PM Narendra Modi: ಪ್ರಧಾನಿ ಮೋದಿ ಕಂಡು ಆನಂದಬಾಷ್ಪ ಸುರಿಸಿದ ಬೆಂಗಾಲಿಗರು

PM Narendra Modi: ಪ್ರಧಾನಿ ಮೋದಿ ಕಂಡು ಆನಂದಬಾಷ್ಪ ಸುರಿಸಿದ ಬೆಂಗಾಲಿಗರು

ಸುಷ್ಮಾ ಚಕ್ರೆ
|

Updated on: May 12, 2024 | 6:37 PM

Lok Sabha Elections 2024: ಪಶ್ಚಿಮ ಬಂಗಾಳದಲ್ಲಿನ ಸ್ಥಳೀಯ ಜನರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿಯವರನ್ನು ಕಂಡು ಅಲ್ಲಿನ ಜನರು ಆನಂದಬಾಷ್ಪ ಸುರಿಸಿರುವ ವಿಡಿಯೋ ವೈರಲ್ ಆಗಿದೆ.

ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಇಂದು ಪಶ್ಚಿಮ ಬಂಗಾಳದ (West Bengal) ಹೂಗ್ಲಿ ಮತ್ತು ಹೌರಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಭಾಗವಹಿಸಿದ್ದರು. ಮೊದಲೇ ಪ್ಲಾನ್ ಮಾಡಿಕೊಂಡಿರದಿದ್ದರೂ ದಿಢೀರನೆ ಫಿಕ್ಸ್ ಆದ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋಗೂ ಸಾವಿರಾರು ಜನರಿಂದ ಪುಷ್ಪವೃಷ್ಠಿಯ ಭರ್ಜರಿ ಸ್ವಾಗತ ದೊರಕಿತು. ಇನ್ನು ಸ್ಥಳೀಯ ಜನರನ್ನು ಭೇಟಿಯಾದ ಪ್ರಧಾನಿ ಮೋದಿಯವರನ್ನು ಕಂಡು ಅಲ್ಲಿನ ಜನರು ಆನಂದಬಾಷ್ಪ ಸುರಿಸಿರುವ ವಿಡಿಯೋ ವೈರಲ್ ಆಗಿದೆ. ಬಂಗಾಳದ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಮೋದಿಯವರನ್ನು ಸ್ವಾಗತಿಸಿ, ಅವರ ಕಾಲಿಗೆ ನಮಸ್ಕರಿಸಿ ತಮಗಾದ ಆನಂದವನ್ನು ವ್ಯಕ್ತಪಡಿಸಿದ್ದಾರೆ.

ಚುನಾವಣೆ ಬರುತ್ತದೆ, ಹೋಗುತ್ತದೆ. ಆದರೆ ನಿಮ್ಮ ಪ್ರೀತಿ ಮುಖ್ಯ. ಬಡವರ, ದಲಿತರ ಸೇವೆ ಮಾಡಲು ದೇವರು ನನ್ನನ್ನು ಕಳುಹಿಸಿದ್ದಾನೆ. ಎಡ ಪಕ್ಷವೇ ಆಗಿರಲಿ, ಕಾಂಗ್ರೆಸ್ ಅಥವಾ ಟಿಎಂಸಿ ಆಗಿರಲಿ, ಅವರು ನೆಲದ ವಾಸ್ತವಗಳಿಂದ ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿದ್ದಾರೆ. ಪಶ್ಚಿಮ ಬಂಗಾಳದ ಜನರು ಅವರನ್ನು ಸೋಲಿಸಲು ಸಜ್ಜಾಗುವುದರಲ್ಲಿ ಆಶ್ಚರ್ಯವಿಲ್ಲ. ಈ ಬಾರಿ ಬಂಗಾಳದಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