AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಣ್ಣನ ಸಿನಿಮಾದ ಹೆಸರು ಎರವಲು ಪಡೆದ ಪ್ರಜ್ವಲ್ ದೇವರಾಜ್

Prajwal Devaraj: ಪ್ರಜ್ವಲ್ ದೇವರಾಜ್ ನಟಿಸಲಿರುವ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಶಿವಣ್ಣನ ಸಿನಿಮಾದ ಹೆಸರನ್ನು ಎರವಲು ಪಡೆದಿದ್ದಾರೆ ಪ್ರಜ್ವಲ್ ದೇವರಾಜ್.

ಶಿವಣ್ಣನ ಸಿನಿಮಾದ ಹೆಸರು ಎರವಲು ಪಡೆದ ಪ್ರಜ್ವಲ್ ದೇವರಾಜ್
ಪ್ರಜ್ವಲ್ ದೇವರಾಜ್
Follow us
ಮಂಜುನಾಥ ಸಿ.
|

Updated on: Jan 15, 2024 | 7:37 PM

ಪ್ರಜ್ವಲ್ ದೇವರಾಜ್ (Prajwal Devaraj) ಒಂದರ ಹಿಂದೊಂದು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಮಾಸ್ ಸಿನಿಮಾಗಳೇ ಅವರನ್ನು ಅರಸಿ ಬರುತ್ತಿವೆ. ಇದೀಗ ‘ಮಮ್ಮಿ’ ಖ್ಯಾತಿಯ ನಿರ್ದೇಶಕ ಲೋಹಿತ್ ಹೊಸ ಸಿನಿಮಾವೊಂದನ್ನು ನಿರ್ದೇಶನ ಮಾಡಲು ಸಜ್ಜಾಗಿದ್ದು, ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಲಿದ್ದಾರೆ. ಈ ಸಿನಿಮಾಕ್ಕೆ ‘ರಾಕ್ಷಸ’ ಎಂದು ಹೆಸರಿಡಲಾಗಿದೆ. ಶಿವರಾಜ್ ಕುಮಾರ್ ಅವರು ಈ ಹಿಂದೆಯೇ ಇದೇ ಹೆಸರಿನ ಸಿನಿಮಾದಲ್ಲಿ ನಟಿಸಿ ಆ ಸಿನಿಮಾ ಹಿಟ್ ಆಗಿತ್ತು. ಈಗ ಪ್ರಜ್ವಲ್ ದೇವರಾಜ್ ಅದೇ ಹೆಸರಿನ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ನಿರ್ದೇಶಕ ಲೋಹಿತ್ ‘ಕ್ಯಾಪ್ಚರ್’ ಮತ್ತು ‘ಮಾಫಿಯಾ’ ಸಿನಿಮಾಗಳ ನಿರ್ದೇಶನ ಮಾಡಿ ಬಹುತೇಕ ಮುಗಿಸಿದ್ದಾರೆ. ಈ ಎರಡು ಸಿನಿಮ ಬಿಡುಗಡೆ ಆಗುವ ಮೊದಲೇ ‘ರಾಕ್ಷಸ’ ಸಿನಿಮಾ ಘೋಷಣೆ ಮಾಡಿದ್ದಾರೆ. ನಿರ್ದೇಶಕ ಲೋಹಿತ್ ‘ರಾಕ್ಷಸ’ ಸಿನಿಮಾದ ಫಸ್ಟ್ ಲುಕ್ ಸಹ ಬಿಡುಗಡೆ ಮಾಡಿದ್ದು, ಪೋಸ್ಟರ್ ಭಿನ್ನವಾಗಿ ಕಾಣುತ್ತಿದೆ. ಬಂದೂಕು ಹಿಡಿದ ಕೈಯ್ಯೊಂದರ ಬೆರಳನ್ನು ಪುಟ್ಟ ಮಗುವೊಂದು ಹಿಡಿದುಕೊಂಡಿದೆ. ಕೈಮೇಲಿರುವ ಟ್ಯಾಟೂಗಳು ಸಹ ಗಮನ ಸೆಳೆಯುತ್ತಿವೆ.

ಲೋಹಿತ್ ಹಾಗೂ ಪ್ರಜ್ವಲ್ ಒಟ್ಟಿಗೆ ಕೆಲಸ ಮಾಡಿರುವ ‘ಮಾಫಿಯಾ’ ಸಿನಿಮಾದ ಚಿತ್ರೀಕರಣ ಪೂರ್ಣವಾಗಿದೆ. ಆದರೆ ಆ ಸಿನಿಮಾ ಬಿಡುಗಡೆಗೆ ಮೊದಲೇ ಇದೀಗ ‘ರಾಕ್ಷಸ’ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ‘ರಾಕ್ಷಸ’ ಸಿನಿಮಾದ ಫಸ್ಟ್ ಲುಕ್ ಅನ್ನು ಕನ್ನಡ ಚಿತ್ರರಂಗದ 40 ನಿರ್ದೇಶಕರು ಬಿಡುಗಡೆ ಮಾಡಿರುವುದು ವಿಶೇಷ.

ಇದನ್ನೂ ಓದಿ:‘ಮಾಫಿಯಾ’ ಚಿತ್ರದ ಹೊಸ ಹಾಡು ರಿಲೀಸ್​; ಪ್ರಜ್ವಲ್ ದೇವರಾಜ್​ ಜತೆ ಅದಿತಿ ಪ್ರಭುದೇವ ರೊಮ್ಯಾಂಟಿಕ್ ಗೀತೆ

‘ರಾಕ್ಷಸ’ ಸಿನಿಮಾದ ಬಗ್ಗೆ ಹೆಚ್ಚು ಮಾಹಿತಿ ಬಿಟ್ಟುಕೊಡದ ನಿರ್ದೇಶಕ ಲೋಹಿತ್ ಕೇವಲ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕವೇ ಕುತೂಹಲ ಹೆಚ್ಚಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ವಲ್ ಜೊತೆ ಯಾರೆಲ್ಲ ಅಭಿನಯಿಸಿದ್ದಾರೆ, ಇದು ಯಾವ ರೀತಿಯ ಸಿನಿಮಾ ಎನ್ನುವ ಹೆಚ್ಚಿನ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ. ನಬೀನ್ ಪೋಲ್ ಸಂಗೀತ ನೀಡಲಿದ್ದಾರೆ. ಸದ್ಯ ಫಸ್ಟ್ ಲುಕ್ ಮೂಲಕ ಸದ್ದು ಮಾಡುತ್ತಿರುವ ರಾಕ್ಷಸ ಹೇಗಿರಲಿದೆ, ಯಾವಾಗ ತೆರೆಮೇಲೆ ಬರಲಿದೆ ಎಂದು ಕಾದುನೋಡಬೇಕಿದೆ.

ಪ್ರಜ್ವಲ್ ದೇವರಾಜ್ ‘ಮಾಫಿಯಾ’, ‘ಗಣ’ ಸಿನಿಮಾಗಳ ಚಿತ್ರೀಕರಣ ಬಹುತೇಕ ಮುಗಿಸಿದ್ದು, ‘ಚೀತಾ’, ‘ಕರಾವಳಿ’ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ಈಗ ‘ರಾಕ್ಷಸ’ ಸಿನಿಮಾ ಸಹ ಸೇರಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