‘ಕಾಂತಾರ’, ರಿಷಬ್ ಶೆಟ್ಟಿ ಹಾಗೂ ಇನ್ನಿತರೆ: ಪ್ರಗತಿ ಶೆಟ್ಟಿ ಮಾತು
Pragathi Shetty: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರಿ ದೊಡ್ಡ ಹಿಟ್ ಎನಿಸಿಕೊಂಡಿದೆ. ರಿಷಬ್ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ಅವರ ಪತ್ನಿ ಪ್ರಗತಿ ಶೆಟ್ಟಿ ಸಹ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಇದೀಗ ಸಿನಿಮಾ ಭಾರಿ ದೊಡ್ಡ ಯಶಸ್ಸು ಗಳಿಸಿದ ಬಳಿಕ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಶೂಟಿಂಗ್ ಅನುಭವವನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.

ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೇ ಇರುತ್ತಾಳೆ ಎಂಬ ಮಾತಿದೆ. ರಿಷಬ್ ಶೆಟ್ಟಿ ವಿಷಯದಲ್ಲಿ ಇದು ಸತ್ಯವೇ ಆಗಿದೆ. ರಿಷಬ್ ಶೆಟ್ಟಿಯ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ತಮ್ಮ ಪತಿಯ ಹಿಂದೆ ಅಲ್ಲ ಬದಲಿಗೆ ಪಕ್ಕದಲ್ಲಿ ನಿಂತು ಹೆಗಲಿಗೆ-ಹೆಗಲು ಕೊಟ್ಟು ಕೆಲಸ ಮಾಡುತ್ತಾರೆ. ಚಿತ್ರರಂಗ ಎಂಬುದು ತಮಗೆ ಸಂಪೂರ್ಣ ಹೊಸ ಜಗತ್ತಾದರೂ ಸಹ ಪತಿಗೆ ಬೆಂಬಲವಾಗಿ ನಿಲ್ಲಬೇಕೆಂದು ವಸ್ತ್ರ ವಿನ್ಯಾಸ ಸೇರಿದಂತೆ ಇನ್ನೂ ಕೆಲವು ವಿಭಾಗಗಳನ್ನು ಅವರು ನಿಭಾಯಿಸಿ ‘ಕಾಂತಾರ: ಚಾಪ್ಟರ್ 1’ ಅಂಥಹಾ ಅದ್ಭುತ ಸಿನಿಮಾ ನಿರ್ದೇಶಿಸಲು ರಿಷಬ್ಗೆ ಜೊತೆಯಾಗಿ ನಿಂತಿದ್ದಾರೆ.
ಇದೀಗ ಪ್ರಗತಿ ಶೆಟ್ಟಿ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ‘ಕಾಂತಾರ: ಚಾಪ್ಟರ್ 1’ ಅನುಭವ, ಸಿನಿಮಾಗಳಿಂದ ತಮ್ಮ ಕುಟುಂಬ ಮತ್ತು ಖಾಸಗಿ ಜೀವನದ ಮೇಲೆ ಆಗಿರುವ ಪ್ರಭಾವ, ರಿಷಬ್ ಶೆಟ್ಟರು ಅನುಭವಿಸುವ ಒತ್ತಡ, ಅವರನ್ನು ಶಾಂತವಾಗಿರಿಸಲು ತಾವು ಮಾಡುವ ಪ್ರಯತ್ನ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
