Ninasam Sathish: ನಟ ನೀನಾಸಂ ಸತೀಶ್​ ಅವರಿಗೆ ಮಾತೃ ವಿಯೋಗ

| Updated By: shivaprasad.hs

Updated on: Oct 01, 2021 | 2:36 PM

ಸ್ಯಾಂಡಲ್​ವುಡ್ ನಟ ನೀನಾಸಂ ಸತೀಶ್​ಗೆ ಮಾತೃ ವಿಯೋಗವಾಗಿದೆ. ಅವರ ತಾಯಿ ಚಿಕ್ಕ ತಾಯಮ್ಮ ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.

Ninasam Sathish: ನಟ ನೀನಾಸಂ ಸತೀಶ್​ ಅವರಿಗೆ ಮಾತೃ ವಿಯೋಗ
ತಮ್ಮ ತಾಯಿಯವರೊಂದಿಗೆ ನೀನಾಸಂ ಸತೀಶ್ (ಸಂಗ್ರಹ ಚಿತ್ರ)
Follow us on

ಸ್ಯಾಂಡಲ್​ವುಡ್ ನಟ ನೀನಾಸಂ ಸತೀಶ್ ಅವರ ತಾಯಿ ಚಿಕ್ಕತಾಯಮ್ಮ ನಿಧನರಾಗಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 80 ವರ್ಷ ವಯಸ್ಸಾಗಿತ್ತು. ಆರ್​.ಆರ್​.ನಗರದಲ್ಲಿರುವ ನಿವಾಸದಲ್ಲಿ ಇಂದು ಮುಂಜಾನೆ ಅವರು ನಿಧನ ಹೊಂದಿದ್ದಾರೆ.

‘ನಾನು ಇಂದು ಏನಾಗಿದ್ದೇನೋ ಅದಕ್ಕೆ ತಾಯಿಯೇ ಕಾರಣ’ ಎಂದು ಅಮ್ಮನ ಕುರಿತು ಪ್ರೀತಿಯಿಂದ ನುಡಿದಿದ್ದ ಸತೀಶ್:
ಇತ್ತೀಚೆಗೆ ಟಿವಿ9ನೊಂದಿಗೆ ಮಾತನಾಡುತ್ತಾ ಸತೀಶ್ ತಮ್ಮ ತಾಯಿಯ ಕುರಿತು ಮಾತನಾಡಿದ್ದರು. ಆಗ ‘‘ಅಮ್ಮ ಅಂದರೆ ನನಗೆ ಶಕ್ತಿ ಇದ್ದಂತೆ. ನನಗೆ ಆತ್ಮ ವಿಶ್ವಾಸ ನೀಡಿದ್ದೇ ಅವರು. ನನಗೆ ಮೂರು ವರ್ಷವಿದ್ದಾಗ ತಂದೆ ತೀರಿಕೊಂಡಿದ್ದರು. ಆಗಿನಿಂದ ಅಮ್ಮನೇ ನನಗೆ ಎಲ್ಲಾ. ಬಡತನದಲ್ಲಿಯೂ ಅವರು ನನ್ನನ್ನು ಬೆಳೆಸಿದ್ದರು. ನಾವು ಎಂಟು ಜನ ಮಕ್ಕಳು. ಎಲ್ಲರನ್ನೂ  ಸಾಕಿ, ಬದುಕಿನ ಬಗ್ಗೆ ಪ್ರೀತಿ, ಶಿಸ್ತನ್ನು ಕಲಿಸಿದವರು ನಮ್ಮ ತಾಯಿ. ನಾನು ಇಂದು ಏನಾಗಿದ್ದೇನೋ ಅದಕ್ಕೆ ನನ್ನ ತಾಯಿಯೇ ಕಾರಣ. ಅಮ್ಮ ಎಂದರೆ ನನಗೆ ತಂದೆ-  ತಾಯಿ ಎಲ್ಲಾ’’ ಎಂದು ನುಡಿದಿದ್ದರು.

ನೀನಾಸಂ ಸತೀಶ್ ಬದುಕಿಗೆ ಸ್ಫೂರ್ತಿ ತುಂಬಿ, ಇಂದು ಚಿತ್ರರಂಗದಲ್ಲಿ ತಮ್ಮ ವಿಶೇಷ ಪ್ರತಿಭೆಯಿಂದ ಎತ್ತರಕ್ಕೆ ಬೆಳೆಯಲು ಕಾರಣರಾಗಿದ್ದ ಅವರ ತಾಯಿ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಅಂತ್ಯಕ್ರಿಯೆ ಮದ್ದೂರಿನ ಯಲದಹಳ್ಳಿಯಲ್ಲಿ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:

ಟೆಕ್ಕಿ ಸಾವಿಗೆ 2.82 ಕೋಟಿ ಪರಿಹಾರ ನೀಡದೆ ಸತಾಯಿಸಿದ ಸಾರಿಗೆ ಇಲಾಖೆ: ಬಸ್ ಜಪ್ತಿ ಮಾಡಿದ ಕೋರ್ಟ್​​ ಸಿಬ್ಬಂದಿ!

Published On - 12:55 pm, Fri, 1 October 21