Modala Male: ಅಬ್ಬಬ್ಬಾ.. ಈ ಹೀರೋಗೆ 9 ಹೀರೋಯಿನ್​; ಜೂನ್​ 23ಕ್ಕೆ ಬರುತ್ತೆ ‘ಮೊದಲ ಮಳೆ’

Sandalwood News: 10 ಹೀರೋಯಿನ್​ ಇಟ್ಕೊಂಡು ಇವರಿಗಾಗಿ ಸಿನಿಮಾ ಮಾಡೋಕೆ ಆಗುತ್ತಾ ಎಂಬ ಮಾತು ಕೆಲವರಿಂದ ಕೇಳಿಬಂದಿತ್ತು. ಅದನ್ನೇ ಸವಾಲಾಗಿ ಸ್ವೀಕರಿಸಿ ‘ಮೊದಲ ಮಳೆ’ ಸಿನಿಮಾ ಮಾಡಲಾಗಿದೆ!

Modala Male: ಅಬ್ಬಬ್ಬಾ.. ಈ ಹೀರೋಗೆ 9 ಹೀರೋಯಿನ್​; ಜೂನ್​ 23ಕ್ಕೆ ಬರುತ್ತೆ ‘ಮೊದಲ ಮಳೆ’
‘ಮೊದಲ ಮಳೆ’ ಕನ್ನಡ ಸಿನಿಮಾದ ಫೋಟೋ
Follow us
ಮದನ್​ ಕುಮಾರ್​
|

Updated on: Jun 19, 2023 | 8:41 PM

ಕನ್ನಡ ಚಿತ್ರರಂಗದಲ್ಲಿ (Kannada Film Industry) ಡಿಫರೆಂಟ್​ ಕಹಾನಿ ಇರುವ ಸಿನಿಮಾಗಳು ಕೂಡ ಬರುತ್ತವೆ. ಅದಕ್ಕೆ ಲೇಟೆಸ್ಟ್​ ಸೇರ್ಪಡೆ ‘ಮೊದಲ ಮಳೆ’ ಸಿನಿಮಾ. ಹೀರೋ ಎಂದರೆ ಹೀಗೆಯೇ ಇರಬೇಕು ಎಂಬ ಸಿದ್ಧಸೂತ್ರವನ್ನು ಮುರಿದು ಹಾಕುವ ಚಿತ್ರಗಳ ಸಾಲಿಗೆ ಈ ಸಿನಿಮಾ (New Kannada Movie) ಸೇರುತ್ತದೆ. ಯಾವುದೇ ಹುಡುಗಿಯೂ ಇಷ್ಟಪಡದಂತಹ (ವಿ)ರೂಪವಂತ ಯುವಕನೊಬ್ಬ ಮದುವೆಯಾಗಬೇಕು ಎಂದುಕೊಂಡಾಗ ಏನೆಲ್ಲ ನಡೆಯಬಹುದು ಎಂಬ ಕಾನ್ಸೆಪ್ಟ್​ ಇಟ್ಟುಕೊಂಡು ಈ ಸಿನಿಮಾ ಸಿದ್ಧವಾಗಿದೆ. ಬಹಳ ಹಾಸ್ಯಮಯವಾದ ಕಥಾಹಂದರ ‘ಮೊದಲ ಮಳೆ’ (Modala Male Movie) ಸಿನಿಮಾದಲ್ಲಿ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾದಲ್ಲಿ ರಾಜಾ ನರಸಿಂಹ ಹೀರೋ ಆಗಿ ನಟಿಸಿದ್ದಾರೆ. ಅವರ ಜೊತೆ ಒಂಬತ್ತು ನಾಯಕಿಯರು ನಟಿಸಿದ್ದಾರೆ.

‘ಮೊದಲ ಮಳೆ’ ಸಿನಿಮಾ ಜೂನ್​ 23ರಂದು ಬಿಡುಗಡೆ ಆಗಲಿದೆ. ಟೈಟಲ್​ ನೋಡಿದರೆ ಇದೊಂದು ಲವ್​ ಸ್ಟೋರಿ ಎನಿಸಬಹುದು. ಆದರೆ ಈ ಸಿನಿಮಾದಲ್ಲಿ ಮರ್ಡರ್ ಮಿಸ್ಟ್ರಿ, ಕಾಮಿಡಿ, ಹಾರರ್ ಕಥಾಹಂದರ ಕೂಡ ಇದೆ. ರಾಜಾ ನರಸಿಂಹ ಅವರು ನಾಯಕನಾಗಿ ನಟಿಸುವುದರ ಜೊತೆಗೆ ಬಂಡವಾಳವನ್ನೂ ಹೂಡಿದ್ದಾರೆ. ರಾಜಾ ನರಸಿಂಹ ಜೊತೆ ಮಮತಾ ಗೌಡ, ಸಾಹಿತ್ಯ, ಉಷಾ, ಪ್ರಿಯಾ ಶೆಟ್ಟಿ ಸೇರಿದಂತೆ 9 ನಾಯಕಿಯರಾಗಿ ನಟಿಸಿದ್ದಾರೆ ಎಂಬುದು ವಿಶೇಷ.

