31ನೇ ವಸಂತಕ್ಕೆ ಕಾಲಿಟ್ಟ ನಿಖಿಲ್ ಗೌಡ; ಕೇಕ್​ ತಿನ್ನಿಸಿ ಶುಭ ಹಾರೈಸಿದ ಹೆಚ್​ಡಿ ಕುಮಾರಸ್ವಾಮಿ

ಇಂದು ನಿಖಿಲ್ ಕುಮಾರಸ್ವಾಮಿ ತಮ್ಮ ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಅಭಿಮಾನಿಗಳೆಲ್ಲ ಕೇಕ್​ ಕತ್ತರಿಸುವ ಮೂಲಕ ನಿಖಿಲ್ ಹುಟ್ಟಿದ ದಿನವನ್ನು ಸಂಭ್ರಮಿಸಿದ್ದಾರೆ.

31ನೇ ವಸಂತಕ್ಕೆ ಕಾಲಿಟ್ಟ ನಿಖಿಲ್ ಗೌಡ; ಕೇಕ್​ ತಿನ್ನಿಸಿ ಶುಭ ಹಾರೈಸಿದ ಹೆಚ್​ಡಿ ಕುಮಾರಸ್ವಾಮಿ
ನಿಖಿಲ್​ಗೆ ಇಂದು ಹುಟ್ಟು ಹಬ್ಬದ ಸಂಭ್ರಮ
shruti hegde

|

Jan 22, 2021 | 12:46 PM

ಬೆಂಗಳೂರು: ಸ್ಯಾಂಡಲ್​ವುಡ್​ ಯುವರಾಜ​ ನಿಖಿಲ್​ ಕುಮಾರಸ್ವಾಮಿಗೆ ಇಂದು (ಜ. 22) ಹುಟ್ಟು ಹಬ್ಬದ ಸಂಭ್ರಮ. ಜೆ.ಪಿ ನಗರದ ಮನೆಯಲ್ಲಿ ಕೇಕ್​ ಕತ್ತರಿಸುವ ಮೂಲಕ ನಿಖಿಲ್​ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

31ನೇ ವಸಂತಕ್ಕೆ ಕಾಲಿಟ್ಟ ನಿಖಿಲ್​ ಹುಟ್ಟು ಹಬ್ಬಕ್ಕೆ ಬಗೆಗೆ ಬಗೆಯ ಗಿಫ್ಟ್​ ಹಾಗೂ ಕೇಕ್​ಗಳನ್ನು ತಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ರಕ್ತದಾನ, ಅನ್ನದಾನ ಶಿಬಿರವನ್ನು ಸಹ ಹಮ್ಮಿಕೊಳ್ಳಲಾಗಿದೆ. ವಿಜಯ್ ಕೊಂಡ ಆಕ್ಷನ್ ಕಟ್ ಹೇಳ್ತಿರೋ ‘ರೈಡರ್’ ಚಿತ್ರ ಟೀಸರ್​ ರಿಲೀಸ್​ ಮಾಡುವ ಮೂಲಕ ಚಿತ್ರತಂಡ ಭರ್ಜರಿ ಗಿಫ್ಟ್​ ನೀಡಿದೆ. ನಿಖಿಲ್ ಹುಟ್ಟು ಹಬ್ಬಕ್ಕೆ ಆಗಮಿಸಿರುವ ಅಭಿಮಾನಿಗಳನ್ನು ನೋಡಿ, ನಿಖಿಲ್ ಪತ್ನಿ ರೇವತಿ ಹಾಗೂ ತಾಯಿ ಅನಿತಾ ಕುಮಾರಸ್ವಾಮಿ  ಸಂತೋಷಗೊಂಡಿದ್ದಾರೆ.

ನಿಖಿಲ್ ಮಾತು:

ಕೊರೊನಾ ಸಂಕಷ್ಟ ಕಾಲದಲ್ಲಿ ಹುಟ್ಟು ಹಬ್ಬ ಆಚರಣೆ ಬೇಡ ಎಂದುಕೊಂಡಿದ್ದೆ. ಆದರೆ, ಸಾವಿರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹುಟ್ಟು ಹಬ್ಬ ಆಚರಣೆಗೆ ಇಲ್ಲಿ ಬಂದಿದ್ದೀರಿ. ಎಲ್ಲರೂ ಸುರಕ್ಷಿತವಾಗಿ ಮನೆ ತಲುಪಬೇಕು. ಆಗಲೇ ನನಗೆ ನೆಮ್ಮದಿ. ರಾಜ್ಯದ ಮೂಲೆ ಮೂಲೆಗಳಿಂದ ಅನೇಕ ಯುವಕರು ಬಂದಿದ್ದಾರೆ. ಎಲ್ಲರಿಗೂ ಧನ್ಯವಾದಗಳು ಎಂದು ನಿಖಿಲ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ಕುರಿತಂತೆ ಮಾತನಾಡಿದ ನಿಖಿಲ್, ಜೆಡಿಎಸ್ ಪಕ್ಷ ಅಂದರೆ ರೈತರ ಪಕ್ಷ. ಮುಂದಿನ ದಿನಗಳಲ್ಲಿ ಜೆಡಿಎಸ್ ಯುವಕರ ಪಕ್ಷವೂ ಆಗುತ್ತದೆ. ನಾವೆಲ್ಲಾ ಸಮಾಜದ ಏಳಿಗೆಗಾಗಿ ಜೊತೆಯಾಗಿ ದುಡಿಯೋಣ. ಇಂದು ರೈಡರ್ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ. ಟೀಸರ್ ನೋಡಿ ಅಭಿಪ್ರಾಯ ತಿಳಿಸಿ. ರೈಡರ್ ಸಿನಿಮಾದ ಶೂಟಿಂಗ್ ಶೇ.30 ಬಾಕಿ ಇದೆ ಎಂದು ಮಾತನಾಡಿದ್ದಾರೆ.

ಸ್ಯಾಂಡಲ್​ವುಡ್ ಸಾರಥಿಗೆ ಹುಟ್ಟುಹಬ್ಬದ ಸಂಭ್ರಮ, 43ನೇ ವಸಂತಕ್ಕೆ ಕಾಲಿಟ್ಟ ಚಾಲೆಂಜಿಂಗ್ ಸ್ಟಾರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada