ವಿಲನ್ ಆಗಿ ಬದಲಾದ ಹಾಸ್ಯನಟ ಮಿತ್ರ, ಖಡಕ್ ಆಗಿದೆ ಹೊಸ ಲುಕ್

|

Updated on: Jul 16, 2024 | 10:34 AM

ಹಾಸ್ಯನಟರಾಗಿದ್ದ ‘ಕರಾವಳಿ’ ಸಿನಿಮಾ ಮೂಲಕ ವಿಲನ್ ಆಗಿದ್ದಾರೆ. ‘ಕರಾವಳಿ’ಯಲ್ಲಿ ಅವರ ಪಾತ್ರದ ಪೋಸ್ಟರ್ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿತ್ತು. ಇದೀಗ ಮಿತ್ರ ಹೊಸ ಫೋಟೊಶೂಟ್ ಮಾಡಿಸಿದ್ದು, ವಿಲನ್ ಲುಕ್​ನಲ್ಲಿ ಸಖತ್ ಆಗಿ ಕಾಣುತ್ತಿದ್ದಾರೆ.

ವಿಲನ್ ಆಗಿ ಬದಲಾದ ಹಾಸ್ಯನಟ ಮಿತ್ರ, ಖಡಕ್ ಆಗಿದೆ ಹೊಸ ಲುಕ್
Follow us on

ಒಳ್ಳೆಯ ನಟರು ಯಾವ ಪಾತ್ರಕ್ಕೇ ಆಗಲಿ ಜೀವ ತುಂಬಿಬಿಡಬಲ್ಲರು. ವಿಶೇಷವಾಗಿ ಹಾಸ್ಯನಟರು. ಅವರು ಯಾವುದೇ ಪಾತ್ರಕ್ಕಾಗಿ ಸುಲಭವಾಗಿ ತಮ್ಮನ್ನು ತಾವು ಒಗ್ಗಿಸಿಕೊಳ್ಳಬಲ್ಲರು. ಹಾಸ್ಯ ನಟರು ಪೋಷಕ ನಟರಾಗಿ, ನಾಯಕ ನಟರಾಗಿ, ವಿಲನ್​ಗಳಾಗಿ ಮಿಂಚಿದ್ದಾರೆ. ಇತ್ತೀಚೆಗಷ್ಟೆ ತಮಿಳಿನ ಖ್ಯಾತ ಹಾಸ್ಯನಟ ವಡಿವೇಲು, ‘ಮಾಮನ್ನನ್’ ಸಿನಿಮಾದಲ್ಲಿ ಗಂಭೀರ ಪಾತ್ರವನ್ನು ಲೀಲಾಜಾಲವಾಗಿ ನಟಿಸಿದ್ದರು. ತೆಲುಗಿನ ಕಮಿಡಿಯನ್ ಸುನಿಲ್ ‘ಪುಷ್ಪ’ ಸಿನಿಮಾನಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಇದೀಗ ಕನ್ನಡದ ಜನಪ್ರಿಯ ಹಾಸ್ಯನಟ ಮಿತ್ರ ವಿಲನ್ ಆಗಿ ರೂಪಾಂತರ ಹೊಂದಿದ್ದಾರೆ.

ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾಕ್ಕಾಗಿ ನಟ ಮಿತ್ರ ವಿಲನ್ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ವಿಲನ್ ಆಗಿ ಮಿತ್ರ ಅವರ ಫೋಟೊಶೂಟ್ ಮಾಡಿಸಲಾಗಿದ್ದು ಗುರುತೇ ಹಿಡಿಯಲಾಗದ ರೀತಿ, ಯಾವುದೇ ಬಾಲಿವುಡ್ ವಿಲನ್ ರೀತಿ ಮಿತ್ರ ಅವರ ಚಹರೆಯನ್ನು ರೂಪಾಂತರ ಮಾಡಲಾಗಿದೆ. ತೆಳು, ಬಿಳಿ ಗಡ್ಡಬಿಟ್ಟು ಕೈಯಲ್ಲಿ ಸಿಗಾರ್ ಹಿಡಿದು ಖಡಕ್ ಆಗಿ ಕಾಣುತ್ತಿದ್ದಾರೆ ಮಿತ್ರ.

ಮಿತ್ರ ಕನ್ನಡ ಸಿನಿಮಾರಂಗಕ್ಕೆ ಬಹಳ ಹಳಬರು. ಸುಮಾರು ಎರಡು ದಶಕಗಳಿಂದ ಮಿತ್ರ ಕನ್ನಡ ಚಿತ್ರರಂಗದಲ್ಲಿ ಹಿರಿತೆರೆ-ಕಿರುತೆರೆಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿದ್ದಾರೆ. ಕಾಮಿಡಿ, ಎಮೋಷನ್ ಹೀಗೆ ಎಲ್ಲಾ ರೀತಿಯ ಪಾತ್ರಕ್ಕೂ ತಮ್ಮನ್ನ ತಾವು ಒಗ್ಗಿಸಿಕೊಂಡು ಅಭಿನಯಿಸುತ್ತಾ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಈಗ ಮೊದಲ ಬಾರಿಗೆ ವಿಲನ್ ಪಾತ್ರದ ಮೂಲಕ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ.