‘ನಾನು ಬಂದ ಮೇಲೆ ರಿಷಬ್ ಗೆ ಲಕ್ ಅಂತ ಹೇಳ್ತಾರೆ, ಆದರೆ ರಿಷಬ್ ಒಂದು ಕೆಲಸವನ್ನ ತಪಸ್ಸಿನ ರೀತಿ ಮಾಡುತ್ತಾರೆ. ಒಂದು ಕನಸು ಕಂಡು ಅದರ ಬೆನ್ನಟ್ಟಿ ಹೋಗುತ್ತಾರೆ. ಹಾಗಾಗಿ ಅವರು ಅಂದುಕೊಂಡಿದ್ದು ಆಗುತ್ತದೆ. ಅವರದ್ದು ಅದೃಷ್ಟ ಅಲ್ಲ ಬದಲಿಗೆ ಶ್ರಮ’ ಎಂದರು ಪ್ರಗತಿ ಶೆಟ್ಟಿ. ಮುಂದುವರೆದು ಮಾತನಾಡಿ, ‘ನಾನು ತುಂಬಾ ಅದೃಷ್ಟವಂತರು, ಈ ರೀತಿಯ ಸಿನಿಮಾ ಮಾಡ್ತೀವಿ ಅಂತ ಕನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ ಕೆಲಸ ಮಾಡಬೇಕು ಎಂಬ ಹಸಿವು ಇತ್ತು. ನಾನು ಇವತ್ತು ಇದೆಲ್ಲ ಮಾಡುತ್ತಿದ್ದೀನಿ ಅಂದರೆ ಅದಕ್ಕೆ ರಿಷಬ್ ಅವರೆ ಗುರು, ಅವರ ಎನರ್ಜಿ ನೋಡಿ ನಾನು ಅಷ್ಟೇ ಎನರ್ಜಿ ಇಂದ ಕೆಲಸ ಮಾಡ್ತೀನಿ ಮ್ಯಾಚ್ ಮಾಡೋಕೆ ನೋಡ್ತೀನಿ’ ಎಂದು ಪತಿಯನ್ನು ಕೊಂಡಾಡಿದರು.
ಇದನ್ನೂ ಓದಿ:‘ಕಾಂತಾರ: ಚಾಪ್ಟರ್ 1’ ನೋಡಿ ರಿಷಬ್ನ ಹಗ್ ಮಾಡಿ ಅತ್ತ ಪ್ರಗತಿ ಶೆಟ್ಟಿ
‘ನನಗೆ ಅವಕಾಶ ಕೊಟ್ಟರೂ ರಿಷಬ್ ಎಲ್ಲಾ ಹ್ಯಾಂಡಲ್ ಮಾಡಿಕೊಂಡು ಬಂದರು. ಇದು ಮಾಡ್ತಿನ ಅಂತ ಟೆಂಷನ್ ಇತ್ತು ರಿಷಬ್ ಸ್ಪೂರ್ತಿ ನೀಡಿದರು. ನಾನು ಏನೇ ಮಾಡಿದರೂ ಸಹ ರಿಷಬ್ ಅವರನ್ನು ನೋಡಿ ಕಲಿತಿರೋದು. ರಿಷಬ್ ನನ್ನ ಒಂದು ದಿನ ಬಿಸಿಲನಲ್ಲಿ ರೆಡ್ ಆಗಿರೋದು ನೋಡಿ ಎಮ್ ಎನ್ ಸಿ ಕಂಪೆನಿಯಲ್ಲಿ ಆರಾಮವಾಗಿದ್ದೆ ಇಲ್ಲಿ ಇಷ್ಟು ಕಷ್ಟ ಪಡುತ್ತಿದ್ದೀಯ ಅಂದರು’ ಎಂದರು. ಶೂಟಿಂಗ್ ಬಗ್ಗೆ ಮಾತನಾಡಿದ ಅವರು, ‘ನಮ್ಮದು ಈಗ ಕೆಎಫ್ ಸಿ ಆಗಿದೆ (ಕೆರಾಡಿ ಫಿಲ್ಮ್ ಸಿಟಿ). ನಾವು ಮಾಡಿರೋ ಕೆಲಸ ದುಡ್ಡು 70% ಅಲ್ಲೇ ಹೋಗಿದೆ. ಟೂರಿಸಮ್ ಇಂಪ್ರೂವ್ ಆಗಿದೆ ನಮ್ಮನ್ನ ನೋಡಿ ಬೇರೆಯವರು ಮತ್ತೆ ಆ ಊರಿಗೆ ಬರುತ್ತಿದ್ದಾರೆ ಎಂದರು ಪ್ರಗತಿ.
