ನಟ ಮಿತ್ರ ಜನ್ಮದಿನ; ಸೋಲು-ಗೆಲುವಿನ ಮೆಲುಕು ಹಾಕಿದ ಪತ್ನಿ, ಮಕ್ಕಳು

ನಟ ಮಿತ್ರ ಜನ್ಮದಿನ; ಸೋಲು-ಗೆಲುವಿನ ಮೆಲುಕು ಹಾಕಿದ ಪತ್ನಿ, ಮಕ್ಕಳು

Malatesh Jaggin
| Updated By: ಮದನ್​ ಕುಮಾರ್​

Updated on: May 12, 2024 | 11:05 PM

ನೂರಾರು ಸಿನಿಮಾಗಳಲ್ಲಿ ನಟಿಸಿದ ಕಲಾವಿದ ಮಿತ್ರ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕುಟುಂಬದವರು ಮತ್ತು ಅಭಿಮಾನಿಗಳ ಜೊತೆ ಅವರು ಜನ್ಮದಿನವನ್ನು ಸೆಲೆಬ್ರೇಟ್​ ಮಾಡಿಕೊಂಡಿದ್ದಾರೆ. ಈ ವೇಳೆ ಕುಟುಂಬ ಸಮೇತರಾಗಿ ಅವರು ‘ಟಿವಿ9 ಕನ್ನಡ’ ಜೊತೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರ ವೃತ್ತಿ ಜೀವನದ ಬಗ್ಗೆ ಪತ್ನಿ ಮತ್ತು ಮಕ್ಕಳು ಮಾತನಾಡಿದ್ದಾರೆ.

ನಟ ಮಿತ್ರ (Kannada Actor Mitra) ಅವರು ಇಂದು (ಮೇ 12) ಜನ್ಮದಿನ ಆಚರಿಸಿಕೊಂಡಿದ್ದಾರೆ. 47ನೇ ವಸಂತಕ್ಕೆ ಅವರು ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಮಗ ರಾಹುಲ್​, ಮಗಳು ಸೋನಿಯಾ, ಪತ್ನಿ ಗೀತಾ, ಅತ್ತೆ ಗಿರಿಜಮ್ಮ ಜೊತೆ ಮಿತ್ರ ಅವರು ‘ಟಿವಿ 9 ಕನ್ನಡ’ ಜೊತೆ ಮಾತಿಗೆ ಸಿಕ್ಕಿದ್ದಾರೆ. ‘ಬಹಳ ಖುಷಿ ಎನಿಸುತ್ತಿದೆ. ಈವರೆಗೂ ನಾನು ಈ ರೀತಿ ಸಂಭ್ರಮ ಮಾಡಿಕೊಂಡಿರಲಿಲ್ಲ. ಆದರೆ ಈ ಬಾರಿ ಕಾರ್ಪೊರೇಟರ್​ ಮಂಜಣ್ಣ ಅವರು ಇಂಥ ಸೆಲೆಬ್ರೇಷನ್​ಗೆ ವ್ಯವಸ್ಥೆ ಮಾಡಿದ್ದಾರೆ. ಸಿನಿಮಾ ಟಿಕೆಟ್​ ತೆಗೆದುಕೊಳ್ಳುವ ಯೋಗ್ಯತೆ ಇಲ್ಲದಷ್ಟು ಬಡತನ ಇರುವ ಕುಟುಂಬದಿಂದ ಬಂದ ನನಗೆ 150 ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞತೆ ಇದೆ. ಸಿನಿಮಾ, ಕಿರುತೆರೆ, ರಂಗಭೂಮಿಯಲ್ಲಿ ಅವಕಾಶ ಸಿಕ್ಕಿದೆ. ಅದಕ್ಕಾಗಿ ದೇವರಿಗೆ ಧನ್ಯವಾದಗಳು’ ಎಂದು ಮಿತ್ರ (Mitra) ಹೇಳಿದ್ದಾರೆ. ‘ಇವರು ನಟಿಸಿದ ‘ರಾಗ’ ಸಿನಿಮಾ ಸೋತಾಗ ತುಂಬ ವೀಕ್​ ಆಗಿದ್ದರು. ಆದರೆ ಇವರ ಸ್ನೇಹಿತರು ಜೊತೆ ನಿಂತು ಇಲ್ಲಿಯತನಕ ಕರೆದುಕೊಂಡು ಬಂದರು’ ಎಂದು ಪತ್ನಿ ಗೀತಾ ಹೇಳಿದ್ದಾರೆ. ‘ಹೊರಗಡೆ ಏನೇ ನೋವು ಆದರೂ ಮನೆಗೆ ಬಂದಾಗ ಒಂದು ನಗು ಮುಖ ಸಿಕ್ಕಿದರೆ ಎಲ್ಲವನ್ನೂ ಮರೆಯುತ್ತೇವೆ. ನನ್ನ ಬೆಳವಣಿಗೆ ಮತ್ತು ಯಶಸ್ಸಿನಲ್ಲಿ ಪತ್ನಿಗೆ ಹಾಗೂ ಕುಟುಂಬದವರಿಗೆ ಸಿಂಹಪಾಲು ನೀಡುತ್ತೇನೆ’ ಎಂದಿದ್ದಾರೆ ಮಿತ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.