Sreeleela: ಟಾಲಿವುಡ್​ಗೆ ಹೋಗಿ ರಶ್ಮಿಕಾ ಮಂದಣ್ಣ ಮಾಡಿದ ತಪ್ಪು ಮಾಡಲಿಲ್ಲ ಕನ್ನಡತಿ ಶ್ರೀಲೀಲಾ

| Updated By: ರಾಜೇಶ್ ದುಗ್ಗುಮನೆ

Updated on: Dec 23, 2022 | 6:30 AM

ಇಂದು (ಡಿಸೆಂಬರ್ 23) ಅವರ ನಟನೆಯ ‘ಧಮಾಕಾ’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದ ಪ್ರಚಾರಕ್ಕಾಗಿ ಸಾಕಷ್ಟು ಮಾಧ್ಯಮಗಳಿಗೆ ಶ್ರೀಲೀಲಾ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರಿಗೆ ‘ಕಾಂತಾರ’ ಬಗ್ಗೆ ಪ್ರಶ್ನೆ ಎದುರಾಗಿದೆ.

Sreeleela: ಟಾಲಿವುಡ್​ಗೆ ಹೋಗಿ ರಶ್ಮಿಕಾ ಮಂದಣ್ಣ ಮಾಡಿದ ತಪ್ಪು ಮಾಡಲಿಲ್ಲ ಕನ್ನಡತಿ ಶ್ರೀಲೀಲಾ
ರಶ್ಮಿಕಾ-ಶ್ರೀಲೀಲಾ
Follow us on

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯಕ್ಕಂತೂ ಕನ್ನಡ ಚಿತ್ರರಂಗಕ್ಕೆ ಮರಳೋದು ಅನುಮಾನವೇ. ಇದಕ್ಕೆ ಪ್ರಮುಖ ಕಾರಣ ಕನ್ನಡ ಸಿನಿಮಾ ಬಗ್ಗೆ ಹಾಗೂ ಕನ್ನಡ ಭಾಷೆ ಬಗ್ಗೆ ಅವರು ಆಡಿದ ಮಾತುಗಳು. ಇನ್ನು, ರಶ್ಮಿಕಾ ಮಂದಣ್ಣ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಪ್ರತಿ ಚಿತ್ರಕ್ಕೆ ಕೋಟಿ ಕೋಟಿ ಹಣ ಪಡೆಯುತ್ತಾರೆ. ಅವರನ್ನು ಆಯ್ಕೆ ಮಾಡಿಕೊಂಡರೆ ಸಿನಿಮಾ ಬಜೆಟ್ ಹೆಚ್ಚಲಿದೆ. ಕನ್ನಡದ ನಟಿ ಶ್ರೀಲೀಲಾ (Sreeleela) ಕೂಡ ಟಾಲಿವುಡ್​​ಗೆ ಹಾರಿದ್ದಾರೆ. ಆದರೆ, ಅವರು ರಶ್ಮಿಕಾ ಮಂದಣ್ಣ ಮಾಡಿದ ತಪ್ಪನ್ನು ಮಾಡಿಲ್ಲ.

ಶ್ರೀಲೀಲಾ ಅವರು ಕನ್ನಡದ ‘ಕಿಸ್​’ ಚಿತ್ರದಲ್ಲಿ ನಟಿಸಿ ಫೇಮಸ್ ಆದರು. ಬಳಿಕ ‘ಭರಾಟೆ’ ಚಿತ್ರಕ್ಕೆ ಹೀರೋಯಿನ್ ಆದರು. ತೆಲುಗಿನಲ್ಲಿ ನಟಿಸಿದ ಮೊದಲ ಸಿನಿಮಾ ‘ಪೆಳ್ಳಿ ಸಂದಡಿ’ ಸೂಪರ್ ಹಿಟ್ ಆಯಿತು. ಇಂದು (ಡಿಸೆಂಬರ್ 23) ಅವರ ನಟನೆಯ ‘ಧಮಾಕಾ’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದ ಪ್ರಚಾರಕ್ಕಾಗಿ ಸಾಕಷ್ಟು ಮಾಧ್ಯಮಗಳಿಗೆ ಶ್ರೀಲೀಲಾ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರಿಗೆ ‘ಕಾಂತಾರ’ ಬಗ್ಗೆ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಖುಷಿಯಿಂದಲೇ ಉತ್ತರಿಸಿದ್ದಾರೆ ಅವರು.