ಕಾಂತಾರದಲ್ಲಿ ಹಲವಾರು ತಂತ್ರಜ್ಞರು ನಮ್ಮ ಜೊತೆಗೆ ಕೆಲಸ ಮಾಡಿದ್ದಾರೆ, ಯಾವ ಡಿಸೈನರ್ಗೂ ಇದು ಡ್ರೀಮ್ ಪ್ರಾಜೆಕ್ಟ್. ವಸ್ತ್ರ ವಿನ್ಯಾಸದ ಮೂರು ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಿದ್ದೀನಿ ಟ್ರೈಬಲ್, ಕಿಂಗ್ಡೆಮ್ ಅಂತೆಲ್ಲ ಮಾಡಿದ್ದೀನಿ. ಆಕ್ಷನ್ ಸೀಕ್ವೆನ್ಸ್ ಮಾಡೋವಾಗ ನಾನು ಇರಬಾರದು ಅಂತ ಹೇಳ್ತಿದ್ದರು ಯಾಕಂದ್ರೆ ನನಗೆ ಟೆಂಷನ್ ಆಗ್ತಿತ್ತು ರಥದ ಶೂಟಿಂಗ್ ಅಲ್ಲಿ ಚಿಕ್ಕ ಆಕ್ಸಿಡೆಂಟ್ ಆಗಿತ್ತು ಅವರು ಹಾಸ್ಪಿಟಲ್ಗೆ ಹೋಗುತ್ತಿದ್ದು ನಂಗೆ ಕೇಳಿ ಭಯ ಆಗಿತ್ತು ಜ್ವರ ಇದ್ದರೂ ಸಹ ಅವರನ್ನು ಹೋಗಿ ನೋಡಿದ್ಮೇಲೆ ನಂಗೆ ಸಮಾಧಾನ ಆಗುತ್ತಿತ್ತು. ಅದನ್ನು ನೋಡಿ ನಾನು ಫೈಟ್ ಶೂಟಿಂಗ್ಗೆ ಬರಬಾರದು ಎಂದರು, ಎಂದು ನೆನಪು ಮಾಡಿಕೊಂಡರು.
ರಿಷಬ್ ಪಟ್ಟ ಶ್ರಮದ ಬಗ್ಗೆ ಮಾತನಾಡಿದ ಪ್ರಗತಿ ಶೆಟ್ಟಿ, ‘ರಿಷಬ್ ಅವರಿಗೆ ಅವರೇ ಸರಿಸಾಟಿ ಯಾಕಂದ್ರೆ ಬೆಳಿಗ್ಗೆ ಬೇಗ ಎದ್ದು ವರ್ಕ್ ಔಟ್ ಮಾಡಿ ಶೂಟ್ ಹೋಗಿ ಮತ್ತೆ ಬಂದು ಕಲರಿ ಪಯಟ್ಟು ಪ್ರಾಕ್ಟೀಸ್ ಮಾಡಿ ನಂತರ ಮುಂದಿನ ದಿನದ ಶೂಟಿಂಗ್ ಪ್ಲಾನಿಂಗ್ ಮಾಡುತ್ತಿದ್ದರು. ಸೆಟ್ ನಲ್ಲಿ ಪ್ರತಿ ನಿಮಿಷ ದುಡ್ಡು ಖರ್ಚು ಆಗುತ್ತಿತ್ತು ಹಾಗಾಗಿ ಅವರು ಯಾವಾಗಲೂ ಕೆಲಸ ಮಾಡುತ್ತಿದ್ದರು. ಆರೋಗ್ಯವನ್ನೇ ಮರೆತು ಕೆಲಸ ಮಾಡಿದರು. ಈಗ ಪ್ರಚಾರದಿಂದ ಬಂದ ಬಳಿಕ ಮತ್ತೆ ಆರೋಗ್ಯದ ಕಡೆ ಗಮನ ಕೊಡಬೇಕು. ವರ್ಷಗಳಿಂದ ಅಡುಗೆಯನ್ನೇ ಮಾಡಿಲ್ಲ ನಾವು, ರಿಷಬ್ ಬಂದ ಮೇಲೆ ಅಡುಗೆ ಮಾಡಿ ತಿನ್ನಬೇಕು’ ಎಂದಿದ್ದಾರೆ ಪ್ರಗತಿ.
