Olympia Theatre: ಇತಿಹಾಸದ ಪುಟ ಸೇರಿದ ಒಲಂಪಿಯಾ ಚಿತ್ರಮಂದಿರ; ಮೈಸೂರಿನಲ್ಲಿದ್ದ 26 ಚಿತ್ರಮಂದಿರಗಳ ಪೈಕಿ ಉಳಿದಿರೋದು 10 ಮಾತ್ರ!

| Updated By: shivaprasad.hs

Updated on: May 20, 2022 | 9:49 AM

Mysuru | Sandalwood: ಪ್ರೇಕ್ಷಕರ ಕೊರತೆಯ ಕಾರಣದಿಂದ ರಾಜ್ಯದಲ್ಲಿ ಒಂದೊಂದೇ ಚಿತ್ರಮಂದಿರಗಳು ಮುಚ್ಚುತ್ತಿವೆ. ಮೈಸೂರಿನಲ್ಲಿ ಮತ್ತೊಂದು ಚಿತ್ರಮಂದಿರ ಬಂದ್ ಆಗಿದೆ. 1949ರಲ್ಲಿ ಸ್ಥಾಪನೆಯಾಗಿದ್ದ ಒಲಂಪಿಯಾ ಚಿತ್ರಮಂದಿರವನ್ನು ಪ್ರೇಕ್ಷಕರ ಕೊರತೆಯ ಕಾರಣದಿಂದ ಮುಚ್ಚಲಾಗುತ್ತಿದೆ.

Olympia Theatre: ಇತಿಹಾಸದ ಪುಟ ಸೇರಿದ ಒಲಂಪಿಯಾ ಚಿತ್ರಮಂದಿರ; ಮೈಸೂರಿನಲ್ಲಿದ್ದ 26 ಚಿತ್ರಮಂದಿರಗಳ ಪೈಕಿ ಉಳಿದಿರೋದು 10 ಮಾತ್ರ!
ಮೈಸೂರಿನ ಒಲಂಪಿಯಾ ಚಿತ್ರಮಂದಿರ
Follow us on

ಮೈಸೂರು: ಪ್ರೇಕ್ಷಕರ ಕೊರತೆಯ ಕಾರಣದಿಂದ ರಾಜ್ಯದಲ್ಲಿ ಒಂದೊಂದೇ ಚಿತ್ರಮಂದಿರಗಳು ಮುಚ್ಚುತ್ತಿವೆ. ಕೊರೊನಾ ಕಾಲಘಟ್ಟದ ನಂತರವಂತೂ ಚಿತ್ರಮಂದಿರಗಳು ನಷ್ಟಕ್ಕೆ ತುತ್ತಾಗಿವೆ. ಈಗಲೂ ಸ್ಟಾರ್ ಚಿತ್ರಗಳ ಹೊರತಾಗಿ ಪ್ರೇಕ್ಷಕರು ಚಿತ್ರಮಂದಿರದ ಕಡೆಗೆ ಸುಳಿಯುವುದು ಅಪರೂಪ. ಹೀಗಾಗಿ ಚಿತ್ರಮಂದಿರವನ್ನು ನಿರ್ವಹಿಸುವುದು ಸವಾಲಾಗಿದೆ. ಈ ಎಲ್ಲಾ ಅನಿವಾರ್ಯ ಕಾರಣಗಳಿಂದ ಮಾಲಿಕರು ಥಿಯೇಟರ್ ಮುಚ್ಚಲು ಮುಂದಾಗುತ್ತಿದ್ದಾರೆ. ಈ ಪಟ್ಟಿಗೆ ಮೈಸೂರಿನ ಒಲಂಪಿಯಾ ಚಿತ್ರಮಂದಿರ (Olympia Theatre Mysuru) ಸೇರ್ಪಡೆಯಾಗಿದೆ. ಗಾಂಧಿ ವೃತ್ತದ ಬಳಿಯಿರುವ ಒಲಿಂಪಿಯಾ ಚಿತ್ರಮಂದಿರವು ಇತಿಹಾಸದ ಪುಟ ಸೇರಲಿದೆ. ಪ್ರೇಕ್ಷಕರ ಕೊರತೆಯ ಕಾರಣದಿಂದ ಚಿತ್ರಮಂದಿರವನ್ನು ಮುಚ್ಚಲು ನಿರ್ಧಾರ ಮಾಡಲಾಗಿದೆ. 1949ರಲ್ಲಿ ಒಲಂಪಿಯಾ ಚಿತ್ರಮಂದಿರವು ನಿರ್ಮಾಣವಾಗಿತ್ತು.

ಮೈಸೂರಿನಲ್ಲಿದ್ದ 26 ಚಿತ್ರಮಂದಿರಗಳ ಪೈಕಿ ಉಳಿದಿರೋದು 10 ಮಾತ್ರ!

ಮೈಸೂರಿನಲ್ಲಿ ಕಳೆದ ಕೆಲವು ಸಮಯಗಳಲ್ಲಿ ಹಲವು ಥಿಯೇಟರ್​ಗಳು ಬಂದ್ ಆಗಿವೆ. ಪ್ರಖ್ಯಾತ ಚಿತ್ರಮಂದಿರಗಳಾದ ಲಕ್ಷ್ಮಿ, ಸರಸ್ವತಿ, ಶಾಂತಲಾಗಳು ಇತ್ತೀಚೆಗೆ ಬಂದ್ ಆಗಿದ್ದವು. ಮೈಸೂರಿನಲ್ಲಿದ್ದ 26 ಚಿತ್ರಮಂದಿರಗಳ ಪೈಕಿ ಈಗ 10 ಚಿತ್ರಮಂದಿರಗಳಷ್ಟೇ ಉಳಿದಿವೆ. ಇದು ಸಿನಿಮಾ ಪ್ರೇಕ್ಷಕರಿಗೆ ನಿರಾಸೆ ತಂದಿದೆ. ಆದರೆ ಅನಿವಾರ್ಯ ಕಾರಣಗಳಿಂದ ಚಿತ್ರಮಂದಿರಗಳನ್ನು ಮುಚ್ಚಲು ಮಾಲಿಕರು ಮುಂದಾಗುತ್ತಿದ್ದಾರೆ.

ಇದನ್ನೂ ಓದಿ
Hina Khan Cannes Look : ಕಾನ್ ಚಿತ್ರೋತ್ಸವ; ಬೋಲ್ಡ್​​ ಅವತಾರದಲ್ಲಿ ಕಾಣಿಸಿಕೊಂಡ ಹಿನಾ ಖಾನ್​
Andrea Kevichusa: ‘ಅನೇಕ್’ ಚಿತ್ರದಲ್ಲಿ ಆಂಡ್ರಿಯಾ ಕೆವಿಚುಸಾ; ನಾಗಾಲ್ಯಾಂಡ್​ನ ಬೆಡಗಿಗೆ ಬಾಲಿವುಡ್​ನಲ್ಲಿ ಸಿಕ್ಕ ಸ್ವಾಗತ ಹೇಗಿತ್ತು?
Jr NTR Birthday: ಟಾಲಿವುಡ್ ನಟನಾದರೂ ಕನ್ನಡದ ಮೇಲೆ ವಿಶೇಷ ಪ್ರೀತಿ ಹೊಂದಿರುವ ಜ್ಯೂ. ಎನ್‌ಟಿಆರ್
Rakhi Sawant: ತನಗಿಂತ 6 ವರ್ಷ ಕಿರಿಯ ಹುಡುಗನ ಜತೆ ಪ್ರೀತಿಯಲ್ಲಿ ಬಿದ್ದ ರಾಖಿ; ಮೈಸೂರು ಮೂಲದ ಹುಡುಗನ ಬಗ್ಗೆ ನಟಿ ಹೇಳಿದ್ದೇನು?

ಇದನ್ನೂ ಓದಿ: ತನಗಿಂತ 6 ವರ್ಷ ಕಿರಿಯ ಹುಡುಗನ ಜತೆ ಪ್ರೀತಿಯಲ್ಲಿ ಬಿದ್ದ ರಾಖಿ; ಮೈಸೂರು ಮೂಲದ ಹುಡುಗನ ಬಗ್ಗೆ ನಟಿ ಹೇಳಿದ್ದೇನು?

ಇಂದು ತೆರೆಕಾಣುತ್ತಿವೆ 11 ಕನ್ನಡ ಚಿತ್ರಗಳು:

ಚಿತ್ರಮಂದಿರಗಳ ಕೊರತೆಯ ನಡುವೆಯೂ ಕೊರೊನಾ ನಂತರ ಕನ್ನಡದ ಹಲವು ಚಿತ್ರಗಳು ತೆರೆಗೆ ಬರಲು ಸಾಲುಗಟ್ಟಿ ನಿಂತಿವೆ. ಇವುಗಳಲ್ಲಿ ಸ್ಟಾರ್ ಚಿತ್ರಗಳೂ ಸೇರಿವೆ. ಈಗ ಓಟಿಟಿಯೂ ಮುಕ್ತ ಅವಕಾಶವಾಗಿರುವುದರಿಂದ ಪ್ರತಿ ಶುಕ್ರವಾರ ಚಿತ್ರಮಂದಿರಗಳಂತೆ ಓಟಿಟಿಯಲ್ಲೂ ಸಿನಿಮಾಗಳು ತೆರೆಕಾಣುತ್ತಿವೆ. ಈ ವಾರ ಒಟ್ಟು 11 ಚಿತ್ರಗಳು ಓಟಿಟಿ ಹಾಗೂ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿವೆ.

ಈ ಪೈಕಿ ಡಾಲಿ ಧನಂಜಯ ನಟನೆಯ ‘ಟ್ವೆಂಟಿ ಒನ್ ಅವರ್ಸ್​​’, ಅನು ಪ್ರಭಾಕರ್ ನಟನೆಯ ‘ಸಾರಾ ವಜ್ರ’, ಮನುರಂಜನ್ ರವಿಚಂದ್ರನ್ ನಟನೆಯ ‘ಪ್ರಾರಂಭ’ ಚಿತ್ರಗಳು ಇಂದು ಅಂದರೆ ಶುಕ್ರವಾರ ತೆರೆಕಾಣುತ್ತಿವೆ. ಇದರೊಂದಿಗೆ ‘ಗರುಡ’, ‘ಸಕುಟುಂಬ ಸಮೇತ’, ‘ಕಟಿಂಗ್ ಶಾಪ್’, ‘ಕಾಣೆಯಾದವರ ಬಗ್ಗೆ ಪ್ರಕಟಣೆ’, ‘ದಾರಿ ಯಾವುದಯ್ಯ ವೈಕುಂಠಕೆ’, ‘ಕಂಡ್ಬಿಡಿ ನೋಡಣ’ ಚಿತ್ರಗಳು ಕೂಡ ತೆರೆಕಾಣುತ್ತಿವೆ.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:41 am, Fri, 20 May 22