ರಾಮ್ ಚರಣ್​ನ ಯಶ್ ಎಂದು ಕರೆದ ಕ್ಯಾಮೆರಾ ಮೆನ್; ಮುಂದೇನಾಯ್ತು?

ಯಶ್ ಹಾಗೂ ರಾಮ್ ಚರಣ್ ಒಂದೇ ರೀತಿ ಇದ್ದಾರಾ? ಹೀಗೊಂದು ಪ್ರಶ್ನೆ ಮೂಡುವಂತೆ ಆಗಿದೆ. ಇತ್ತೀಚೆಗೆ ರಾಮ್ ಚರಣ್ ಅವರು ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಕಾರಿನಲ್ಲಿ ಕುಳಿತ ರಾಮ್ ಚರಣ್ ಅವರನ್ನು ಯಶ್ ಎಂದು ಕರೆಯಲಾಗಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ರಾಮ್ ಚರಣ್​ನ ಯಶ್ ಎಂದು ಕರೆದ ಕ್ಯಾಮೆರಾ ಮೆನ್; ಮುಂದೇನಾಯ್ತು?
ಯಶ್-ರಾಮ್ ಚರಣ್

Updated on: Dec 29, 2025 | 10:59 AM

ನಟ ರಾಮ್ ಚರಣ್ ಅವರು ಸದ್ಯ ‘ಪೆದ್ದಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಬುಚ್ಚಿ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಈದ್​​ಗೆ ರಿಲೀಸ್ ಆಗಲಿದೆ ಎಂಬ ಟಾಕ್ ಇದೆ. ಈ ಮಧ್ಯೆ ರಾಮ್ ಚರಣ್ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಲುಕ್ ನೋಡಿ ಅವರನ್ನು ಅನೇಕರು ಯಶ್ (Yash) ಎಂದು ಭಾವಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ಯಶ್ ಹಾಗೂ ರಾಮ್ ಚರಣ್ ಮಧ್ಯೆ ಹೋಲಿಕೆ ಕಂಡು ಬಂದಿದೆ. ರಾಮ್ ಚರಣ್ ಉದ್ದನೆಯ ಗಡ್ಡ ಹಾಗೂ ಕೂದಲು ಬಿಟ್ಟಿದ್ದಾರೆ. ಯಶ್ ಕೂಡ ಇದೇ ಹೇರ್​​ಸ್ಟೈಲ್ ಹಾಗೂ ಉದ್ದನೆಯ ಗಡ್ಡ ಬಿಟ್ಟು ಕಾಣಿಸಿಕೊಳ್ಳುತ್ತಾರೆ. ಈ ಕಾರಣದಿಂದ ರಾಮ್ ಚರಣ್ ಅವರನ್ನು ಕೆಲವರು ಯಶ್ ಎಂದು ಕನ್​​ಫ್ಯೂಸ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್​​’ಗೆ ಹೆದರಿ ಸಂಪ್ರದಾಯ ಮುರಿದ ನಟ ಸಲ್ಮಾನ್ ಖಾನ್; ಇದು ಯಶ್ ಪವರ್

ಮುಂಬೈನಲ್ಲಿ ರಾಮ್​ ಚರಣ್ ಅವರು ಕಾಣಿಸಿಕೊಂಡಿದ್ದರು. ಈ ವೇಳೆ ಕಾರನ್ನು ಮುತ್ತಿಕೊಂಡ ಪಾಪರಾಜಿಗಳು, ‘ಯಶ್ ಯಶ್’ ಎಂದು ಕೂಗಿದ್ದಾರೆ. ಇದರಿಂದ ರಾಮ್ ಚರಣ್​​ಗೆ ಮುಜುಗರ ಆಗಿದೆ. ತಮಗೆ ಬೇರೆ ನಟರ ಹೆಸರಿಂದ ಕರೆಯುತ್ತಿರುವುದಕ್ಕೆ ಅವರು ಬೇಸರ ಮಾಡಿಕೊಂಡಿದ್ದಾರೆ. ನಂತರ ತಪ್ಪಿನ ಅರಿವಾಗಿ, ‘ರಾಮ್ ಚರಣ್’ ಎಂದು ಕರೆಯಲಾಗಿದೆ. ಈ ವಿಡಿಯೋ ವೈರಲ್ ಆಗಿದೆ.

‘ರಾಮ್ ಚರಣ್ ಯಾರು ಹಾಗೂ ಯಶ್ ಯಾರು ಎಂದು ಗೊತ್ತಿಲ್ಲದೆ ಇದ್ದವರು ಮಾಡುವ ಎಡವಟ್ಟು ಅಷ್ಟೇ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಇಬ್ಬರ ಮಧ್ಯೆ ಸಾಮ್ಯತೆ ಇದೆ’ ಎಂದಿದ್ದಾರೆ. ಇನ್ನೂ ಕೆಲವರು, ಯಶ್ ನಟನೆಯ ‘ಟಾಕ್ಸಿಕ್’ ಹಾಗೂ ‘ಪೆದ್ದಿ’ ಸಿನಿಮಾ ಒಂದೇ ದಿನ ಬರಬಾರದು ಏಕೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.