‘ಟಾಕ್ಸಿಕ್​​’ಗಾಗಿ ಗನ್ ಹಿಡಿದು ಬಂದ ನಯನತಾರಾ; ಸಖತ್ ಆಗಿದೆ ಗಂಗಾ ಫಸ್ಟ್​ ಲುಕ್

ನಯನತಾರಾ ‘ಟಾಕ್ಸಿಕ್’ ಸಿನಿಮಾದಲ್ಲಿ ಗಂಗಾ ಪಾತ್ರದಲ್ಲಿ ಗನ್ ಹಿಡಿದು ಎಂಟ್ರಿ ಕೊಟ್ಟಿದ್ದಾರೆ. ಅವರ ಮಾಸ್ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಯಶ್ ಸಹ-ಬರೆದ ಕಥೆಗೆ ಗೀತು ಮೋಹನ್​ದಾಸ್ ನಿರ್ದೇಶಿಸಿದ್ದಾರೆ. ಮಾರ್ಚ್ 19ಕ್ಕೆ ಬಿಡುಗಡೆಯಾಗುವ ಈ ಚಿತ್ರದ ಟೀಸರ್ ಯಶ್ ಹುಟ್ಟುಹಬ್ಬದಂದು ನಿರೀಕ್ಷಿಸಲಾಗಿದೆ. ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಪಾತ್ರಗಳೂ ಈಗಾಗಲೇ ಅನಾವರಣಗೊಂಡಿವೆ.

‘ಟಾಕ್ಸಿಕ್​​’ಗಾಗಿ ಗನ್ ಹಿಡಿದು ಬಂದ ನಯನತಾರಾ; ಸಖತ್ ಆಗಿದೆ ಗಂಗಾ ಫಸ್ಟ್​ ಲುಕ್
ನಯನತಾರಾ ಗಂಗಾ ಪಾತ್ರ

Updated on: Dec 31, 2025 | 11:01 AM

‘ಟಾಕ್ಸಿಕ್’ ಸಿನಿಮಾ (Toxic Movie) ರಿಲೀಸ್​​ಗೆ ಕೆಲವೇ ತಿಂಗಳು ಬಾಕಿ ಉಳಿದಿವೆ. ಈ ಚಿತ್ರದ ಪಾತ್ರಗಳನ್ನು ಒಂದೊಂದಾಗಿಯೇ ಪರಿಚಯಿಸುವ ಕೆಲಸವನ್ನು ತಂಡದವರು ಮಾಡುತ್ತಿದ್ದಾರೆ. ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಪಾತ್ರಗಳ ಅನಾವರಣ ಆಗಿತ್ತು. ಈಗ ನಟಿ ನಯನತಾರಾ ಸರದಿ. ಅವರು ‘ಟಾಕ್ಸಿಕ್’ ಚಿತ್ರದಲ್ಲಿ ಗಂಗಾ ಹೆಸರಿನ ಪಾತ್ರ ಮಾಡುತ್ತಿದ್ದಾರೆ.

ನಯನತಾರಾ ಅವರು ‘ಟಾಕ್ಸಿಕ್’ ಚಿತ್ರಕ್ಕಾಗಿ ಹಲವು ದಿನಗಳ ಕಾಲ ಶೂಟ್​​ ಮಾಡಿದ್ದರು. ಅವರ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಈಗ ಅವರ ಪಾತ್ರವನ್ನು ಅನಾವರಣ ಮಾಡಲಾಗಿದೆ. ಸಿನಿಮಾದಲ್ಲಿ ಗಂಗಾ ಹೆಸರಿನ ಪಾತ್ರದಲ್ಲಿ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ. ಅವರ ಲುಕ್​​ಗೆ ಫ್ಯಾನ್ಸ್ ಫ್ಲಾಟ್ ಆಗಿದ್ದಾರೆ.

ಅರಮನೆಯ ರೀತಿಯ ಸೆಟ್​​ನಲ್ಲಿ ನಯನತಾರಾ ಎಂಟ್ರಿ ಕೊಡುತ್ತಿದ್ದಾರೆ. ಹಿಂಭಾಗದಲ್ಲಿ ವಿದೇಶಿಗರು ಕಾವಲು ಕಾಯಲು ನಿಂತಿದ್ದಾರೆ. ನಯನತಾರಾ ಕೈಯಲ್ಲಿ ಶಾಟ್ ಗನ್ ಇದೆ. ನಯನತಾರಾ ಲುಕ್ ಅನೇಕರಿಗೆ ಇಷ್ಟ ಆಗಿದೆ. ಸಿನಿಮಾದಲ್ಲಿ ಅವರ ಪಾತ್ರದಿಂದ ಸಾಕಷ್ಟು ಮಾಸ್ ಅಂಶಗಳನ್ನು ಫ್ಯಾನ್ಸ್ ನಿರೀಕ್ಷಿಸುತ್ತಾ ಇದ್ದಾರೆ.

ಜನವರಿ 8 ನಟ ಯಶ್ ಅವರ ಜನ್ಮದಿನ. ಈ ಸಂದರ್ಭದಲ್ಲಿ ‘ಟಾಕ್ಸಿಕ್’ ಚಿತ್ರದ ಟೀಸರ್ ರಿಲೀಸ್ ಆಗೋ ನಿರೀಕ್ಷೆ ಇದೆ. ಅದಕ್ಕೂ ಮುನ್ನ ಎಲ್ಲಾ ಪಾತ್ರಗಳನ್ನು ಪರಿಚಯಿಸೋ ಪ್ಲ್ಯಾನ್ ಅಲ್ಲಿ ತಂಡ ಇದ್ದಂತೆ ಇದೆ. ರಿಲೀಸ್ ಮಾಡುತ್ತಿರುವ ಪ್ರತಿ ಪೋಸ್ಟರ್​​ ಕೂಡ ಕಲರ್​ಫುಲ್ ಆಗಿದೆ.

‘ಟಾಕ್ಸಿಕ್’ ಚಿತ್ರಕ್ಕೆ ಮಲಯಾಳಂನ ಗೀತು ಮೋಹನ್​​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಯಶ್ ಅವರು ಗೀತು ಜೊತೆ ಸೇರಿ ಕಥೆ ಬರೆದಿದ್ದಾರೆ. ರಿವೀಲ್ ಆದ ಪೋಸ್ಟರ್​​ನಲ್ಲಿ ಮಾರ್​ಚ್ 19ರಂದು ರಿಲೀಸ್ ಮಾಡಲಾಗುವುದು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈಗಾಗಲೇ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾ: ಎಲಿಜಬೆತ್ ಪಾತ್ರದಲ್ಲಿ ಹುಮಾ ಖುರೇಷಿ; ಫಸ್ಟ್ ಲುಕ್ ರಿಲೀಸ್

ಮಾರ್ಚ್ 19ರಂದು ಈದ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತಿವೆ. ಹಿಂದಿಯಲ್ಲಿ ‘ಧುರಂಧರ್ 2’ ಸಿನಿಮಾ ತೆರೆಗೆ ಬರುತ್ತಿದೆ. ಈ ಎರಡು ಸಿನಿಮಾಗಳ ಮಧ್ಯೆ ದೊಡ್ಡ ಕ್ಲ್ಯಾಶ್ ಏರ್ಪಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.