ರಾಜ್​ ಶರಣ್ ಅವರು ‘ಮೊದಲ ಮಳೆ’ ಸಿನಿಮಾಗೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಸಿನಿಮಾದ ಕುರಿತು ನಾಯಕ ರಾಜಾ ನರಸಿಂಹ ಅವರು ಮಾತನಾಡಿದ್ದಾರೆ. ‘ನಾನು ರೈತನ ಮಗ. ನಟ ಆಗಬೇಕು ಎಂಬುದು ನನ್ನ ಬಹುದಿನಗಳ ಕನಸು. ಈ ಸಿನಿಮಾವನ್ನು ನಾನೇ ನಿರ್ಮಾಣ ಮಾಡಿದ್ದೇನೆ. ಅದರ ಜೊತೆಗೆ ಹಿರೋ ಆಗಿಯೂ ಅಭಿನಯಿಸಿದ್ದೇನೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಹಳ್ಳಿಯಿಂದ ನಗರಕ್ಕೆ ಬರುವ ನಾಯಕ ಜವರಾಯ ಕೊನೆಗೆ ಏನಾಗುತ್ತಾನೆ ಎಂಬುದೇ ಈ ಸಿನಿಮಾದ ಕಥೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:  ‘ಕೊರಗಜ್ಜ’ ಚಿತ್ರಕ್ಕೆ ಹಾಲಿವುಡ್​ ತಂತ್ರಜ್ಞರಿಂದ ಗ್ರಾಫಿಕ್ಸ್​ ಕೆಲಸ; 3 ಬಾರಿ ನಡೆಯಿತು ಕ್ಲೈಮ್ಯಾಕ್ಸ್​ ಚಿತ್ರೀಕರಣ

ಈ ಹಿಂದೆ ‘ಎಮ್ಮೆ ತಮ್ಮ’ ಎಂಬ ಚಿತ್ರ ನಿರ್ದೇಶಿಸಿದ್ದ ರಾಜ್​ ಶರಣ್ ಅವರು ಈಗ ‘ಮೊದಲ ಮಳೆ’ ಸಾರಥ್ಯ ವಹಿಸಿದ್ದಾರೆ. ‘ರಾಜಾ ನರಸಿಂಹ ಅವರು ನಮ್ಮ ಸ್ನೇಹಿತರು. ಅವರಿಗಾಗಿಯೇ ಒಂದು ಕಥೆ ಮಾಡಿದೆ. ಆ ಸಿನಿಮಾ ಆಗಲಿಲ್ಲ. ಇವರಿಗೇನು 10 ಹೀರೋಯಿನ್ ಇಟ್ಕೊಂಡು ಸಿನಿಮಾ ಮಾಡೋಕೆ ಆಗುತ್ತಾ ಎನ್ನುವ ಮಾತು ಕೆಲವರಿಂದ ಕೇಳಿಬಂತು. ಯಾಕೆ ಆಗಲ್ಲ ಅಂತ ಅದನ್ನೇ ಚಾಲೆಂಜ್ ಆಗಿ ತಗೊಂಡು ಈ ಸಿನಿಮಾ ಮಾಡಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Neha Shetty: ಮತ್ತೇ ಕನ್ನಡ ಸಿನಿಮಾದಲ್ಲಿ ʼಮುಂಗಾರು ಮಳೆ 2ʼ ಬೆಡಗಿ?

‘ಯಾವುದೇ ವ್ಯಕ್ತಿಯ ಬದುಕಿನಲ್ಲಿ ಮದುವೆ ಎನ್ನುವುದು ಮೊದಲ ಮಳೆ ಇದ್ದಂತೆ. ಈ ಸಿನಿಮಾದ ಕಥಾನಾಯಕನ ಜೀವನದಲ್ಲೂ ಮೊದಲ ಮಳೆ ಆಗುತ್ತಾ ಅಥವಾ ಇಲ್ಲವಾ ಅನ್ನೋದೇ ಈ ಚಿತ್ರದ ಕಥೆ. ಮಡಿಕೇರಿ, ಸಕಲೇಶಪುರ, ಮೈಸೂರು, ಬೆಂಗಳೂರು ಸುತ್ತಮುತ್ತ 40 ದಿನ ಶೂಟಿಂಗ್​ ಮಾಡಿದ್ದೇವೆ. ಹಾರರ್ ಸನ್ನಿವೇಶಗಳು ಇರುವ ಕಾರಣದಿಂದ ನಮ್ಮ ಸಿನಿಮಾಗೆ ಯು/ಎ ಪ್ರಮಾಣಪತ್ರ ಸಿಕ್ಕಿದೆ’ ಎಂದು ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ. ಗಣೇಶ್​ ರಾವ್, ಜ್ಯೋತಿ ಮರೂರು ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಸನ್ನ ಭೋಜ ಶೆಟ್ಟರ್ ಅವರು ಸಂಗೀತ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.