ದರ್ಶನ್ ಅಲ್ಲ, ರೇಣುಕಾ ಸ್ವಾಮಿ ಕೊಲೆಯಲ್ಲಿ ಪ್ರಮುಖ ಪಾತ್ರ ಇವನದ್ದೇ..
ದರ್ಶನ್, ಪವಿತ್ರಾ ಗೌಡ, ವಿನಯ್, ಪ್ರದೋಶ್ ಮುಂತಾದವರು ರೇಣುಕಾ ಸ್ವಾಮಿ ಕೊಲೆ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖವಾಗಿರುವ ಮತ್ತೋರ್ವ ವ್ಯಕ್ತಿ ಇದ್ದಾರೆ. ಅದುವೇ ಪವನ್. ಎಂಬಿಎ ಮಾಡಿದ್ದ ಈತ, ದರ್ಶನ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ. ನಂತರ ಪವಿತ್ರಾ ಮನೆಗೆ ಶಿಫ್ಟ್ ಆಗಿದ್ದ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಹೆಸರು ಹೈಲೈಟ್ ಆಗುತ್ತಿದೆ. ನಟಿ ಪವಿತ್ರಾ ಗೌಡ ಈ ಪ್ರಕರಣದಲ್ಲಿ ಎ1 ಆರೋಪಿ ಆದರೂ ಅವರಿಗಿಂತ ಹೆಚ್ಚಾಗಿ ಚರ್ಚೆಯಲ್ಲಿ ಇರುವ ಹೆಸರು ದರ್ಶನ್ ಅವರದ್ದು. ಆದರೆ, ಈ ಪ್ರಕರಣದಲ್ಲಿ ರೇಣುಕಾಸ್ವಾಮಿ ಪತ್ತೆಯಿಂದ ಹತ್ಯೆವರೆಗೂ ಪ್ರತಿ ಹಂತದಲ್ಲೂ ಓರ್ವನ ಪಾತ್ರ ಹೆಚ್ಚಿದೆ. ಅಷ್ಟಕ್ಕೂ ಆತ ಯಾರು? ಆತನೇ ಪುಟ್ಟಸ್ವಾಮಿ ಅಲಿಯಾಸ್ ಪವನ್.
ಪವಿತ್ರ ಹೆಸರಿನಲ್ಲಿ ಚ್ಯಾಟಿಂಗ್ ಆರಂಭಿಸಿ, ರೇಣುಕಾಸ್ವಾಮಿ ಪತ್ತೆ ಮಾಡಿ ಕೊಲೆ ಮಾಡುವವರೆಗೂ ಇದೆ. ಈ ಪ್ರಕರಣದಲ್ಲಿ ಆತ ಎ3 ಆಗಿದ್ದಾನೆ. ಆತ ಪೊಲೀಸರ ಎದುರು ಹಲವು ವಿಚಾರಗಳನ್ನು ಒಪ್ಪಿಕೊಂಡಿದ್ದಾನೆ. ಬಿಕಾಂ ಮುಗಿಸಿ ಎಂಬಿಎ ಮಾಡಿದ ಈತ ದರ್ಶನ್ ಮನೆ ಸೆಕ್ಯೂರಿಟಿ ಗಾರ್ಡ್ ಆಗಿದ್ದ.
