‘ಕಾಂತಾರ ಚಾಪ್ಟರ್ 1’ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ; ಮಾಡಿದ ದಾಖಲೆಗಳೆಗಳು ಒಂದೆರಡಲ್ಲ
ರಿಷಬ್ ಶೆಟ್ಟಿ ಅಭಿನಯದ ದೈವಿಕ ಸಂಚಲನ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ ಒಂದು ವರ್ಷ ಪೂರೈಸಿದೆ. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಬೃಹತ್ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದ ಈ ಚಿತ್ರ, ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಮುಖ್ಯಾಂಶಗಳು
- ಒಂದು ವರ್ಷದ ಸಂಭ್ರಮದಲ್ಲಿ 'ಕಾಂತಾರ 1'
- ಜಾಗತಿಕ ಮಟ್ಟದಲ್ಲಿ ಸ್ಯಾಂಡಲ್‌ವುಡ್ ಸದ್ದು!
- ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಸುನಾಮಿ
ಕನ್ನಡ ಚಿತ್ರರಂಗದ ಹೆಮ್ಮೆಯ ಸಿನಿಮಾ ಎನಿಸಿಕೊಂಡಿರುವ ‘ಕಾಂತಾರ: ಚಾಪ್ಟರ್ 1’ ಬಿಡುಗಡೆಯಾಗಿ ಒಂದು ವರ್ಷ ಪೂರ್ಣಗೊಂಡಿದೆ. ಕಳೆದ ವರ್ಷ (2025ರ ಅಕ್ಟೋಬರ್ 2) ಗಾಂಧಿ ಜಯಂತಿ ಪ್ರಯುಕ್ತ ಸಿನಿಮಾ ವಿಶ್ವಾದ್ಯಂತ ಅದ್ದೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದ್ದ ಈ ದೈವಿಕ ಕಥಾನಕ, ಭಾರತೀಯ ಬೆಳ್ಳಿಪರದೆಯ ಮೇಲೆ ಹೊಸ ದಾಖಲೆಗಳ ಸುನಾಮಿಯನ್ನೇ ಸೃಷ್ಟಿಸಿತ್ತು.
ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ರಿಷಬ್ ಶೆಟ್ಟಿ ಮ್ಯಾಜಿಕ್
ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿ, ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಈ ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೇ ಹೌಸ್‌ಫುಲ್ ಪ್ರದರ್ಶನ ಕಂಡಿತು. ಈ ಸಿನಿಮಾ ಒಟ್ಟೂ 900 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಕರಾವಳಿಯ ದೈವಾರಾಧನೆ ಹಾಗೂ ಜಾನಪದ ಸಂಸ್ಕೃತಿಯ ಸಾರವನ್ನು ಅತ್ಯಂತ ಅದ್ದೂರಿಯಾಗಿ ತೆರೆಯ ಮೇಲೆ ತಂದಿದ್ದ ಚಿತ್ರಕ್ಕೆ ಜಗತ್ತಿನಾದ್ಯಂತ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು.
ಕನ್ನಡ ಚಿತ್ರರಂಗಕ್ಕೆ ಜಾಗತಿಕ ಮನ್ನಣೆ
‘ಕಾಂತಾರ’ ಮೊದಲ ಭಾಗದ ಅಭೂತಪೂರ್ವ ಯಶಸ್ಸು ಮತ್ತು ರಾಷ್ಟ್ರಪ್ರಶಸ್ತಿಯ ಬಳಿಕ ಬಂದ ಈ ಪ್ರೀಕ್ವೆಲ್ ಕನ್ನಡ ಸಿನಿಮಾರಂಗದ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಿತು. ಕೇವಲ ಕಮರ್ಷಿಯಲ್ ಗಳಿಕೆ ಮಾತ್ರವಲ್ಲದೆ, ತಾಂತ್ರಿಕ ನೈಪುಣ್ಯತೆ, ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಹಾಗೂ ರಿಷಬ್ ಶೆಟ್ಟಿ ಅವರ ನಟನೆ ಸ್ಯಾಂಡಲ್‌ವುಡ್ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿಯಿತು. ಕರಾವಳಿ ಜಾನಪದ ಕಥೆಯನ್ನು ಆಧರಿಸಿ ಜಾಗತಿಕ ಮಟ್ಟದ ಸಿನಿಮಾ ನಿರ್ಮಿಸಬಹುದು ಎಂಬುದನ್ನು ಈ ಚಿತ್ರ ಸಾಬೀತುಪಡಿಸಿತು.
ಒಂದು ವರ್ಷ ಕಳೆದರೂ, ಆ ಅನುಭವ ಇನ್ನೂ ಹಸಿರಾಗಿದೆ. ❤️
ನಮ್ಮ ಮಣ್ಣಿನ ಕಥೆಯನ್ನು ನಿಮ್ಮ ಹೃದಯದ ಕಥೆಯನ್ನಾಗಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
1 YEAR of Divine Blockbuster #KantaraChapter1 ❤️🔥
A divine journey celebrating our roots, culture and traditions, made truly special by audiences across the… pic.twitter.com/H4UtMzl8xf
— Hombale Films (@hombalefilms) October 2, 2026
ಇದನ್ನೂ ಓದಿ:
ಎರಡನೇ ವೀಕೆಂಡ್ ಮೇಲೂ ಮುಂದುವರಿದ ಕ್ರೇಜ್
ಒಂದು ವರ್ಷದ ಹಿಂದೆ ಬಿಡುಗಡೆಯಾಗಿದ್ದರೂ, ಸಿನಿಮಾದ ಗುಂಗಿನಿಂದ ಪ್ರೇಕ್ಷಕರು ಇಂದಿಗೂ ಹೊರಬಂದಿಲ್ಲ. ಹಲವು ದಾಖಲೆಗಳನ್ನು ಬರೆದ ಈ ಚಿತ್ರ, ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸಾಕಷ್ಟು ದೊಡ್ಡ ಮೈಲಿಗಲ್ಲನ್ನು ಸ್ಥಾಪಿಸಿದೆ. ಈ ಚಿತ್ರವನ್ನು ಜನರು ಈಗಲೂ ಒಟಿಟಿಯಲ್ಲಿ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.
ಮುನ್ನೆಲೆಗೆ ಬಂದ ಮುನಿಸು
‘ಕಾಂತಾರ’ ಚಿತ್ರ ರಿಲೀಸ್ ಆಗಿ ನಾಲ್ಕು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಹೊಂಬಾಳೆ ಹಾಗೂ ರಿಷಬ್ ಟ್ವೀಟ್ ಮಾಡಿದ್ದರು. ಆದರೆ, ಎಲ್ಲಿಯೂ ಪರಸ್ಪರ ಹೆಸರು ಉಲ್ಲೇಖ ಮಾಡುವದಾಗಲಿ, ಟ್ಯಾಗ್ ಮಾಡುವುದಾಗಲಿ ಮಾಡಿರಲಿಲ್ಲ. ‘ಕಾಂತಾರ: ಚಾಪ್ಟರ್ 1’ ಪೋಸ್ಟ್ ಮಾಡುವ ಸಂದರ್ಭದಲ್ಲೂ ಇದೇ ಮುನಿಸು ಮುಂದುವರಿದಿರುವುದು ಸ್ಪಷ್ಟವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:58 am, Fri, 2 October 26




