ಪವಿತ್ರಾ ಗೌಡಗೆ ಜಾಮೀನು ನೀಡಿದ ಹೈಕೋರ್ಟ್​; ಕೊಲೆ ಪ್ರಕರಣದಲ್ಲಿ ಸದ್ಯಕ್ಕೆ ರಿಲೀಫ್

| Updated By: ಮದನ್​ ಕುಮಾರ್​

Updated on: Dec 13, 2024 | 3:36 PM

ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಹೈಕೋರ್ಟ್​ ಜಾಮೀನು ನೀಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆಗಿದ್ದು, ಅವರಿಗೆ ಇಂದು (ಡಿಸೆಂಬರ್​ 13) ಜಾಮೀನು ನೀಡಲಾಗಿದೆ. ಜೂನ್​ ತಿಂಗಳಲ್ಲಿ ಪವಿತ್ರಾ ಗೌಡ ಅರೆಸ್ಟ್ ಆಗಿದ್ದರು. ಬಳಿಕ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿಲಾಗಿತ್ತು. ಹಲವು ತಿಂಗಳ ಬಳಿಕ ಅವರಿಗೆ ಜಾಮೀನು ಸಿಕ್ಕಿದೆ.

ಪವಿತ್ರಾ ಗೌಡಗೆ ಜಾಮೀನು ನೀಡಿದ ಹೈಕೋರ್ಟ್​; ಕೊಲೆ ಪ್ರಕರಣದಲ್ಲಿ ಸದ್ಯಕ್ಕೆ ರಿಲೀಫ್
ಪವಿತ್ರಾ ಗೌಡ, ರೇಣುಕಾಸ್ವಾಮಿ
Follow us on

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪವಿತ್ರಾ ಗೌಡ ಅವರಿಗೆ ಕಡೆಗೂ ಬೇಲ್​ ಸಿಕ್ಕಿದೆ. 180ಕ್ಕೂ ಅಧಿಕ ದಿನ ದಿನಗಳ ಕಾಲ ಪರಪ್ಪನ ಅಗ್ರಗಾರ ಜೈಲಿನಲ್ಲಿ ಕಾಲ ಕಳೆದಿರುವ ಅವರಿಗೆ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಂತೆ ಆಗಿದೆ. ಈ ಕೇಸ್​ನಲ್ಲಿ ಪವಿತ್ರಾ ಗೌಡ ಎ1 ಆಗಿದ್ದಾರೆ. ಅವರ ಸ್ನೇಹಿತ ದರ್ಶನ್​ ಎ2 ಆಗಿದ್ದಾರೆ. ಜಾಮೀನು ಪಡೆಯಲು ಪವಿತ್ರಾ ಗೌಡ ಹಲವು ದಿನಗಳಿಂದ ಪ್ರಯತ್ನಿಸುತ್ತಿದ್ದರು. ಗಂಭೀರ ಪ್ರಕರಣ ಆದ್ದರಿಂದ ಅವರಿಗೆ ಜಾಮೀನು ವಿಳಂಬ ಆಗಿತ್ತು. ಇಂದು (ಡಿಸೆಂಬರ್​ 13) ಬೇಲ್​ ಸಿಕ್ಕಿರುವುದರಿಂದ ಅವರು ನಿಟ್ಟುಸಿರು ಬಿಟ್ಟಿದ್ದಾರೆ.

ನಟ ದರ್ಶನ್​ ಅವರಿಗೂ ಈ ಕೇಸ್​ನಲ್ಲಿ ಜಾಮೀನು ಸಿಕ್ಕಿದೆ. ಅಲ್ಲದೇ ಸಹಚರರಾದ ನಾಗರಾಜ್, ಲಕ್ಷ್ಮಣ್, ಪ್ರದೋಷ್, ಜಗದೀಶ್, ಅನುಕುಮಾರ್​ ಅವರಿಗೂ ಇಂದು ಹೈಕೋರ್ಟ್​ ಜಾಮೀನು ನೀಡಿದೆ. ದರ್ಶನ್ ಅವರಿಗೆ ಈ ಮೊದಲು ಅನಾರೋಗ್ಯದ ಕಾರಣದಿಂದ ಮಧ್ಯಂತರ ಜಾಮೀನು ನೀಡಲಾಗಿತ್ತು. ಈಗ ರೆಗ್ಯುಲರ್​ ಬೇಲ್​ ಸಿಕ್ಕಿರುವ ಹಿನ್ನೆಲೆಯಲ್ಲಿ ಅವರಿಗೆ ದೊಡ್ಡ ರಿಲೀಫ್​ ಸಿಕ್ಕಂತಾಗಿದೆ.

ಇದನ್ನೂ ಓದಿ: ದರ್ಶನ್ ಜೊತೆ ಸಹಚರರಿಗೂ ಬಿಗ್ ರಿಲೀಫ್; ಹೈಕೋರ್ಟ್​ನಲ್ಲಿ ಸಿಕ್ತು ಜಾಮೀನು

ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲವಾಗಿ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕೆ ಆತನನ್ನು ಚಿತ್ರದುರ್ಗದಿಂದ ಅಪಹರಣ ಮಾಡಿಕೊಂಡು ಬಂದು ಬೆಂಗಳೂರಿನಲ್ಲಿ ಚಿತ್ರಹಿಂಸೆ ನೀಡಲಾಗಿತ್ತು. ಬಳಿಕ ಆತ ಮೃತಪಟ್ಟ. ನಂತರ ಆತನ ಶವವನ್ನು ರಾಜಕಾಲುವೆಗೆ ಎಸೆಯಲಾಗಿತ್ತು. ಈ ಕೇಸ್​ನಲ್ಲಿ ದರ್ಶನ್, ಪವಿತ್ರಾ ಗೌಡ, ನಾಗರಾಜ್​, ಜಗದೀಶ್​ ಮುಂತಾದವರನ್ನು ಜೂನ್​ ತಿಂಗಳಲ್ಲಿ ಬಂದಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು.

ಇದನ್ನೂ ಓದಿ: ದರ್ಶನ್ ಜೊತೆ ಸಹಚರರಿಗೂ ಬಿಗ್ ರಿಲೀಫ್; ಹೈಕೋರ್ಟ್​ನಲ್ಲಿ ಸಿಕ್ತು ಜಾಮೀನು

ಪವಿತ್ರಾ ಗೌಡ ಅವರಿಗೆ ಜಾಮೀನು ಕೊಡಿಸಲು ಅವರ ಕುಟುಂಬದವರು ಕಷ್ಟಪಟ್ಟಿದ್ದಾರೆ. ಆರು ತಿಂಗಳ ಕಾಲ ಪವಿತ್ರಾ ಗೌಡ ಜೈಲುವಾಸ ಅನುಭವಿಸಿದ್ದಾರೆ. ಈಗ ಅವರಿಗೆ ಜಾಮೀನು ಸಿಕ್ಕಿದ್ದು, ಅವರ ತಾಯಿ ಪ್ರತಿಕ್ರಿಯಿಸಿದ್ದಾರೆ. ‘ಈಗ ತುಂಬ ಖುಷಿ ಆಯಿತು’ ಎಂದು ಅವರು ಹೇಳಿದ್ದಾರೆ. ಸೋಮವಾರ (ಡಿ.17) ಪವಿತ್ರಾ ಗೌಡ ಅವರು ಜೈಲಿನಿಂದ ಹೊರಗೆ ಬರುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:39 pm, Fri, 13 December 24