AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಣ್ಣನ ಜೊತೆ ಸಿನಿಮಾ ಘೋಷಿಸಿದ ಉಮಾಪತಿ, ಆ ಹೆಸರು ಬೇಡವೆಂದ ಶಿವಣ್ಣ

Shiva Rajkumar-Umapathy Shrinivas: ಉಮಾಪತಿ ಶ್ರೀನಿವಾಸ್ ಅವರು ಶಿವರಾಜ್ ಕುಮಾರ್ ಅವರೊಟ್ಟಿಗೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಸಿನಿಮಾ ಹೆಸರನ್ನು ಸಹ ಘೋಷಣೆ ಮಾಡಿದರು. ಆದರೆ ಆ ಹೆಸರು ಬೇಡ ಎಂದು ಶಿವಣ್ಣ ಹೇಳಿದ್ದಾರೆ.

ಶಿವಣ್ಣನ ಜೊತೆ ಸಿನಿಮಾ ಘೋಷಿಸಿದ ಉಮಾಪತಿ, ಆ ಹೆಸರು ಬೇಡವೆಂದ ಶಿವಣ್ಣ
ಶಿವಣ್ಣ-ಉಮಾಪತಿ
ಮಂಜುನಾಥ ಸಿ.
|

Updated on: Jan 15, 2024 | 10:03 PM

Share

ಶಿವರಾಜ್ ಕುಮಾರ್ (Shiva Rajkumar) ಅವರ ಕೈಯಲ್ಲಿ ಈಗಾಗಲೇ ಹಲವಾರು ಸಿನಿಮಾಗಳಿವೆ. ಕನ್ನಡ ಮಾತ್ರವೇ ಅಲ್ಲದೆ ಪರಭಾಷೆಯ ಸಿನಿಮಾಗಳ ಆಫರ್​ಗಳೂ ಸಹ ಹಲವು ಬರುತ್ತಲೇ ಇವೆ. ಜಾಗರೂಕತೆಯಿಂದ ಒಂದಕ್ಕಿಂತ ಒಂದು ಭಿನ್ನ ಕತೆಯುಳ್ಳ ಸಿನಿಮಾಗಳನ್ನು ಶಿವಣ್ಣ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಇದೀಗ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ತಾವು ಶಿವರಾಜ್ ಕುಮಾರ್ ಅವರೊಟ್ಟಿಗೆ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿ ಹೆಸರು ಸಹ ಹೇಳಿದ್ದಾರೆ. ಆದರೆ ಆ ಹೆಸರು ಬೇಡವೆಂದು ಶಿವಣ್ಣ ಸಲಹೆ ನೀಡಿದ್ದಾರೆ.

ಉಮಾಪತಿ ಶ್ರೀನಿವಾಸ್ ನಿರ್ಮಿಸಿ, ಚಿಕ್ಕಣ್ಣ ನಾಯಕನಾಗಿ ನಟಿಸಿರುವ ‘ಉಪಾಧ್ಯಕ್ಷ’ ಸಿನಿಮಾದ ಟ್ರೈಲರ್ ಅನ್ನು ಶಿವರಾಜ್ ಕುಮಾರ್ ಅವರೇ ಬಿಡುಗಡೆ ಮಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ಶಿವರಾಜ್ ಕುಮಾರ್, ಸಿನಿಮಾಕ್ಕೆ ಶುಭ ಕೋರಿದ ಜೊತೆಗೆ ಚಿಕ್ಕಣ್ಣನ ಪ್ರತಿಭೆ, ಶ್ರಮ ಹಾಗೂ ಉಮಾಪತಿ ಅವರ ಸಿನಿಮಾ ಪ್ರೀತಿಯನ್ನು ಕೊಂಡಾಡಿದರು.

ಅದೇ ವೇದಿಕೆಯಲ್ಲಿ ಮಾತನಾಡಿದ ಉಮಾಪತಿ ಶ್ರೀನಿವಾಸ್, ‘ನಾನು ಶಿವಣ್ಣ ಅವರನ್ನು ಎರಡು ಭಾರಿ ಭೇಟಿ ಮಾಡಿದ್ದೇನೆ. ಅವರದ್ದು ನಿಜಕ್ಕೂ ದೊಡ್ಡ ಮನಸ್ಸು, ನಿಜವಾದ ದೊಡ್ಮನೆ ಅವರದ್ದು, ಪುನೀತ್ ಅವರನ್ನು ಒಮ್ಮೆ ಭೇಟಿ ಆಗಿದ್ದೆ. ಅವರು ಅಂದು ಆಡಿದ ಮಾತು ನನ್ನ ಮನದಲ್ಲಿ ಇಂದಿಗೂ ಕೂತಿದೆ. ಚಿತ್ರರಂಗಕ್ಕೆ ಬಂದು ಏಳು ವರ್ಷವಾದರೂ ಶಿವಣ್ಣನೊಟ್ಟಿಗೆ ಸಿನಿಮಾ ಮಾಡಿಲ್ಲ ಎಂಬ ಬೇಸರ ಇದೆ. ಅದೇ ಕಾರಣಕ್ಕೆ ಈಗ ಶಿವಣ್ಣ ಜೊತೆಗೆ ಸಿನಿಮಾ ಮಾಡಲು ಮುಂದಾಗಿದ್ದೇನೆ’ ಎಂದರು.

