇದನ್ನೂ ಓದಿ: ಶಿವಮೊಗ್ಗ ಗಲಭೆ: ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ನಡೆದಿದ್ಯಾಕೆ? ಕಾರಣ ಬಿಚ್ಚಿಟ್ಟ ಸಂಸದ ರಾಘವೇಂದ್ರ
ಶಿವಮೊಗ್ಗದಲ್ಲಿ ಇಂತಹ ಘಟನೆ ಮೊದಲಲ್ಲ. 1933 ರಿಂದ ನಿರಂತರವಾಗಿದೆ. ಹರ್ಷ ಹತ್ಯೆ ಸಂದರ್ಭದಲ್ಲಿ ಬಹುದೊಡ್ಡ ಕೋಮುಗಲಭೆ ನಡೆದಿತ್ತು. ಈಗ ಶಿವಮೊಗ್ಗದ ಮುಸಲ್ಮಾನರ ಮಾನಸಿಕತೆಯ ಪ್ರದರ್ಶನವಾಗಿದೆ. ಹಿಂದೂಗಳನ್ನು ಪ್ರಚೋದಿಸಲು ಬ್ಯಾನರ್ ಕಟೌಟ್ಗಳನ್ನು ಹಾಕಲಾಗಿತ್ತು. ಗುಂಪು ಒಂದು ಹೆಜ್ಜೆ ಮುಂದೆ ಹೋಗಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಹಿರಿಯ ಮುಸಲ್ಮಾನ ವ್ಯಕ್ತಿಗಳು ತರುಣರನ್ನು ಹಿಡಿತಕ್ಕೆ ತೆಗೆದುಕೊಂಡು ಬುದ್ಧಿಹೇಳಬೇಕು ಎಂದು ಹೇಳಿದರು.
ಈ ರಾಜ್ಯ ಸರ್ಕಾರದಿಂದ ಯಾವುದೇ ನಿರೀಕ್ಷೆಗಳು ಇಲ್ಲ. ಡಿಜೆ ಹಳ್ಳಿ ಕೆಜೆ ಹಳ್ಳಿ ಆರೋಪಿಗಳನ್ನ ರಕ್ಷಣೆ ಮಾಡುವ ಕೆಲಸ ಆಗಿದೆ. ಮುಸಲ್ಮಾನ ರಿಗೆ ಹತ್ತು ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಪ್ರಿಯಾಂಕ ಖರ್ಗೆ ಫ್ಯಾಕ್ಟ್ ಚೆಕ್ಕರ್ ಜುಬೇರ್ ನನ್ನು ಚೀಫ್ ಎಂದು ಕರೆಯುತ್ತಾರೆ. ಜಮೀರ್ ಪುಂಡಪೋಕರಿಗಳಿಗೆ ಹಾರ ಹಾಕಿ ಸ್ವಾಗತಿಸುತ್ತಾರೆ. ಜೊತೆಗೆ ಹಣಕಾಸು ವ್ಯವಸ್ಥೆ ಮಾಡುತ್ತಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಮತ್ತಷ್ಟು ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