ಪ್ರಜ್ವಲ್ ದೇವರಾಜ್ ಅವ್ರ ‘ಕರಾವಳಿ’ ಸಿನಿಮಾದಲ್ಲಿ ಮುಖ್ಯ ವಿಲನ್ ಪಾತ್ರದಲ್ಲಿ ಮಿತ್ರ ನಟಿಸಲಿದ್ದಾರೆ. ಅದಕ್ಕಾಗಿ ಗೆಟಪ್ ಕೂಡ ಬದಲಾವಣೆ ಮಾಡಿದ್ದಾರೆ. ಮಿತ್ರ ಸಹಜ ಕಲಾವಿದ, ಎರಡು ದಶಕದಲ್ಲಿ ಅವರು ಮಾಡಿರುವ ಭಿನ್ನ-ಭಿನ್ನ ಪಾತ್ರಗಳು ಅವರ ಅಭಿನಯ ಕಲೆಗೆ ಸಾಕ್ಷಿ. ಮಿತ್ರ ಅವರ ನಟನಾ ಪ್ರತಿಭೆಯನ್ನು ಗುರುತಿಸಿ ‘ರಾಗ’ ಹೆಸರಿನ ಸಿನಿಮಾದಲ್ಲಿ ನಾಯಕ ನಟನ ಪಾತ್ರದಲ್ಲಿ ನಟಿಸಿದರು. ಅಂಧ ವ್ಯಕ್ತಿಯ ಆ ಪಾತ್ರಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಯಿತು. ಆದರೆ ಆ ನಂತರ ಮಿತ್ರಗೆ ನಿರೀಕ್ಷಿಸಿದಷ್ಟು ಅವಕಾಶ ಬರಲಿಲ್ಲ. ಆದರೆ ಈಗ ‘ಕರಾವಳಿ’ ಸಿನಿಮಾ ನಿರ್ದೇಶಕ ಗುರುದತ್ ಗಾಣಿಗ ತಮ್ಮ ಸಿನಿಮಾದಲ್ಲಿ ಪವರ್​ಫುಲ್ ಪಾತ್ರವನ್ನು ಮಿತ್ರಗೆ ನೀಡಿದ್ದಾರೆ.

ಇದನ್ನೂ ಓದಿ:ನಟ ಮಿತ್ರ ಜನ್ಮದಿನ; ಸೋಲು-ಗೆಲುವಿನ ಮೆಲುಕು ಹಾಕಿದ ಪತ್ನಿ, ಮಕ್ಕಳು

‘ಕರಾವಳಿ’ಯಲ್ಲಿ ವಿಲನ್ ಆಗಿರುವ ಮಿತ್ರ ಒಂದು ಖಡಕ್ ಫೋಟೊಶೂಟ್ ಮಾಡಿಸಿದ್ದಾರೆ. ನಿಜಕ್ಕೂ ಇದು ಹಾಸ್ಯನಟ ಮಿತ್ರ ಅವರೇನಾ ಎಂಬ ಅನುಮಾನ ಮೂಡಿಸುವಂತಿದೆ ಮಿತ್ರ ಅವರ ಹೊಸ ಫೋಟೊಶೂಟ್. ವಿಲನ್ ಲುಕ್ ನಲ್ಲಿ ಸಾಕಷ್ಟು ವಿಭಿನ್ನ ಶೇಡ್ ನಲ್ಲಿ ಮಿತ್ರ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಇನ್ನು ಈ ಫೋಟೋ ಶೂಟ್ ಮಾಡಿರೋದು ಕರಾವಳಿ ಸಿನಿಮಾದ ಸಿನಿಮಾಟೋಗ್ರಾಫರ್ ಅಭಿಮನ್ಯು ಸದಾನಂದ್. ಮಿತ್ರ ಅವರ ಲುಕ್ ಅನ್ನು ಸ್ಟೈಲಿಷ್ ಮಾಡಿರೋದು ಕಾಲಿವುಡ್ ನ ಸ್ಟೈಲ್ ಮೇಕರ್ ಅಂತೆ.

ಮಿತ್ರ ಅವರ ಈ ಲುಕ್ ಬರೀ ಲುಕ್ ಆಗಿಯೇ ಉಳಿದಿಲ್ಲ. ‘ಕರಾವಳಿ’ ಸಿನಿಮಾ ಬಿಟ್ಟು ಕನ್ನಡದ ದೊಡ್ಡ ಎರಡು ಸ್ಟಾರ್ ಸಿನಿಮಾಗಳಲ್ಲಿ ಮಿತ್ರ ಖಡಕ್ ವಿಲನ್ ಆಗಿ ಕಾಣಿಸಿಕೊಳ್ತಿದ್ದಾರೆ ಎನ್ನಲಾಗುತ್ತಿದೆ. ಅದರ ಜೊತೆಗೆ ತಮಿಳಿನ ಒಂದು ಸಿನಿಮಾಗೆ ವಿಲನ್ ಆಗಿ ಸಹ ಆಯ್ಕೆ ಆಗಿದ್ದಾರಂತೆ. ಕಲಾವಿದ ಆದವರು ಎಂದಿಗೂ ಒಂದೇ ಪಾತ್ರಕ್ಕೆ ಅಂಟಿಕೊಳ್ಳಬಾರದು ವಯಸ್ಸಿಗೆ ತಕ್ಕಂತೆ ತಮ್ಮನ್ನ ನಾವು ಬದಲಾಯಿಸಿಕೊಳ್ಳಬೇಕು ಎಂಬುದನ್ನು ಮಿತ್ರ ಅರಿತುಕೊಂಡಿದ್ದಾರೆ. ಸದ್ಯ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಹಾಗೂ ಮಿಲನ್ ಖದರ್ ನಲ್ಲಿ ಮಿತ್ರ ಸೂಪರ್ ಆಗಿ ಮಿಂಚ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