ಪ್ರಜ್ವಲ್ ದೇವರಾಜ್ ಜನ್ಮದಿನಕ್ಕೆ ‘ರಾಕ್ಷಸ’, ‘ಕರಾವಳಿ’ ಲುಕ್ ಬಿಡುಗಡೆ; ಒಂದಕ್ಕಿಂತ ಒಂದು ಭಿನ್ನ

Prajwal Devaraj Birthday: ಕಳೆದ ವರ್ಷ ಪ್ರಜ್ವಲ್ ದೇವರಾಜ್ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆದರೆ, ಈ ವರ್ಷ ಅವರು ಬರ್ತ್​ಡೇಗೆ ಬ್ರೇಕ್ ಹಾಕಿದ್ದಾರೆ. ಆದರೆ, ಅವರ ನಟನೆಯ ಸಿನಿಮಾ ತಂಡಗಳಿಂದ ಫ್ಯಾನ್ಸ್​ಗೆ ಸಿಹಿ ಸುದ್ದಿ ಸಿಕ್ಕಿದೆ. ಅವರ ನಟನೆಯ ‘ರಾಕ್ಷಸ’ ಹಾಗೂ ‘ಕರಾವಳಿ’ ಸಿನಿಮಾಗಳ ಲುಕ್ ಬಿಡುಗಡೆ ಆಗಿದೆ.

ಪ್ರಜ್ವಲ್ ದೇವರಾಜ್ ಜನ್ಮದಿನಕ್ಕೆ ‘ರಾಕ್ಷಸ’, ‘ಕರಾವಳಿ’ ಲುಕ್ ಬಿಡುಗಡೆ; ಒಂದಕ್ಕಿಂತ ಒಂದು ಭಿನ್ನ
ಪ್ರಜ್ವಲ್ ದೇವರಾಜ್ ಜನ್ಮದಿನಕ್ಕೆ ‘ರಾಕ್ಷಸ’, ‘ಕರಾವಳಿ’ ಲುಕ್ ಬಿಡುಗಡೆ; ಒಂದಕ್ಕಿಂತ ಒಂದು ಭಿನ್ನ
Follow us
ರಾಜೇಶ್ ದುಗ್ಗುಮನೆ
|

Updated on:Jul 04, 2024 | 11:31 AM

ನಟ ಪ್ರಜ್ವಲ್ ದೇವರಾಜ್ ಅವರಿಗೆ ಇಂದು (ಜುಲೈ 4) ಜನ್ಮದಿನದ ಸಂಭ್ರಮ. ಅವರು ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಈ ವಿಚಾರವನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು. ಇದು ಅವರ ಫ್ಯಾನ್ಸ್​​ಗೆ ಬೇಸರ ಮೂಡಿಸಿತ್ತು. ಈಗ ಅಭಿಮಾನಿಗಳಿಗೆ ಖುಷಿ ಆಗುವಂತಹ ಸುದ್ದಿ ಸಿಕ್ಕಿದೆ. ಅವರ ನಟನೆಯ ‘ರಾಕ್ಷಸ’ ಹಾಗೂ ‘ಕರಾವಳಿ’ ಸಿನಿಮಾಗಳ ಲುಕ್ ಬಿಡುಗಡೆ ಆಗಿದೆ. ಎರಡೂ ಪೋಸ್ಟರ್​ಗಳು ಭಿನ್ನವಾಗಿದ್ದು, ಗಮನ ಸೆಳೆಯುತ್ತಿದೆ.

‘ರಾಕ್ಷಸ’ ಲುಕ್

‘ರಾಕ್ಷಸ’ ಸಿನಿಮಾ ಲುಕ್ ಸಖತ್ ಭಿನ್ನವಾಗಿದೆ. ಇಡೀ ಪೋಸ್ಟರ್​ನಲ್ಲಿ ಪ್ರಜ್ವಲ್ ಅವರ ಕಣ್ಣು ಗಮನ ಸೆಳೆದಿದೆ. ಅವರು ಕುರುಡನ ರೀತಿ ಕಾಣಿಸಿಕೊಂಡಿದ್ದಾರೆ. ಹಿಂಭಾಗದಲ್ಲಿ ರೋಮನ್ ಅಂಕೆಯಲ್ಲಿ ಬರೆದ ಗಡಿಯಾರ ಇದೆ. ಗಡಿಯಾರದ ಗಾಜುಗಳು ಪುಡಿಪುಡಿ ಆಗಿವೆ. ‘ಮಮ್ಮಿ’ ಖ್ಯಾತಿಯ ನಿರ್ದೇಶಕ ಲೋಹಿತ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಹೆಸರಿಗೆ ತಕ್ಕಂತೆಯೇ ಪೋಸ್ಟರ್ ಮೂಡಿ ಬಂದಿದೆ. ಈ ಪೋಸ್ಟರ್​ನಲ್ಲಿ ಪ್ರಜ್ವಲ್ ಅವರು ರಾಕ್ಷಸನ ರೀತಿಯೇ ಕಾಣಿಸಿಕೊಂಡಿದ್ದಾರೆ.

ಕರಾವಳಿ ಲುಕ್

‘ಕರಾವಳಿ’ ಸಿನಿಮಾದ ಲುಕ್ ಕೂಡ ಬಿಡುಗಡೆ ಆಗಿದೆ. ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಚಿತ್ರಕ್ಕೆ ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದ ಪ್ರಯುಕ್ತ ಬಂದಿರುವ ಈ ಪೋಸ್ಟರ್ ‘ಕರಾವಳಿ’ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕೋಣಗಳ ಮಧ್ಯೆ ಪ್ರಜ್ವಲ್ ಕುಳಿತಿದ್ದಾರೆ. ಈ ಸಿನಿಮಾ ಕರಾವಳಿಯ ಕಥೆಯನ್ನು ಹೇಳಲಿದೆ. ಕಂಬಳದ ವಿಚಾರ ಸಿನಿಮಾದಲ್ಲಿ ಇರಲಿದೆಯೇ ಎನ್ನುವ ಪ್ರಶ್ನೆಯೂ ಮೂಡಿದೆ.

ಇದನ್ನೂ ಓದಿ: ಶಿವಣ್ಣನ ಸಿನಿಮಾದ ಹೆಸರು ಎರವಲು ಪಡೆದ ಪ್ರಜ್ವಲ್ ದೇವರಾಜ್

‘ಕರಾವಳಿ’ ಚಿತ್ರಕ್ಕೆ ಈಗಾಗಲೇ 60ರಷ್ಟು ಶೂಟಿಂಗ್ ಮುಗಿದಿದೆ. ಸಿನಿಮಾದಲ್ಲಿ ಪ್ರಜ್ವಲ್​ಗೆ ನಾಯಕಿಯಾಗಿ ಸಂಪದಾ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಬಹುತೇಕ ಶೂಟಿಂಗ್ ಕರಾವಳಿಯ ಸುತ್ತಮುತ್ತವೇ ನಡೆದಿದೆ. ಪಕ್ಕಾ ಹಳ್ಳಿ ಹಿನ್ನೆಲೆಯಲ್ಲಿ ಸಿನಿಮಾದ ಕಥೆ ಸಾಗುತ್ತದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:31 am, Thu, 4 July 24

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!