Nikhil Kumar: ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ: ನಿಖಿಲ್ ಕುಮಾರ್​ಗೆ ಆಹ್ವಾನ

|

Updated on: Jan 10, 2024 | 12:34 PM

ರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ನಿಖಿಲ್ ಅವರಿಗೆ ಆಹ್ವಾನ ಪತ್ರಿಕೆ ನೀಡಲಾಗಿದೆ. ಈ ಫೋಟೋ ವೈರಲ್ ಆಗಿದೆ. ನಿಖಿಲ್​ಗೆ ನೀಡಿದ ಆಮಂತ್ರಣ ಪತ್ರದ ಫೋಟೋಗಳು ವೈರಲ್ ಆಗಿವೆ.

Nikhil Kumar: ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ: ನಿಖಿಲ್ ಕುಮಾರ್​ಗೆ ಆಹ್ವಾನ
ರಾಮ ಮಂದಿರ ಸಮಾರಂಭಕ್ಕೆ ಆಹ್ವಾನ ಪಡೆದ ನಿಖಿಲ್
Follow us on

ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ದಿನಗಣನೆ ಆರಂಭ ಆಗಿದೆ. ಜನವರಿ 22ರಂದು ವಿಜೃಂಭಣೆಯಿಂದ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕೆ ಅನೇಕ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ. ಜನವರಿ 22ರಂದು ನಡೆಯಲಿರುವ ರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರ್ (Nikhil Kumar)​ ಅವರಿಗೆ ಆಹ್ವಾನ ನೀಡಲಾಗಿದೆ.

ರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ನಿಖಿಲ್ ಅವರಿಗೆ ಆಹ್ವಾನ ಪತ್ರಿಕೆ ನೀಡಲಾಗಿದೆ. ಈ ಫೋಟೋ ವೈರಲ್ ಆಗಿದೆ. ನಿಖಿಲ್​ಗೆ ನೀಡಿದ ಆಮಂತ್ರಣ ಪತ್ರದ ಫೋಟೋಗಳು ವೈರಲ್ ಆಗಿವೆ. ನಿಖಿಲ್ ಕುಮಾರ್ ಅವರು ಕೂಡ ಈ ಕಾರ್ಯಕ್ರಮ ನೋಡಲು ಅಯೋಧ್ಯೆಗೆ ತೆರಳುತ್ತಾರಾ ಎನ್ನುವ ಕೌತುಕ ಮೂಡಿದೆ.

2016ರಲ್ಲಿ ರಿಲೀಸ್ ಆದ ‘ಜಾಗ್ವಾರ್’ ಸಿನಿಮಾ ಮೂಲಕ ನಿಖಿಲ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. 2019ರಲ್ಲಿ ‘ಸೀತಾರಾಮ ಕಲ್ಯಾಣ’ ಸಿನಿಮಾ ರಿಲೀಸ್ ಆಯಿತು. ಅದೇ ವರ್ಷ ಬಿಡುಗಡೆ ಆದ ‘ಕುರುಕ್ಷೇತ್ರ’ ಸಿನಿಮಾದಲ್ಲಿ ಅಭಿಮನ್ಯುವಿನ ಪಾತ್ರದಲ್ಲಿ ನಿಖಿಲ್ ನಟಿಸಿದರು. 2021ರಲ್ಲಿ ‘ರೈಡರ್’ ಸಿನಿಮಾ ರಿಲೀಸ್ ಆಯಿತು.

ಇದನ್ನೂ ಓದಿ: ಎರಡು ಬಾರಿ ಸೀತೆ ಪಾತ್ರ ಮಾಡಿದ ಈ ನಟಿಗೆ ಅಯೋಧ್ಯೆಯಲ್ಲಿ ರಾಮನ ನೋಡುವ ಕಾತುರ

ಈಗ ನಿಖಿಲ್ ಕುಮಾರ್​ ಅವರ ಮುಂದಿನ ಚಿತ್ರಕ್ಕೆ ದಕ್ಷಿಣದ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. ವಿಕ್ರಂ, ಐಶ್ವರ್ಯಾ ರೈ, ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ ಸೇರಿ ಹಲವು ಸ್ಟಾರ್ ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ಲೈಕಾ ಪ್ರೊಡಕ್ಷನ್ ಹೌಸ್​ಗೆ ಇದೆ. ನಿಖಿಲ್ ಕುಮಾರ್​ ಚಿತ್ರದ ಮೂಲಕ ಈ ನಿರ್ಮಾಣ ಸಂಸ್ಥೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ಕೂಡ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:20 pm, Wed, 10 January 24