‘ನೀವು ಕಾಂತಾರ ನೋಡಿದ್ದೀರಾ’ ಎಂದು ಶ್ರೀಲೀಲಾಗೆ ಪ್ರಶ್ನೆ ಮಾಡಲಾಯಿತು. ‘ನಾನು ಕಾಂತಾರ ಚಿತ್ರವನ್ನು ವೀಕ್ಷಿಸಿದ್ದೇನೆ. ಸಿನಿಮಾ ಅದ್ಭುತವಾಗಿದೆ. ನಾನು ಕರ್ನಾಟಕದವಳು. ಕನ್ನಡ ಸಿನಿಮಾಗಳ ವ್ಯಾಪ್ತಿ ಹೆಚ್ಚಿರುವ ಬಗ್ಗೆ ನನಗೆ ತುಂಬಾ ಸಂತಸ ಇದೆ. ಅದು ಹೆಮ್ಮೆಯ ಕ್ಷಣ. ನಾವು ವಿಶಾಲ ಹೃದಯದವರು’ ಎಂದು ‘ಧಮಾಕಾ’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಶ್ರೀಲೀಲಾ ಹೇಳಿದ್ದಾರೆ.

ಇದನ್ನೂ ಓದಿ
ತೆಗೆದುಕೊಂಡ ತಪ್ಪು ನಿರ್ಧಾರದಿಂದ ಶ್ರೀಲೀಲಾಗೆ ಹಿನ್ನಡೆ; ಮಹೇಶ್ ಬಾಬು ಸಿನಿಮಾ ಒಪ್ಪಿಕೊಂಡಿದ್ದೇ ತಪ್ಪಾಯ್ತಾ?
Sreeleela: ಅಲ್ಲು ಅರ್ಜುನ್​ ಜತೆ ತೆರೆ ಹಂಚಿಕೊಂಡ ಶ್ರೀಲೀಲಾ; ಇಲ್ಲಿದೆ ಇಂಟರೆಸ್ಟಿಂಗ್​ ಅಪ್​ಡೇಟ್​
ಗಂಡನ ಮನೆಯ ಬೀಗ ಮುರಿದ ಶ್ರೀಲೀಲಾ ತಾಯಿ ಸ್ವರ್ಣಲತಾ; ಇಲ್ಲಿದೆ ವಿಡಿಯೋ

ಇದನ್ನೂ ಓದಿ:  ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಮ್​ ಖಾತೆ ಹ್ಯಾಕ್​ ಆಯ್ತಾ? ಉಲ್ಟಾ ಅಕ್ಷರದ ಅಸಲಿ ವಿಷಯ ಇಲ್ಲಿದೆ..

ಈ ಮೊದಲು ರಶ್ಮಿಕಾಗೂ ‘ಕಾಂತಾರ’ ಚಿತ್ರದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಅವರು ‘ನಾನು ಕಾಂತಾರ ಸಿನಿಮಾ ನೋಡಿಲ್ಲ’ ಎಂದು ಧಿಮಾಕಿನ ಉತ್ತರ ನೀಡಿದ್ದರು. ‘ಪುಷ್ಪ’ ರಿಲೀಸ್ ಸಂದರ್ಭದಲ್ಲಿ ಕನ್ನಡ ಭಾಷೆಯಲ್ಲಿ ಏಕೆ ಡಬ್ ಮಾಡಿಲ್ಲ ಎಂದು ಕೇಳಿದ್ದಕ್ಕೆ ‘ಸಮಯ ಇಲ್ಲ’ ಎಂಬ ಉತ್ತರ ಅವರ ಕಡೆಯಿಂದ ಬಂದಿತ್ತು. ಯೂಟ್ಯೂಬ್​ಗೆ ನೀಡಿದ ಸಂದರ್ಶನದಲ್ಲಿ ‘ನನಗೆ ಕನ್ನಡ ಸರಿಯಾಗಿ ಬರುವುದಿಲ್ಲ’ ಎಂದು ರಶ್ಮಿಕಾ ಹೇಳಿದ್ದರು. ಇದಕ್ಕಾಗಿ ಅವರು ಟೀಕೆ ಅನುಭವಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