ಇದನ್ನೂ ಓದಿ:ಶಿವರಾಜ್ ಕುಮಾರ್-ರಾಮ್ ಚರಣ್ ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ

‘‘ನನಗೆ ಶಿವಣ್ಣ ನಟಿಸಿರುವ ‘ದೊರೆ’ ಸಿನಿಮಾ ಹಾಗೂ ಅದರ ಹಾಡುಗಳು ಬಹಳ ಇಷ್ಟ. ಹಾಗಾಗಿ ಅದೇ ಹೆಸರಲ್ಲಿ ಸಿನಿಮಾ ಮಾಡುವ ಯೋಜನೆ ಇದೆ. ಆ ಟೈಟಲ್ ಸಹ ನಾನು ಈಗಾಗಲೇ ನೊಂದಣಿ ಮಾಡಿಸಿದ್ದೇನೆ’ ಎಂದು ಹೇಳಿದರು. ಆ ಮೂಲಕ ಆದಷ್ಟು ಬೇಗ ಶಿವರಾಜ್ ಕುಮಾರ್ ಜೊತೆ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದರು. ಆದರೆ ಶಿವರಾಜ್ ಕುಮಾರ್ ಅವರು, ‘ಸಿನಿಮಾಕ್ಕೆ ‘ದೊರೆ’ ಹೆಸರು ಬೇಡ. ಆ ಸಿನಿಮಾ ಆಗಿ ಹೋಗಿದೆ. ಮತ್ತೆ ಅದೇ ಹೆಸರು ಬೇಡ, ಬೇಕಿದ್ದರೆ ನಾನೇ ಒಂದು ಹೊಸ ಟೈಟಲ್ ಕೊಡುತ್ತೀನಿ. ಆದರೆ ಅದು ಬೇಡ. ಕ್ಲಾಸಿಕ್ ಸಿನಿಮಾಗಳನ್ನು ಮುಟ್ಟುವುದು ಬೇಡ ಎಂದರು.

ಅದೇ ಕಾರ್ಯಕ್ರಮದಲ್ಲಿ ಉಮಾಪತಿ ಶ್ರೀನಿವಾಸ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಶಿವರಾಜ್ ಕುಮಾರ್, ‘ಎರಡು ಬಾರಿ ಉಮಾಪತಿ ಶ್ರೀನಿವಾಸ್ ಅವರನ್ನು ಭೇಟಿ ಮಾಡಿದ್ದೆ. ಹಿಂದೆ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಬೇಕಿತ್ತು ಆದರೆ ಸಾಧ್ಯವಾಗಿರಲಿಲ್ಲ. ನಿಮ್ಮಂಥ ನಿರ್ಮಾಪಕರ ಜೊತೆ ಸಿನಿಮಾ ಮಾಡೋದು ನಮಗೂ ಇಷ್ಟ, ನಮ್ಮ ಕರ್ತವ್ಯ ಅದು. ನೀವು ಯಾವ ಸಿನಿಮಾ ಆದರೂ ಹೇಳಿ ಮಾಡೋಣ. ‘ದೊರೆ’ ಅಂತ ಹೇಳಿದ್ದೀರಿ, ಆದರೆ ಆ ಟೈಟಲ್ ಬೇಡ. ಅದು ಈಗಾಗಲೇ ಬಂದಿದೆ. ಬೇರೆ ಟೈಟಲ್ ನಾನು ಹೇಳಿದ್ದೀನಿ. ಅದು ರಿಜಿಸ್ಟರ್ ಆದಮೇಲೆ ಅವರೇ ಹೇಳ್ತಾರೆ. ಅವರು ಅಷ್ಟು ಪ್ರೀತಿಯಿಂದ ಸಿನಿಮಾ ಮಾಡುವಾಗ ಹೇಳುವಾಗ ನಾನು ಅದನ್ನು ವೇದಿಕೆ ಹೇಳೋಣ ಅಂತ ಹೇಳಿದ್ದೀನಿ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