ಪನ್ನಗಭರಣ ಅವರು ಚಿರುಗೆ ತುಂಬಾನೇ ಆಪ್ತರಾಗಿದ್ದರು. ಸಮಯ ಸಿಕ್ಕಾಗೆಲ್ಲ ಇಬ್ಬರೂ ಒಟ್ಟಾಗಿ ಸಮಯ ಕಳೆಯುತ್ತಿದ್ದರು. ಚಿರು ಮೃತಪಟ್ಟ ನಂತರ ಪನ್ನಗಭರಣ ಅವರು ತುಂಬಾನೇ ದುಃಖಪಟ್ಟಿದ್ದರು. ಆಪ್ತ ಸ್ನೇಹಿತನನ್ನು ಕಳೆದುಕೊಂಡಿದ್ದು ಅವರಿಗೆ ತೀವ್ರ ನೋವನ್ನುಂಟು ಮಾಡಿದೆ. ಈಗ ಅವರಿಗೆ ಚಿರಂಜೀವಿ ಸರ್ಜಾ ಅವರನ್ನು ಮರಳಿ ಪಡೆದಂತಾಗಿದೆಯಂತೆ. ಅದಕ್ಕೆ ಕಾರಣ ಜ್ಯೂ. ಚಿರು.
ಕಳೆದ ವರ್ಷ ಚಿರು ಹಾಗೂ ಮೇಘನಾ ರಾಜ್ ದಂಪತಿಗೆ ಗಂಡು ಮಗು ಜನಿಸಿತ್ತು. ಮಗುವನ್ನು ನೋಡುವ ಮೊದಲೇ ಚಿರು ಮೃತಪಟ್ಟಿದ್ದರು. ಇದು ಚಿರು ಕುಟುಂಬಕ್ಕೆ ಸಾಕಷ್ಟು ನೋವನ್ನುಂಟು ಮಾಡಿದೆ. ಆದರೆ, ಈ ನೋವನ್ನು ದೂರ ಮಾಡುವ ಕೆಲಸ ಮಾಡಿದ್ದಾನೆ ಜ್ಯೂ. ಚಿರು. ಸರ್ಜಾ ಕುಟುಂಬದವರು, ಅವರ ಗೆಳಯರು ಜ್ಯೂ. ಚಿರುವನ್ನು ಸಾಕಷ್ಟು ಇಷ್ಟಪಡುತ್ತಿದ್ದಾರೆ. ಅಲ್ಲದೆ, ಆ ಮಗುವಿನಲ್ಲಿ ಚಿರುವನ್ನು ಕಾಣುತ್ತಿದ್ದಾರೆ.
ಇತ್ತೀಚೆಗೆ ಪನ್ನಗಭರಣ ಅವರು ಮೇಘನಾ ಮನೆಗೆ ತೆರಳಿದ್ದರು. ಈ ವೇಳೆ ಜ್ಯೂ. ಚಿರುವನ್ನು ಎತ್ತಿಕೊಂಡಿದ್ದಾರೆ. ಈ ಫೋಟೋದಲ್ಲಿ ಪನ್ನಗಭರಣ ಅವರನ್ನೇ ಮಗು ದಿಟ್ಟಿಸಿ ನೋಡುತ್ತಿದೆ. ಈ ಫೋಟೋವನ್ನು ಹಂಚಿಕೊಂಡು ಅವರು ಸಂಭ್ರಮಿಸಿದ್ದಾರೆ. ಅಲ್ಲದೆ, ಇದಕ್ಕೆ ವಿಶೇಷ ಕ್ಯಾಪ್ಶನ್ ಕೂಡ ನೀಡಿದ್ದಾರೆ.
‘ಆತ ನನ್ನನ್ನು ನೋಡುವ ರೀತಿ ನನಗೆ ಇಷ್ಟವಾಗಿದೆ. ನನ್ನ ಗೆಳೆಯ ನೋಡಿದಂತೆ ನೋಡುತ್ತೀಯಾ. ಹೌದು, ನಾನು ನಿನ್ನನ್ನು ಮರಳಿ ಪಡೆದಿದ್ದೇನೆ’ ಎಂದಿದ್ದಾರೆ ಅವರು. ಈ ಫೋಟೋ ನೋಡಿದ ಚಿರು ಅಭಿಮಾನಿಗಳು ಫೋಟೋಗೆ ಕಮೆಂಟ್ ಮಾಡಿ ಖುಷಿಪಟ್ಟಿದ್ದಾರೆ.
ಜೂನ್ 7ರಂದು ಚಿರಂಜೀವಿ ಸರ್ಜಾ ಅವರ ಮೊದಲ ಪುಣ್ಯ ತಿಥಿ ನೆರವೇರಿತು. ಕನಕಪುರ ರಸ್ತೆಯ ನೆಲಗುಳಿ ಬಳಿ ಇರುವ ಬೃಂದಾವನ ಫಾರ್ಮ್ಹೌಸ್ನಲ್ಲಿ ಚಿರು ಸಮಾಧಿಗೆ ತೆರಳಿ ಕುಟುಂಬಸ್ಥರು ಹಾಗೂ ಆಪ್ತರು ಪೂಜೆ ಸಲ್ಲಿಸಿದ್ದಾರೆ. ನಿರ್ದೇಶಕ ಪನ್ನಗಭರಣ ಕೂಡ ಅಲ್ಲಿಗೆ ತೆರಳಿ ಪೂಜೆ ಸಲ್ಲಿಸಿದ್ದರು.
ಇದನ್ನೂ ಓದಿ: Chiranjeevi Sarja Death Anniversary: ಚಿರಂಜೀವಿ ಸರ್ಜಾ ಅಗಲಿದ ಕಹಿ ನೆನಪಿಗೆ ಒಂದು ವರ್ಷ; ಫೋಟೋ ಹಂಚಿಕೊಂಡ ಮೇಘನಾ ರಾಜ್
ಚಿರಂಜೀವಿ ಸರ್ಜಾ ಪುತ್ರ ಜ್ಯೂ. ಚಿರುಗೆ ಈ ಹಾಡು ಸಖತ್ ಇಷ್ಟ; ವಿಡಿಯೋ ವೈರಲ್
Published On - 5:22 pm, Thu, 24 June 21