ಪವನ್ ಓದುತಿದ್ದ ಕಾಲೇಜು ಬಳಿಯೇ ದರ್ಶನ್ ಮನೆ ಇತ್ತು. ಓದು ಮುಗಿಸಿದ ಬಳಿಕ ದರ್ಶನ್ ಮನೆಯಲ್ಲೇ ಕೆಲಸ ಹುಡುಕಿಕೊಂಡ. ಮೊದಲು ವಾಚ್ಮ್ಯಾನ್ ಆಗಿದ್ದ ಈತ ನಂತರ ಮನೆಗೆಲಸ ಮಾಡುತ್ತಿದ್ದ. ನಂತರ ಪವಿತ್ರ ಮನೆಗೆ ತೆರಳುವಂತೆ ಪವನ್ಗೆ ದರ್ಶನ್ ಸೂಚನೆ ನೀಡಿದ್ದರು. ಅದರಂತೆ ಪವನ್ ಆರು ವರ್ಷಗಳ ಹಿಂದೆ ಪವಿತ್ರಾ ಮನೆ ಸೇರಿದ್ದ. ಪವಿತ್ರಾ ಗೌಡ ಕಾರ್ ಡ್ರೈವರ್ ಆಗಿ, ಅವರ ಮನೆಗೆಲಸ ಮಾಡಿಕೊಂಡು ಪವನ್ ಇದ್ದ. ಪವಿತ್ರಾ ಗೌಡರನ್ನು ಅಮ್ಮಾಜಿ ಮತ್ತು ಪವಿ ಅಕ್ಕ ಎಂದು ಕರೆಯುತಿದ್ದ. ಈತನ ಸಂಬಳ ತಿಂಗಳಿಗೆ ಕೇವಲ 15 ಸಾವಿ ರೂಪಾಯಿ. ಎಂಬಿಎ ಓದಿ ಮನೆಗೆಲಸ ಮಾಡುತ್ತಿದ್ದ ಪವನ್ ಬಗ್ಗೆ ವಿಜಯಲಕ್ಷ್ಮೀ ಸಾಕಷ್ಟು ಕೋಪ ಇತ್ತು.
ಪವಿತ್ರಾ ಗೌಡ ಅಕೌಂಟ್ನಿಂದ ರೇಣುಕಾಸ್ವಾಮಿಗೆ ಪವನ್ನಿಂದಲೇ ಮೊದಲ ಸಂದೇಶ ಹೋಗಿತ್ತು. ಮೆಸೆಜ್ ಕಂಡು ಬುದ್ಧಕಲಿಸೊದಾಗಿ ಪವಿತ್ರ ಗೌಡಗೆ ಪವನ್ ತಿಳಿಸಿದ್ದ. ಪವನ್ ತನ್ನ ಫೋನ್ ನಂಬರ್ ಅನ್ನು ರೇಣುಕಾಸ್ವಾಮಿ ಬಳಕೆ ಮಾಡುತ್ತಿದ್ದ Gowtham K.S ಅಕೌಂಟ್‌ಗೆ ಕಳುಹಿಸಿದ್ದ. ನಂಬರ್ ಕಳುಹಿಸಿದ ಕೂಡಲೇ ಕಾಲ್ ಬಂದಿತ್ತು. ಬಂದ ಕಾಲ್ ರಿಸೀವ್ ಮಾಡಿ ಪವಿತ್ರಾರಿಂದ ಪ್ರೀತಿಯ ಮಾತುಗಳನ್ನು ಆಡುವಂತೆ ಕೇಳಿಕೊಂಡಿದ್ದ ಪವನ್. ನಂತರ ಪವಿತ್ರಾ ಹೆಸರಲ್ಲಿ ಪವನ್ ಮೆಸೇಜ್ ಮಾಡಿದ್ದ.
ಇದನ್ನೂ ಓದಿ: 20 ಸಾವಿರ ಸಂಬಳಕ್ಕೆ ಇವಳನ್ನು ಮೇಂಟೇನ್ ಮಾಡೋಕಾಗತ್ತಾ? ರೇಣುಕಾ ಸ್ವಾಮಿಗೆ ಪ್ರಶ್ನಿಸಿದ್ದ ದರ್ಶನ್
ನಂತರ ಕಷ್ಟಪಟ್ಟು ರೇಣುಕಾ ಸ್ವಾಮಿಯನ್ನು ಪವನ್ ಹುಡುಕಿದ್ದ. ಪವನ್ನಿಂದಲೇ ರೇಣುಕಾಸ್ವಾಮಿ ಕಿಡ್ನ್ಯಾಪ್ ಪ್ಲ್ಯಾನ್ ನಡೆದಿತ್ತು. ರೇಣುಕಾಸ್ವಾಮಿ ಕರೆತರಲು ರಾಘವೇಂದ್ರಗೆ ಪವನ್ ಸೂಚಿಸಿದ್ದ. ಕರೆತಂದ ಮೇಲೆ ಪವನ್ ಮೇಲೆ ಈತನೂ ಹಲ್ಲೆ ಮಾಡಿದ್ದ. ಈ ಬಗ್ಗೆ ಪೊಲೀಸರಿಗೆ ಸ್ವ ಇಚ್ಚಾ ಹೇಳಿಕೆ ನೀಡಿದ್ದಾನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.