ವಸ್ತ್ರ ವಿನ್ಯಾಸದ ಬಗ್ಗೆ ಮಾತನಾಡಿ, ‘ಇದಕ್ಕಾಗಿ ಆರು ತಿಂಗಳು ಕೋರ್ಸ್ ಮಾಡಿದೆ. ರುಕ್ಮಿಣಿ ವಸಂತ್ ಲುಕ್ ತುಂಬಾ ಕ್ರೇಜ್ ಗಳಿಸಿಕೊಂಡಿದೆ. ಕುಲಶೇಖರ ಪಾತ್ರಕ್ಕೆ ಕಿರೀಟ ಮಾಡೋವಾಗ ತುಂಬಾ ತಲೆ ಕೆಡುಸ್ಕೊಡಿವಿ ರಿಷಬ್ ಒಂದಷ್ಟು ಹೇಳಿದ್ರು ಅದು ರಿಸಲ್ಟ್ ಬರುತ್ತಾ ಅಂತ ತಲೆ ಕೆಡುಸ್ಕೊಂಡ್ವಿ ಅಂದ್ರೆ ರಿಷಬ್ ಇಂಚಿಚು ಚೆಕ್ ಮಾಡುತ್ತಿದ್ದರು. ಕ್ರೌನ್ ವರ್ಕ್ ಮಾಡಿರೋರು ತುಂಬಾ ಕಮ್ಮಿ ಇದಾರೆ ಇಲ್ಲಿ ತುಂಬಾ ದೊಡ್ಡ ಸಿನಿಮಾಗೆ ಕೆಲಸ ಮಾಡಿರೋರು ಕುಂದಾಪುರಕ್ಕೆ ಬರೋದಕ್ಕೆ ರೆಡಿ ಇಲ್ಲ ಇಲ್ಲೇ ಲೋಕಲ್ ನಲ್ಲಿ ಒಡವೆ ಮಾಡೋರಿಗೆ ಕೊಟ್ವಿ ಅವ್ರು ನೋಡಿದ್ರೆ ಸರಿಯಾಗಿ ಮಾಡಿ ಕೊಟ್ಟಿಲ್ಲ ಮತ್ತೆ ತಂದ್ರು ನೋಡಿದ್ರೆ ಸೈಜ್ ದೊಡ್ಡದು ತಂದ್ರು ಲಾಸ್ಟ್ ಮಿನಿಟ್ ಅಲ್ಲಿ ಅವಾಗ ಮತ್ತೆ ವೆಲ್ಡಿಂಗ್ ಮಾಡ್ಸಿ ಏನೇನೋ ಮಾಡಿದ್ವಿ ಸಬೀನಾ ದಲ್ಲಿ ವಾಶ್ ಮಾಡಿ ಗೋಲ್ಡ್ ಕಲರ್ ನೆಲ್ಲ ತೆಗೆದು ಕೊಟ್ಟಿದ್ದಾರೆ ಎಷ್ಟು ಟೆಂಷನ್ ಕೊಟ್ಟಿದ್ದಾರೆ ಅಂದ್ರೆ ರಾತ್ರೋ ರಾತ್ರಿ ಗೋಲ್ಡ್ ವಾಶ್ ಮಾಡಿಸಿದ್ದು ತುಂಬಾ ತಲೆ ನೋವು ಕೊಡ್ತು’ ಎಂದು ನೆನಪು ಮಾಡಿಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




